Advertisement

ಭಾರತ-ನ್ಯೂಜಿಲ್ಯಾಂಡ್‌ ದ್ವಿತೀಯ ಟೆಸ್ಟ್‌, 4 ವೇಗಿಗಳ ಬೌಲಿಂಗ್‌ ಕಾಂಬಿನೇಶನ್‌?

10:24 AM Feb 29, 2020 | Team Udayavani |

ಕ್ರೈಸ್ಟ್‌ಚರ್ಚ್‌: ಭಾರತ-ನ್ಯೂಜಿಲ್ಯಾಂಡ್‌ ನಡುವಿನ ದ್ವಿತೀಯ ಟೆಸ್ಟ್‌ ಪಂದ್ಯದ ತಾಣವಾದ ಕ್ರೈಸ್ಟ್‌ಚರ್ಚ್‌ನ “ಹ್ಯಾಗ್ಲಿ ಓವಲ್‌’ ಟ್ರ್ಯಾಕ್‌ ಸಂಪೂರ್ಣವಾಗಿ ವೇಗದ ಬೌಲಿಂಗಿಗೆ ನೆರವಾಗುವ ಸಾಧ್ಯತೆ ಇದೆ. ಇದಕ್ಕಾಗಿ ಆತಿಥೇಯ ಕಿವೀಸ್‌ 4 ಮಂದಿ ಸ್ಪೆಷಲಿಸ್ಟ್‌ ವೇಗಿಗಳನ್ನು ಕಣಕ್ಕಿಳಿಸಲು ನಿಧರಿಸಿದೆ. ಭಾರತ ಕೂಡ ಇದೇ ಕಾಂಬಿನೇಶನ್‌ನೊಂದಿಗೆ ಕಣಕ್ಕಿಳಿದೀತೇ ಎಂಬುದೊಂದು ಪ್ರಶ್ನೆ.

Advertisement

ಆಗ ಭಾರತ ತಂಡದಿಂದ ಸ್ಪಿನ್ನರ್‌ ಅಶ್ವಿ‌ನ್‌ ಹೊರಗುಳಿದು, ಈ ಸ್ಥಾನವನ್ನು ಉಮೇಶ್‌ ಯಾದವ್‌ ತುಂಬಬೇಕಾಗುತ್ತದೆ. ಆದರೆ ವೆಲ್ಲಿಂಗ್ಟನ್‌ನಲ್ಲಿ ಅಶ್ವಿ‌ನ್‌ ಬೌಲಿಂಗ್‌ ತೀರಾ ಕಳಪೆಯೇನೂ ಆಗಿರಲಿಲ್ಲ. ಅವರು 3 ವಿಕೆಟ್‌ ಉರುಳಿಸುವಲ್ಲಿ ಯಶಸ್ವಿಯಾಗಿದ್ದರು. ಸಮಸ್ಯೆ ಇರುವುದು ಅವರ ಬ್ಯಾಟಿಂಗಿನಲ್ಲಿ. 2017ರ ಬಳಿಕ ಅಶ್ವಿ‌ನ್‌ ರನ್‌ ಬರಗಾಲ ಅನುಭವಿಸುತ್ತ ಬಂದಿದ್ದಾರೆ.

ಅಶ್ವಿ‌ನ್‌ ಬದಲು ಸ್ಪಿನ್‌ ಬೌಲಿಂಗ್‌ ಆಲ್‌ರೌಂಡರ್‌ ರವೀಂದ್ರ ಜಡೇಜ ಅವರನ್ನು ಆಡಿಸುವ ಕುರಿತೂ ತಂಡದ ಆಡಳಿತ ಮಂಡಳಿ ಯೋಚಿಸುತ್ತಿದೆ.

ಪಟೇಲ್‌ ಬದಲು ವ್ಯಾಗ್ನರ್‌
ಪೇಸ್‌ ಬೌಲರ್‌ ನೀಲ್‌ ವ್ಯಾಗ್ನರ್‌ ನ್ಯೂಜಿಲ್ಯಾಂಡ್‌ ತಂಡವನ್ನು ಕೂಡಿಕೊಂಡಿದ್ದು, 2ನೇ ಟೆಸ್ಟ್‌ ಆಡುವುದು ಖಚಿತ ಎಂಬುದಾಗಿ ಕೋಚ್‌ ಗ್ಯಾರಿ ಸ್ಟೆಡ್‌ ಸುಳಿವು ಕೊಟ್ಟಿದ್ದಾರೆ. ಆಗ ಸ್ಪಿನ್ನರ್‌ ಅಜಾಜ್‌ ಪಟೇಲ್‌ ಹೊರಗುಳಿಯಲಿದ್ದಾರೆ. ಬೌಲ್ಟ್, ಸೌಥಿ, ಜಾಮೀಸನ್‌ ಮತ್ತು ಗ್ರ್ಯಾಂಡ್‌ಹೋಮ್‌ ಉಳಿದ ವೇಗಿಗಳು. ಇವರ ದಾಳಿಯನ್ನು ನಿಭಾಯಿಸಿ ನಿಲ್ಲುವುದು ಭಾರತಕ್ಕೆ ಭಾರೀ ಸಮಸ್ಯೆಯಾಗಬಹುದು. ಸರಣಿಯನ್ನು ಉಳಿಸಿಕೊಳ್ಳಬೇಕಾದರೆ ಕೊಹ್ಲಿ ಪಡೆ ಈ ಪಂದ್ಯವನ್ನು ಗೆಲ್ಲಲೇಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next