Advertisement
ಭಾರತ – ನ್ಯೂಜೀಲ್ಯಾಂಡ್ ನಡುವೆ ಈ ತನಕ ಒಟ್ಟು 101 ಏಕದಿನ ಪಂದ್ಯಗಳು ನಡೆದಿವೆ. ಇವುಗಳಲ್ಲಿ ಭಾರತ 51 ಪಂದ್ಯಗಳನ್ನು ಜಯಿಸಿದೆ; ನ್ಯೂಜೀಲ್ಯಾಂಡ್ 44ರಲ್ಲಿ ಜಯಿಸಿದೆ. 2019ರ ಪ್ರವಾಸದಲ್ಲಿ ಭಾರತ, ನ್ಯೂಜೀಲ್ಯಾಂಡ್‌ನಲ್ಲಿ ಐದು ಏಕದಿನ ಮತ್ತು ಮೂರು ಟಿ-20 ಪಂದ್ಯಗಳನ್ನು ಆಡಲಿದೆ.
Related Articles
Advertisement
3ನೇ ಏಕದಿನ : ಜನವರಿ 28, ಮೌಂಟ್ ಮೌಂಗಾನೂಯಿ (ಬೆಳಗ್ಗೆ 7.30)
4ನೇ ಏಕದಿನ : ಜನವರಿ 31, ಹ್ಯಾಮಿಲ್ಟನ್ (ಬೆಳಗ್ಗೆ 7.30).
5. ಫೆಬ್ರವರಿ 3, ವೆಲಿಂಗ್ಟನ್ (ಬೆಳಗ್ಗೆ 7.30)
ಟಿ-20 ಸರಣಿ ವೇಳಾಪಟ್ಟಿ :
ಮೊದಲ ಟಿ-20 : ಫೆ.6, ವೆಲಿಂಗ್ಟನ್, ಮಧ್ಯಾಹ್ನ 12.30
ಎರಡನೇ ಟಿ-20: ಫೆ.8, ಆಕ್ಲಂಡ್, ಬೆಳಗ್ಗೆ 11.30
ಮೂರನೇ ಟಿ-20 : ಫೆ.10, ಹ್ಯಾಮಿಲ್ಟನ್, ಮಧ್ಯಾಹ್ನ 12.30
ಆಸೀಸ್ ವಿರುದ್ಧದ ಐತಿಹಾಸಿಕ ಟೆಸ್ಟ್ ಸರಣಿ ಜಯಿಸುವಲ್ಲಿ ಬೌಲಿಂಗ್ ನಲ್ಲಿ ಮಿಂಚಿದ್ದ ಜಸ್‌ಪ್ರೀತ್ ಬುಮ್ರಾ ಅವರಿಗೆ ಆಸೀಸ್ ಮತ್ತು ನ್ಯೂಜೀಲ್ಯಾಂಡ್ ವಿರುದ್ಧದ ಏಕದಿನ ಪಂದ್ಯಗಳಿಂದ ಈಗಾಗಲೇ ವಿಶ್ರಾಂತಿ ನೀಡಲಾಗಿದೆ.
ಅಂತಿರುವಾಗ ನ್ಯೂಜಿಲ್ಯಾಂಡ್ ನಲ್ಲಿ ಭಾರತೀಯ ವೇಗದ ದಾಳಿಯ ನೇತೃತ್ವವನ್ನು ಭುವನೇಶ್ವರ ಕುಮಾರ್ ವಹಿಸಲಿದ್ದಾರೆ. ಇವರಿಗೆ ಮೊಹಮ್ಮದ್ ಶಮಿ ಜತೆಗಾರಿಕೆ ನೀಡುತ್ತಾರೆ. ಮೂರನೇ ವೇಗದ ಬೌಲರ್ ಸ್ಥಾನಕ್ಕೆ ಖಲೀಲ್ ಅಹ್ಮದ್, ಮೊಹಮ್ಮದ್ ಸಿರಾಜ್ ಮತ್ತು ವಿಜಯ್ ಶಂಕರ್ ನಡುವೆ ಪೈಪೋಟಿ ಏರ್ಪಡಲಿದೆ.
2019ರ ವಿಶ್ವ ಕಪ್ ಕ್ರಿಕೆಟ್ ಮೇ 30ರಿಂದ ಜು.14 ರವರೆಗೆ ಲಂಡನ್‌ನಲ್ಲಿ ನಡೆಯಲಿದ್ದು ಅದಕ್ಕೆ ಮೊದಲಿನ ಹಾಲಿ ಕಿವೀಸ್ ಪ್ರವಾಸ ಭಾರತಕ್ಕೆ ಆಸೀಸ್ ಬಳಿಕದಲ್ಲಿ ಇನ್ನೊಂದು ಸಾಗರೋತ್ತರ ಸವಾಲಿನ ಸರಣಿ ಎನಿಸಲಿದೆ.
ಭಾರತೀಯ ಏಕದಿನ ತಂಡ ಹೀಗಿದೆ :
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಅಂಬಾಟಿ ರಾಯುಡು, ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ಎಂಎಸ್ ಧೋನಿ, ಕುಲದೀಪ್ ಯಾದವ್, ಯಜುವೇಂದ್ರ ಚಹಾಲ್, ರವೀಂದ್ರ ಜಡೇಜ, ಭುವನೇಶ್ವರ ಕುಮಾರ್, ಮೊಹಮ್ಮದ್ ಸಿರಾಜ್, ಕೆ ಖಲೀಲ್ ಅಹ್ಮದ್, ಮೊಹಮ್ಮದ್ ಶಮಿ, ವಿಜಯ್ ಶಂಕರ್, ಶುಭ್‌ಮನ್ ಗಿಲ್.
ಟಿ-20 ಸರಣಿ ಆಡುವ ಭಾರತೀಯ ತಂಡ ಹೀಗಿದೆ :
ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ರಿಷಬ್ ಪಂತ್, ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ಎಂಎಸ್ ಧೋನಿ, ಕೃಣಾಲ್ ಪಾಂಡ್ಯ, ಕುಲದೀಪ್ ಯಾದವ್, ಯಜುವೇಂದ್ರ ಚಹಾಲ್, ರವೀಂದ್ರ ಜಡೇಜ, ಭುವನೇಶ್ವರ ಕುಮಾರ್, ಸಿದ್ಧಾರ್ಥ ಕೌಲ್, ಕೆ ಖಲೀಲ್ ಅಹ್ಮದ್, ವಿಜಯ್ ಶಂಕರ್, ಶುಭ್‌ಮನ್ ಗಿಲ್.