ಹೊಸದಿಲ್ಲಿ : ವಿಶ್ವದ ನಂಬರ್ ವನ್ ಇಳವೆನಿಲ್ ವಲರಿವನ್ ಅವರನ್ನು ಒಳಗೊಂಡಿರುವ 15 ಸದಸ್ಯರ ಭಾರತದ ಒಲಿಂಪಿಕ್ಸ್ ಶೂಟಿಂಗ್ ತಂಡವನ್ನು ರವಿವಾರ ಎನ್‌ಆರ್‌ಎಐ ಪ್ರಕಟಿಸಿತು. ಕಳೆದ ಹೊಸದಿಲ್ಲಿ ವಿಶ್ವಕಪ್‌ನಲ್ಲಿ ಚಿನ್ನ ಗೆದ್ದು ಎಲ್ಲರ ಗಮನ ಸೆಳೆದ ಚಿಂಕಿ ಯಾದವ್ ಮತ್ತು ಅಂಜುಮ್ ಮೀಸಲು ಯಾದಿಯಲ್ಲಿದ್ದಾರೆ. ಕೋವಿಡ್ ಮುನ್ನೆಚ್ಚರಿಕೆಯ ಕಾರಣದಿಂದ ಪ್ರತಿಯೊಂದು ವಿಭಾಗದಲ್ಲೂ ಇಬ್ಬರು ಮೀಸಲು ಶೂಟರ್‌ಗಳನ್ನು ಸೇರಿಸಿಕೊಳ್ಳಲಾಗಿದೆ.
2018ರ ಜಕಾರ್ತಾ ಏಶ್ಯಾಡ್, ಎಲ್ಲ 4 ವಿಶ್ವಕಪ್ ಹಾಗೂ ಏಶ್ಯನ್ ಚಾಂಪಿಯನ್‌ಶಿಪ್, 2019ರ ಆಯ್ಕೆ ಟ್ರಯಲ್ಸ್ ಸಾಧನೆಯನ್ನು ಮಾನದಂಡ ವಾಗಿರಿಸಿ ತಂಡವನ್ನು ಅಂತಿಮಗೊಳಿಸಲಾಗಿದೆ.
ಪುರುಷರ ತಂಡ: 10 ಮೀ. ಏರ್ ರೈಫಲ್: ದಿವ್ಯಾಂಶ್ ಸಿಂಗ್ ಪನ್ವಾರ್, ದೀಪಕ್ ಕುಮಾರ್. 50 ಮೀ. ರೈಫಲ್ 3 ಪೊಸಿಶನ್: ಸಂಜೀವ್ ರಜಪೂತ್, ಪ್ರತಾಪ್ ಸಿಂಗ್ ತೋಮರ್. 10 ಮೀ. ಏರ್ ಪಿಸ್ತೂಲ್: ಸೌರಭ್ ಚೌಧರಿ, ಅಭಿಷೇಕ್ ವರ್ಮ. ಸ್ಕೀಟ್: ಅಂಗದವೀರ್ ಸಿಂಗ್, ಮೈರಾಜ್ ಅಹ್ಮದ್ ಖಾನ್.
ಇದನ್ನೂ ಓದಿ :ಲಸಿಕೆಗೆ ಉತ್ತಮ ಪ್ರತಿಕ್ರಿಯೆ; ರಾಜ್ಯಕ್ಕೆ ಮತ್ತೆ 15.25 ಲಕ್ಷ ಡೋಸ್ ಲಸಿಕೆ
ವನಿತಾ ತಂಡ: 10 ಮೀ. ಏರ್ ರೈಫಲ್: ಅಪೂರ್ವಿ ಚಂಡೇಲ, ಇಳವೆನಿಲ್ ವಲರಿವನ್.
50 ಮೀ. ರೈಫಲ್ 3 ಪೊಸಿಶನ್: ಅಂಜುಮ್ ಮೌದ್ಗಿಲ್, ತೇಜಸ್ವಿನಿ ಸಾವಂತ್. 10 ಮೀ. ಏರ್ ಪಿಸ್ತೂಲ್: ಮನು ಭಾಕರ್, ಯಶಸ್ವಿನಿ ಸಿಂಗ್. 25 ಮೀ. ನ್ಪೋರ್ಟ್ಸ್ ಪಿಸ್ತೂಲ್: ರಾಹಿ ಸರ್ನೋಬತ್, ಮನು ಭಾಕರ್.
ಮಿಕ್ಸೆಡ್ ತಂಡ: 10 ಮೀ. ಏರ್ ರೈಫಲ್: ದಿವ್ಯಾಂಶ್, ಇಳವೆನಿಲ್, ದೀಪಕ್, ಅಂಜುಮ್. 10 ಮೀ. ಏರ್ ಪಿಸ್ತೂಲ್: ಸೌರಭ್, ಮನು, ಅಭಿಷೇಕ್, ಯಶಸ್ವಿನಿ.