Advertisement

Hamas: ಹಮಾಸ್‌ ದಾಳಿಗೆ ಭಾರತ- ಮಧ್ಯಪ್ರಾಚ್ಯ ಕಾರಿಡಾರ್‌ ಕಾರಣ!- ಜೋ ಬೈಡೆನ್‌

09:50 PM Oct 26, 2023 | Pranav MS |

ವಾಷಿಂಗ್ಟನ್‌: ಇಸ್ರೇಲ್‌ ವಿರುದ್ಧ ಅ.7ರಂದು ಹಮಾಸ್‌ ಉಗ್ರರು ಏಕಾಏಕಿ ದಾಳಿ ನಡೆಸಲು ಉದ್ದೇಶಿತ ಭಾರತ-ಮಧ್ಯಪ್ರಾಚ್ಯ- ಐರೋಪ್ಯ ಒಕ್ಕೂಟ- ಆರ್ಥಿಕ ಕಾರಿಡಾರ್‌ (ಐಎಂಇಇಸಿ) ಕಾರಣವಾಗಿರುವ ಸಾಧ್ಯತೆ ಇದೆ. ಹೀಗೆಂದು ಹೇಳಿರುವುದು ಅಮೆರಿಕ ಅಧ್ಯಕ್ಷ ಜೋ ಬೈಡೆನ್‌.

Advertisement

ಅಮೆರಿಕ ಪ್ರವಾಸದಲ್ಲಿ ಇರುವ ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲ್ಬನೀಸ್‌ ಅವರ ಜತೆಗೆ ವಾಷಿಂಗ್ಟನ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುವ ವೇಳೆ ಬೈಜೆನ್‌ ಈ ಶಂಕೆ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್‌ನಲ್ಲಿ ನವದೆಹಲಿಯಲ್ಲಿ ಆಯೋಜಿಸಲಾಗಿದ್ದ ಜಿ20 ರಾಷ್ಟ್ರಗಳ ಸಮ್ಮೇಳನದಲ್ಲಿ ಚೀನಾ ಕೈಗೊಂಡ ಬೆಲ್ಟ್ ಆ್ಯಂಡ್‌ ರೋಡ್‌ ಇನಿಶಿಯೇಟಿವ್‌ (ಬಿಆರ್‌ಐ)ಗೆ ಪರ್ಯಾಯವಾಗಿ ಈ ಯೋಜನೆಯನ್ನು ಘೋಷಿಸಲಾಗಿತ್ತು.

“ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರು ನಡೆಸಿರುವ ದಾಳಿಗೆ ನವದೆಹಲಿಯಲ್ಲಿ ನಡೆದಿದ್ದ ಜಿ20 ರಾಷ್ಟ್ರಗಳ ಸಮ್ಮೇಳನದಲ್ಲಿ ಐಎಂಇಇಸಿ ಬಗ್ಗೆ ಘೋಷಣೆ ಮಾಡಲಾಗಿತ್ತು. ಹೀಗಾಗಿ, ಉಗ್ರರು ದಾಳಿ ನಡೆಸಲು ಅದೂ ಒಂದು ಕಾರಣವಾಗಿರುವ ಸಾಧ್ಯತೆ ಇದೆ. ನನ್ನ ಹೇಳಿಕೆಗೆ ಸಾಕ್ಷ್ಯಗಳೇನೂ ಇಲ್ಲ. ನನ್ನ ಮನಸ್ಸಿಗೆ ತೋಚಿದ್ದನ್ನು ಹೇಳಿದ್ದೇನೆ. ಇಸ್ರೇಲ್‌ ವಿಚಾರದಲ್ಲಿ ನಾವು ಸಾಧಿಸಿರುವ ಪ್ರಗತಿ ಮತ್ತು ಪ್ರಾದೇಶಿಕ ಏಕೀಕರಣದಲ್ಲಿ ಬಹಳಷ್ಟನ್ನು ಸಾಧಿಸಿದ್ದನ್ನು ತಡೆಯಲಾರದೆ ಈ ಕೃತ್ಯ ನಡೆದಿರುವ ಸಾಧ್ಯತೆಗಳು ಇವೆ’ ಎಂದು ಬೈಡೆನ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next