Advertisement

ಅಸ್ಸಾಂ ನಾಗರಿಕರ ಮೊದಲ ಪಟ್ಟಿ ತಂದ ಆತಂಕ

11:15 AM Jan 02, 2018 | Karthik A |

ಗುವಾಹಟಿ: ಅಸ್ಸಾಂನಲ್ಲಿ ನೆರೆಯ ಬಾಂಗ್ಲಾದೇಶದಿಂದ ಬರುವ ಅಕ್ರಮ ವಲಸಿಗರನ್ನು ತಡೆಯುವ ಉದ್ದೇಶದಿಂದ, ಸುಪ್ರೀಂ ಕೋರ್ಟ್‌ ಅವಗಾಹನೆಯಲ್ಲಿ, ವಿಶೇಷವಾಗಿ ಆ ರಾಜ್ಯಕ್ಕಾಗಿ ತಯಾರಿಸಲಾಗಿರುವ ರಾಷ್ಟ್ರೀಯ ನಾಗರಿಕರ ನೊಂದಣಿಯ (ಎನ್‌ಆರ್‌ಸಿ) ಮೊದಲ ಪಟ್ಟಿ ಹೊರಬಿದ್ದಿದೆ. ನೊಂದಣಿಗಾಗಿ ಅರ್ಜಿ ಸಲ್ಲಿಸಿದ್ದ 3 ಕೋಟಿ 22 ಲಕ್ಷ ನಾಗರಿಕರಲ್ಲಿ 1 ಕೋಟಿ 90 ಲಕ್ಷ ನಾಗರಿಕರ ಹೆಸರುಗಳು ಮಾತ್ರ ಮೊದಲ ಪಟ್ಟಿಯಲ್ಲಿ ಬಂದಿದ್ದು ಜನರ ಆತಂಕಕ್ಕೆ ಕಾರಣವಾಗಿದೆ.

Advertisement

ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ, ಅಸ್ಸಾಂ ರಾಜ್ಯದ ಹಲವಾರು ಕಡೆಗಳಲ್ಲಿರುವ ಸೇವಾ ಕೇಂದ್ರಗಳತ್ತ ಸಾಗರೋಪಾದಿಯಲ್ಲಿ ಹೋದ ಜನತೆ ತಮ್ಮ ನಾಗರಿಕತ್ವವನ್ನು ಪರಿಶೀಲಿಸಿದರು. ಪಟ್ಟಿಯಲ್ಲಿ ಹೆಸರು ಬಾರದಿದ್ದವರು ಆತಂಕಕ್ಕೊಳಗಾದರು. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಭಾರತದ ರಿಜಿಸ್ಟ್ರಾರ್‌ ಶೈಲೇಶ್‌, “ಮೊದಲ ಪಟ್ಟಿಯಲ್ಲಿ ಹೆಸರಿಲ್ಲದವರು ಆತಂಕಪಡಬೇಕಾಗಿಲ್ಲ. ಈಗಾಗಲೇ ಅರ್ಜಿ ಸಲ್ಲಿಸಿರುವ ನಾಗರಿಕರ ಮಾಹಿತಿಯು ಪರಿಶೀಲನೆಯಲ್ಲಿದೆ” ಎಂದಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next