Advertisement

ಭಾರತ-ಮಾಲ್ಡಿವ್ಸ್‌ ಜಂಟಿ ಸಮರಾಭ್ಯಾಸ

10:11 AM Dec 16, 2017 | Team Udayavani |

ಬೆಳಗಾವಿ: ರಾಷ್ಟ್ರ ವಿರೋಧಿ ಹಾಗೂ ಭಯೋತ್ಪಾದನಾ ಚಟುವಟಿಕೆ ತಡೆಯಲು ಬೆಳಗಾವಿಯ ಮರಾಠಾ ಲಘುಪದಾತಿ ದಳದ ಛತ್ರಪತಿ ಶಿವಾಜಿ ಮೈದಾನದಲ್ಲಿ ಶುಕ್ರವಾರದಿಂದ 14 ದಿನಗಳ ಕಾಲ ಭಾರತ-ಮಾಲ್ಡಿವ್ಸ್‌ ದೇಶಗಳ ಜಂಟಿ ಸಮಾರಾಭ್ಯಾಸ ಎಕುವೆರಿನ್‌-2017ಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು. ಜ್ಯುನಿಯರ್‌ ಲೀಡರ್ ವಿಂಗ್‌(ಕಮಾಂಡೋ) ಕೇಂದ್ರದಲ್ಲಿ ಭಾರತ ಹಾ ಗೂ ಮಾಲ್ಡಿವ್ಸ್‌ ದೇಶಗಳ ನಡುವೆ ಇದು 8ನೇ ಜಂಟಿ ಸಮರಾಭ್ಯಾಸ ಆಗಿದ್ದು, ಸಿಕಂದರಾಬಾದ್‌ ಗೋರ್ಖಾ ರೈಫಲ್ಸ್‌ನ 2ನೇ ಬಟಾಲಿಯನ್‌ನೊಂದಿಗೆ ಮಾಲ್ಡಿವ್ಸ್‌ ನ್ಯಾಷನಲ್‌ ಡಿಫೆನ್ಸ್‌ ಫೋರ್ಸ್‌(ಎಂಎನ್‌ಡಿಎಫ್‌) ಅಭ್ಯಾಸ ನಡೆಸಲಿದೆ. ಮೈತ್ರಿ-ಸ್ನೇಹ ಎಂಬ ಅರ್ಥ ಕೊಡುವ ಇಕುವೆರಿನ್‌ ಎಂಬ ಮಾಲ್ಡಿವ್ಸ್‌ ಶಬ್ದವನ್ನು ಈ ಅಭ್ಯಾಸಕ್ಕೆ ಬಳಸಿಕೊಳ್ಳಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next