Advertisement

ಲೆಜೆಂಡ್ಸ್ ಲೀಗ್ ನಲ್ಲಿ ಯೂಸುಫ್ ಪಠಾಣ್ ಅಬ್ಬರ: ಇಂಡಿಯಾ ಮಹಾರಾಜರಿಗೆ ಮಣಿದ ಏಷ್ಯಾ ಲಯನ್ಸ್

10:30 AM Jan 21, 2022 | Team Udayavani |

ಅಲ್ ಅಮೆರತ್: ಲೆಜೆಂಡ್ಸ್ ಲೀಗ್ ಕ್ರಿಕೆಟ್ ಕೂಟಕ್ಕೆ ಶುಕ್ರವಾರ ಚಾಲನೆ ಸಿಕ್ಕಿದೆ. ಒಮಾನ್ ನ ಅಲ್ ಅಮೆರತ್ ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಇಂಡಿಯಾ ಮಹಾರಾಜಾಸ್ ತಂಡವು ಏಷ್ಯಾ ಲಯನ್ಸ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದೆ.

Advertisement

ಮೊದಲು ಬ್ಯಾಟಿಂಗ್ ಮಾಡಿದ ಏಷ್ಯನ್ ಲಯನ್ಸ್ ತಂಡ ಏಳು ವಿಕೆಟ್ ನಷ್ಟಕ್ಕೆ 175 ರನ್ ಗಳಿಸಿತು. ತಂಡಕ್ಕೆ ಉಪುಲ್ ತರಂಗ ಉತ್ತಮ ಆರಂಭ ನೀಡಿದರು. ತರಂಗ 66 ರನ್ ಗಳಿಸಿದರೆ, ನಾಯಕ ಮಿಸ್ಭಾ ಉಲ್ ಹಕ್ 44 ರನ್ ಗಳಿಸಿದರು. ಭಾರತದ ಪರ ಮನ್ಪ್ರೀತ್ ಗೋನಿ ಮೂರು ವಿಕೆಟ್ ಕಿತ್ತರೆ, ಇರ್ಫಾನ್ ಪಠಾನ್ ಎರಡು ವಿಕೆಟ್ ಪಡೆದರು. ಬಿನ್ನಿ ಮತ್ತು ಮುನಾಫ್ ಪಟೇಲ್ ತಲಾ ಒಂದು ವಿಕೆಟ್ ಪಡೆದರು.

ಗುರಿ ಬೆನ್ನತ್ತಿದ ಇಂಡಿಯಾ ಮಹಾರಾಜಾಸ್ ಗೆ ಉತ್ತಮ ಆರಂಭ ಸಿಗಲಿಲ್ಲ. ಒಂದು ಹಂತದಲ್ಲಿ 34 ರನ್ ಗೆ ಮೂರು ವಿಕೆಟ್ ಕಳೆದುಕೊಂಡಿದ್ದ ತಂಡಕ್ಕೆ ನಾಯಕ ಕೈಫ್ ಮತ್ತು ಯೂಸುಫ್ ಪಠಾಣ್ ನೆರವಾದರು. ಅದರಲ್ಲೂ ಭರ್ಜರಿಯಾಗಿ ಬ್ಯಾಟ್ ಬೀಸಿದ ಯೂಸುಫ್ ಕೇವಲ 40 ಎಸೆತದಲ್ಲಿ 80 ರನ್ ಗಳಿಸಿದರು. ಐದು ಸಿಕ್ಸರ್ ಮತ್ತು 9 ಬೌಂಡರಿ ಬಾರಿಸಿದ ಯೂಸುಫ್ ರನ್ ಔಟಾದರು.

ಇದನ್ನೂ ಓದಿ:2022 ಟಿ20 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಭಾರತಕ್ಕೆ ಮೊದಲ ಎದುರಾಳಿ ಪಾಕಿಸ್ಥಾನ!

ನಾಯಕ ಕೈಫ್ ಅಜೇಯ 42 ರನ್ ಗಳಿಸಿದರೆ, ಇರ್ಫಾನ್ ಪಠಾಣ್ 21 ರನ್ ಗಳಿಸಿ ಅಜೇಯರಾಗುಳಿದರು. ಇಂಡಿಯಾ ಮಹಾರಾಜಾಸ್ ತಂಡ 19.1 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ ಗುರಿ ತಲುಪಿ ಜಯ ಸಾಧಿಸಿತು. ಲಯನ್ಸ್ ಪರ ಅಖ್ತರ್ ಮತ್ತು ಉಮರ್ ಗುಲ್ ತಲಾ ಒಂದು ವಿಕೆಟ್ ಕಿತ್ತರು.

Advertisement

ತಂಡಗಳು

ಇಂಡಿಯಾ ಮಹಾರಾಜಾಸ್: ನಮನ್ ಓಜಾ (ವಿ.ಕೀ), ಎಸ್ ಬದ್ರಿನಾಥ್, ಹೇಮಂಗ್ ಬದಾನಿ, ವೇಣುಗೋಪಾಲ್ ರಾವ್, ಮೊಹಮ್ಮದ್ ಕೈಫ್ (ನಾ), ಯೂಸುಫ್ ಪಠಾಣ್, ಸ್ಟುವರ್ಟ್ ಬಿನ್ನಿ, ಇರ್ಫಾನ್ ಪಠಾಣ್, ಪ್ರಗ್ಯಾನ್ ಓಜಾ, ಮನ್‌ಪ್ರೀತ್ ಗೋನಿ, ಮುನಾಫ್ ಪಟೇಲ್

ಏಷ್ಯಾ ಲಯನ್ಸ್: ಉಪುಲ್ ತರಂಗ, ತಿಲಕರತ್ನೆ ದಿಲ್ಶನ್, ಕಮ್ರಾನ್ ಅಕ್ಮಲ್ (ವಿ.ಕೀ), ಮೊಹಮ್ಮದ್ ಯೂಸುಫ್, ಮಿಸ್ಬಾ-ಉಲ್-ಹಕ್ (ನಾ), ಅಜರ್ ಮಹಮೂದ್, ಮೊಹಮ್ಮದ್ ಹಫೀಜ್, ನುವಾನ್ ಕುಲಶೇಖರ, ಶೋಯೆಬ್ ಅಖ್ತರ್, ಮುತ್ತಯ್ಯ ಮುರಳೀಧರನ್, ಉಮರ್ ಗುಲ್.

Advertisement

Udayavani is now on Telegram. Click here to join our channel and stay updated with the latest news.

Next