Advertisement
ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ 7 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಪ್ರಧಾನಿಗೆ ಟ್ವಿಟರ್‌ನಲ್ಲಿ ಅಭಿನಂದನೆ ಸಲ್ಲಿಸಿರುವ ಅವರು, ಸರ್ಕಾರದ ಸಾಧನೆಗಳ ಬಗ್ಗೆ ಸರಣಿ ಟ್ವೀಟ್ ಮಾಡಿದ್ದಾರೆ.
Related Articles
“”ಕೊರೊನಾ ಕಾಲಘಟ್ಟದಲ್ಲಿ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು, ಸಮಾಜ ಸೇವೆಗೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ, ವಿಪಕ್ಷಗಳ ಯಾವುದೇ ನಾಯಕ ಹಾಗೂ ಕಾರ್ಯಕರ್ತ ಇಂಥ ಸೇವೆಯಲ್ಲಿ ತೊಡಗಿದ್ದನ್ನು ನಾವು ನೋಡಿಲ್ಲ. ಬಹುಶಃ ಅವರೆಲ್ಲರೂ ಕ್ವಾರಂಟೈನ್‌ಗೆ ಒಳಗಾಗಿರಬಹುದು” ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಟೀಕೆ ಮಾಡಿದ್ದಾರೆ. ಕೇಂದ್ರದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಏಳು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿಜೆಪಿ ಕಾರ್ಯಕರ್ತರೊಂದಿಗೆ ವರ್ಚುವಲ್ ಸಭೆ ನಡೆಸಿದ ಅವರು, “”ಬಿಜೆಪಿ ನಾಯಕರು, ಕಾರ್ಯಕರ್ತರು, ಇಂಥ ಸಂಕಷ್ಟದ ಸಂದರ್ಭದಲ್ಲಿ ಜನರ ಜೊತೆಗೆ ನಿಂತಿದ್ದಾರೆ. ಸದ್ಯದಲ್ಲೇ, ಕೇಂದ್ರದ ಒಬ್ಬೊಬ್ಬ ಸಚಿವರೂ ತಲಾ ಎರಡು ಹಳ್ಳಿಗಳಲ್ಲಿ ಕೊರೊನಾ ಸೇವೆ ಕೈಗೊಳ್ಳಲಿದ್ದಾರೆ. ಬಿಜೆಪಿಯು ಇಂಥ ಸೇವೆ ನೀಡುತ್ತಿದ್ದರೆ, ವಿಪಕ್ಷಗಳ ನಾಯಕರು ಕೇವಲ ಟಿವಿಯಲ್ಲಿ ಮಾತ್ರ ಜನರಿಗೆ ದರುಶನ ನೀಡುತ್ತಿದ್ದಾರೆ” ಎಂದು ಹೇಳಿದ್ದಾರೆ. ಈ ಸಂಕಷ್ಟದ ಕಾಲದಲ್ಲೂ ಪ್ರತಿಪಕ್ಷಗಳು ದೇಶವನ್ನು ಧೃತಿಗೆಡಿಸುವ ಕೆಲಸ ಮಾಡುತ್ತಿವೆ. ತಮ್ಮ ಹೊಣೆಗಾರಿಕೆಯನ್ನು ಮರೆತಿರುವ ಇಂಥವರು ಮಾಡುತ್ತಿರುವ ಅಡೆ ತಡೆಗಳಿಗೆ ಜಗ್ಗದೇ ನೀವು ಕೆಲಸ ಮಾಡಿ ಎಂದೂ ಕಾರ್ಯಕರ್ತರಿಗೆ ನಡ್ಡಾ ಕರೆ ನೀಡಿದ್ದಾರೆ.
Advertisement
ಕಾಂಗ್ರೆಸ್ ನಿಂದ “ಬ್ಲಿಂಡರ್ ಗಳ ಚಾರ್ಜ್‌ಶೀಟ್’ ಬಿಡುಗಡೆಕೇಂದ್ರದ ಮೋದಿ ಸರ್ಕಾರಕ್ಕೆ 7 ವರ್ಷ ತುಂಬಿದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ಭಾನುವಾರ “ಸರ್ಕಾರ ಮಾಡಿರುವ ಬ್ಲಿಂಡರ್ ಗಳ 7 ಅಂಶಗಳ ಆರೋಪಪಟ್ಟಿ’ಯನ್ನು ಬಿಡುಗಡೆ ಮಾಡಿದೆ. ಆರ್ಥಿಕತೆ ಕುಸಿತ, ನಿರುದ್ಯೋಗ ಹೆಚ್ಚಳ, ಹಣದುಬ್ಬರ, ಕೊರೊನಾ ನಿರ್ವಹಣೆಯ ವೈಫಲ್ಯ ಸೇರಿ ಹಲವು ವಿಚಾರಗಳನ್ನು ಪ್ರಸ್ತಾಪಿಸಲಾಗಿದೆ. ಮೋದಿ ಆಡಳಿತವು ದೇಶಕ್ಕೆ ಅಪಾಯಕಾರಿಯಾಗಿದ್ದು, ಸರ್ಕಾರ ಪ್ರತಿ ಹಂತದಲ್ಲೂ ಜನರ ನಂಬಿಕೆಗೆ ದ್ರೋಹ ಮಾಡಿದೆ. ಅಳತೆಗೆ ಸಿಗದ ನೋವು, ಮೀರಿಸಲಸಾಧ್ಯವಾದ ನಾಶ, ಗ್ರಹಿಕೆಗೆ ಸಿಗದ ವೇದನೆಯನ್ನು ಜನರಿಗೆ ನೀಡಿರುವುದೇ ಈ 7 ವರ್ಷಗಳ ವಾಸ್ತವ ಎಂದೂ ಕಾಂಗ್ರೆಸ್ ಹೇಳಿದೆ.