ಚೆನ್ನೈ: ನಾಯಕ ಜೋ ರೂಟ್ ಭರ್ಜರಿ ದ್ವಿಶತಕದ ನೆರವಿನಿಂದ ಎರಡನೇ ದಿನದಾಟದ ಅಂತ್ಯಕ್ಕೆ ಎಂಟು ವಿಕೆಟ್ ನಷ್ಟಕ್ಕೆ 555 ರನ್ ಗಳಿಸಿದ್ದ ಇಂಗ್ಲೆಂಡ್ ತಂಡ ಇಂದು 578 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿದೆ.
ಡೊಮಿನಿಕ್ ಬೆಸ್ 34 ರನ್ ಗಳಿಸಿ ಬುಮ್ರಾ ಗೆ ವಿಕೆಟ್ ಒಪ್ಪಿಸಿದರೆ, ಆ್ಯಂಡರ್ಸನ್ ವಿಕೆಟ್ ಅಶ್ವಿನ್ ಪಾಲಾಯಿತು. ಭಾರತದ ಪರ ಬುಮ್ರಾ ಮತ್ತು ಆಶ್ವಿನ್ ತಲಾ ಮೂರು ವಿಕೆಟ್ ಪಡೆದರೆ, ಇಶಾಂತ್ ಮತ್ತು ನದೀಂ ತಲಾ ಎರಡು ವಿಕೆಟ್ ಪಡೆದರು.
ಇದನ್ನೂ ಓದಿ:ಐಕಳ ಕಂಬಳ ಕರೆಯಲ್ಲಿ ಬೋಳದಗುತ್ತು ರಾಕೆಟ್ ಬೊಲ್ಲ- ಧೋನಿ ಕೋಣಗಳ ದಾಖಲೆ ಓಟ
ಆರಂಭಿಕ ಆಘಾತ: ಬೃಹತ್ ಮೊತ್ತದ ಬೆನ್ನು ಹತ್ತಲು ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಆರಂಭಿಕ ಆಘಾತ ಅನುಭವಿಸಿತು. ರೋಹಿತ್ ಶರ್ಮಾ ಕೇವಲ ಆರು ರನ್ ಗಳಿಸಿ ಬಟ್ಲರ್ ಗೆ ಕ್ಯಾಚ್ ನೀಡಿದರು. ಉತ್ತಮ ಬ್ಯಾಟಿಂಗ್ ಮಾಡುತ್ತಿದ್ದ ಶುಭ್ಮನ್ ಗಿಲ್ ಕೂಡಾ 29 ರನ್ ಗಳಿಸಿ ಔಟಾದರು. ಈ ಎರಡೂ ವಿಕೆಟ್ ಆರ್ಚರ್ ಪಾಲಾಯಿತು.
9.2 ಓವರ್ ಗಳ ಆಟದ ಬಳಿಕ ತಂಡ ಎರಡು ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿದೆ. ಇನ್ನೂ 534 ರನ್ ಹಿನ್ನಡೆಯಲ್ಲಿದೆ.