Advertisement
ಅಂತಿಮ ಓವರ್, 12 ರನ್ಅಂತಿಮ ಓವರಿನಲ್ಲಿ ಭುವನೇಶ್ವರ್ ಕುಮಾರ್ ಹಿಂದಿನಂತೆ ಬಿಗಿ ದಾಳಿ ಸಂಘಟಿಸಿದ್ದೇ ಆದರೆ ಭಾರತಕ್ಕೆ ಗೆಲುವು ಅಸಾಧ್ಯವೇನೂ ಆಗಿರಲಿಲ್ಲ. ಮೊದಲ 3 ಓವರ್‌ಗಳಲ್ಲಿ ಕೇವಲ 7 ರನ್ ನೀಡಿದ್ದ ಭುವಿ, ಪಂದ್ಯದ 20ನೇ ಓವರಿ ನಲ್ಲಿ ದುಬಾರಿಯಾದರು. ಈ ಓವರಿನಲ್ಲಿ ಇಂಗ್ಲೆಂಡ್ ಜಯಕ್ಕೆ 12 ರನ್ ಅಗತ್ಯವಿತ್ತು. ಅಲೆಕ್ಸ್ ಹೇಲ್ಸ್ ಮೊದಲೆರಡು ಎಸೆತಗಳಲ್ಲಿ 10 ರನ್ ದೋಚಿದರು (6, 4). ಮುಂದಿನೆರಡು ಎಸೆತಗಳಲ್ಲಿ ಒಂದೊಂದು ರನ್ ಬಂತು. ಮಾರ್ಗನ್ ಪಡೆ ವಿಜಯೋತ್ಸವ ಆಚರಿಸಿತು. 4ನೇ ಕ್ರಮಾಂಕದಲ್ಲಿ ಆಡಲಿಳಿದ ಹೇಲ್ಸ್ ಅಜೇಯ 58 ರನ್ ಬಾರಿಸಿ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು (41 ಎಸೆತ, 4 ಬೌಂಡರಿ, 3 ಸಿಕ್ಸರ್).
ಸಂಕ್ಷಿಪ್ತ ಸ್ಕೋರ್: ಭಾರತ-5 ವಿಕೆಟಿಗೆ 148 (ಕೊಹ್ಲಿ 47, ಧೋನಿ ಔಟಾಗದೆ 32, ರೈನಾ 27, ಪ್ಲಂಕೆಟ್ 17ಕ್ಕೆ 1, ವಿಲ್ಲಿ 18ಕ್ಕೆ 1). ಇಂಗ್ಲೆಂಡ್-19.4 ಓವರ್‌ಗಳಲ್ಲಿ 5 ವಿಕೆಟಿಗೆ 149 (ಹೇಲ್ಸ್ ಔಟಾಗದೆ 58, ಬೇರ್‌ಸ್ಟೊ 28, ಮಾರ್ಗನ್ 17, ಉಮೇಶ್ ಯಾದವ್ 36ಕ್ಕೆ 2). ಪಂದ್ಯಶ್ರೇಷ್ಠ: ಅಲೆಕ್ಸ್ ಹೇಲ್ಸ್.