Advertisement
ಇಂಗ್ಲೆಂಡ್ ಬೃಹತ್ ರನ್ ಬೆನ್ನಟ್ಟಿದ ಭಾರತೀಯರುಆಂಗ್ಲರ ಬೆಂಕಿ ದಾಳಿಗೆ ಸಿಲುಕಿ 50 ಓವರ್‌ಗೆ 236ರನ್‌ಗಳಿಸಿ ಶರಣಾದರು. ಭಾರತದ ಪರ ರೈನಾ (46ರನ್)ಗಳಿಸಿದ್ದೇ ವೈಯಕ್ತಿಕ ಗರಿಷ್ಠ. ಇದಕ್ಕೂ ಮೊದಲುಬ್ಯಾಟಿಂಗ್ ಮಾಡಿದ್ದ ಇಂಗ್ಲೆಂಡ್ ಜೋ ರೂಟ್ (113ರನ್) ಅಜೇಯ ಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 322 ರನ್ ಪೇರಿಸಿತ್ತು.
ಪಂದ್ಯದಲ್ಲಿ ಧೋನಿ ವಿಶಿಷ್ಟ ದಾಖಲೆಯೊಂದನ್ನುನಿರ್ಮಿಸಿದರು. ಏಕದಿನದಲ್ಲಿ 300 ಕ್ಯಾಚ್ ಮಾಡಿದ ಭಾರತದ ಮೊದಲ ಹಾಗೂ ವಿಶ್ವದ 4ನೇ ಕೀಪರ್ ಎನಿಸಿದರು. ಉಳಿದ ಮೂವರೆಂದರೆ ಗಿಲ್‌ಕ್ರಿಸ್ಟ್ (417), ಬೌಷರ್ (403) ಮತ್ತು ಸಂಗಕ್ಕರ (402). ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್ 50 ಓವರ್‌ಗೆ 322/7
(ರೂಟ್ 113, ಮೊರ್ಗನ್ 53, ಕುಲದೀಪ್ 68ಕ್ಕೆ3), ಭಾರತ 50 ಓವರ್‌ಗೆ 236 ಆಲೌಟ್ (ರೈನಾ 46, ಕೊಹ್ಲಿ 45, ಫ್ಲಂಕೆಟ್ 46ಕ್ಕೆ4)