Advertisement

ಕೋವಿಡ್ ಸೋಂಕಿನಲ್ಲಿ ಮತ್ತೆ ಏರಿಕೆ : ಕಳೆದ 24 ಗಂಟೆಯಲ್ಲಿ 39,070 ಹೊಸ ಕೋವಿಡ್ ಸೋಂಕು ಪತ್ತೆ

11:20 AM Aug 08, 2021 | Team Udayavani |

ನವ ದೆಹಲಿ : ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 39,070 ಕೋವಿಡ್ 19 ಪ್ರಕರಣಗಳು ವರದಿಯಾಗಿದ್ದು, 491 ಮಂದಿ ಸಾವನ್ನಪ್ಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಆದಿತ್ಯವಾರ (ಆಗಸ್ಟ್,  08) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.

Advertisement

ದೇಶದಲ್ಲಿನ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 4,06,822ಕ್ಕೆ ಇಳಿಕೆಯಾಗಿದೆ. ಕಳೆದ 24ಗಂಟೆಗಳಲ್ಲಿ 491 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದ್ದು, ಇದರೊಂದಿಗೆ ದೇಶದಲ್ಲಿ ಕೋವಿಡ್ ನಿಂದ ಸಾವನ್ನಪ್ಪಿರುವವರ ಸಂಖ್ಯೆ 4,27, 862 ಕ್ಕೆ ಏರಿಕೆಯಾಗಿದೆ.

 ಇದನ್ನೂ ಓದಿ :   ಸರ್ಕಾರಿ ಕಾರ್ಯಕ್ರಮ ನಿರೂಪಕರು, ಗಾಯಕರ ಬದಲಾವಣೆಗೆ ಒತ್ತಾಯಿಸಿ ಸಿಎಂ ಮನೆ ಮುಂದೆ ಪ್ರತಿಭಟನೆ

ಕಳೆದ 24 ಗಂಟೆಯಲ್ಲಿ 40,017 ಮಂದಿ ಕೋವಿಡ್ ನಿಂದ ಚೇತರಿಸಿಕೊಂಡಿದ್ದಾರೆ. ದೇಶಾದ್ಯಂತ ಕೋವಿಡ್ ಪ್ರಕರಣಗಳ ಸಂಖ್ಯೆ ಒಟ್ಟು 3,19,34,455, ಕ್ಕೆ ಏರಿಕೆಯಾಗಿದೆ.

ಕಳೆದ 42 ದಿನಗಳಲ್ಲಿ 50,000ಕ್ಕಿಂತ ಕಡಿಮೆ ಪ್ರಮಾಣದ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ವಾರದ ಪಾಸಿಟಿವಿಟಿ ದರ 2.39ರಷ್ಟಿದ್ದು, ದಿನದ ಪಾಸಿಟಿವಿಟಿ ದರ ಶೇ.2.27ರಷ್ಟಿದೆ ಎಂದು ವರದಿ ತಿಳಿಸಿದೆ.

Advertisement

ಇನ್ನು, ಭಾರತದಲ್ಲಿ ಕೋವಿಡ್ -19 ಲಸಿಕೆ ಅಭಿಯಾನದಲ್ಲಿ ಒಟ್ಟು 50.68 ಕೋಟಿ ಮೀರಿದೆ. ಕಳೆದ 24 ಗಂಟೆಗಳಲ್ಲಿ ಒಟ್ಟು 55,91,657 ಲಸಿಕೆ ಡೋಸ್‌ ಗಳನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

 ಇದನ್ನೂ ಓದಿ :   ಬಿಗ್ ಬಾಸ್ : ಪ್ರಶಾಂತ್ ಸಂಬರಗಿ- ವೈಷ್ಣವಿ ಗೌಡ ಔಟ್ : ಇರುವ ಮೂವರಲ್ಲಿ ಗೆಲ್ಲೋರ್‍ಯಾರು..?

Advertisement

Udayavani is now on Telegram. Click here to join our channel and stay updated with the latest news.

Next