Advertisement

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 18,862 ಕೋವಿಡ್ ಪ್ರಕರಣ ಪತ್ತೆ, ಸಕ್ರಿಯ ಪ್ರಕರಣ ಇಳಿಕೆ

11:13 AM Oct 15, 2021 | Team Udayavani |

ನವದೆಹಲಿ: ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 16,862 ಕೋವಿಡ್ 19 ಸೋಂಕು ಪ್ರಕರಣ ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿನ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 3,40,37,592ಕ್ಕೆ ತಲುಪಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ(ಅಕ್ಟೋಬರ್ 15) ಬಿಡುಗಡೆಗೊಳಿಸಿರುವ ಅಂಕಿಅಂಶದಲ್ಲಿ ತಿಳಿಸಿದೆ.

Advertisement

ಇದನ್ನೂ ಓದಿ:ಗಂಗಾವತಿ : ವೈಭವದಿಂದ ಜರುಗಿದ ಹೇಮಗುಡ್ಡದ ಅಂಬಾರಿ ಮೆರವಣಿಗೆ

ದೇಶದಲ್ಲಿನ ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆ 2,03,678ಕ್ಕೆ ಇಳಿಕೆಯಾಗಿದ್ದು, ಇದು ಕಳೆದ 216 ದಿನಗಳಲ್ಲಿಯೇ ಅತೀ ಕನಿಷ್ಠ ಸಂಖ್ಯೆಯಾಗಿದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಕಳೆದ 24ಗಂಟೆಗಳಲ್ಲಿ 379 ಮಂದಿ ಸಾವನ್ನಪ್ಪಿದ್ದು, ಈವರೆಗೆ ದೇಶಾದ್ಯಂತ ಕೋವಿಡ್ ನಿಂದ ಸಾವನ್ನಪ್ಪಿರುವವರ ಒಟ್ಟು ಸಂಖ್ಯೆ 4,51,814ಕ್ಕೆ ಏರಿಕೆಯಾಗಿದೆ. ಕಳೆದ 21ದಿನಗಳಿಂದ 30,000ಕ್ಕಿಂತ ಕಡಿಮೆ ಪ್ರಮಾಣದಲ್ಲಿ ಕೋವಿಡ್ ಪ್ರಕರಣ ವರದಿಯಾಗುತ್ತಿದೆ.

ಭಾರತದಲ್ಲಿ ಕೋವಿಡ್ 19 ಸೋಂಕು ಚೇತರಿಕೆ ಪ್ರಮಾಣ ಶೇ.98.07ಕ್ಕೆ ಏರಿಕೆಯಾಗಿದ್ದು, ಇದು 2020ರ ಮಾರ್ಚ್ ನಂತರದ ಗರಿಷ್ಠ ಹೆಚ್ಚಳದ ಪ್ರಮಾಣದ್ದಾಗಿದೆ ಎಂದು ಸಚಿವಾಲಯದ ಅಂಕಿಅಂಶದಲ್ಲಿ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next