Advertisement
ಹೊಸ ಕೋವಿಡ್ ಪ್ರಕರಣಗಳು ಮತ್ತು ಸಾವುಗಳ ಸಂಖ್ಯೆ ಕೇವಲ 4.8 ಮಿಲಿಯನ್ ಹೊಸ ಪ್ರಕರಣಗಳೊಂದಿಗೆ ಕಡಿಮೆಯಾಗುತ್ತಲೇ ಇದೆ ಮತ್ತು ಕಳೆದ ವಾರದಲ್ಲಿ ಜಾಗತಿಕವಾಗಿ 86,000 ಹೊಸ ಸಾವುಗಳು ವರದಿಯಾಗಿವೆ, ಹಿಂದಿನ ವಾರಕ್ಕೆ ಹೋಲಿಸಿದರೆ ಕ್ರಮವಾಗಿ ಶೇಕಡಾ 12 ಮತ್ತು 5 ರಷ್ಟು ಕಡಿಮೆಯಾಗಿದೆ ಎಂದು ವೀಕ್ಲಿ ಕೋವಿಡ್ 19 ಎಪಿಡೆಮಿಲಾಜಿಕಲ್ ಅಪ್ಡೇಟ್ ತಿಳಿಸಿದೆ.
Related Articles
Advertisement
ಸಾವಿನ ಪ್ರಮಾಣವೂ ಕೂಡ ಕಳೆದ ವಾರದಲ್ಲಿ ಭಾರತದಿಂದ ಅತಿ ಹೆಚ್ಚು ವರದಿಯಾಗಿವೆ. ಕಳೆದ ಒಂದು ವಾರದಲ್ಲಿ 27,922 ಮಂದಿ ಕೋವಿಡ್ ನಿಂದ ಸಾವನ್ನಪ್ಪಿದರೇ(100 000 ಕ್ಕೆ 2.0 ಸಾವುಗಳು; ಹಿಂದಿನ ವಾರಕ್ಕಿಂತ 4 ಶೇಕಡಾ ಹೆಚ್ಚಳ), ನೇಪಾಳದಲ್ಲಿ 1,224 ಮಂದಿ ಕೋವಿಡ್ ನಿಂದ ಮೃತ ಪಟ್ಟಿದ್ದಾರೆ(100 000 ಕ್ಕೆ 4.2 ಸಾವುಗಳು; 266 ಶೇಕಡಾ ಹೆಚ್ಚಳ). ಇಂಡೋನೇಷ್ಯಾದಲ್ಲಿ 1,125 ಹೊಸ ಸಾವುಗಳು (100,000 ಕ್ಕೆ 0.4 ಹೊಸ ಸಾವುಗಳು; ಹಿಂದಿನ ವಾರಕ್ಕಿಂತ ಶೇಕಡಾ 5 ರಷ್ಟು ಇಳಿಕೆ) ದಾಖಲಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.
ಇದನ್ನೂ ಓದಿ : ಆಮ್ಲಜನಕ ಸೌಲಭ್ಯವುಳ್ಳ ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಗೆ ಮುಖ್ಯಮಂತ್ರಿ ಚಾಲನೆ