ನವದೆಹಲಿ: ಭಾರತ ಲಾಕ್ ಡೌನ್ ಆಗಿ ಒಂದು ದಿನ ಕಳೆದಿದೆ. ಹಾಲು, ತರಕಾರಿ, ದಿನಸಿ ವಸ್ತುಗಳು, ಮೆಡಿಕಲ್ ಶಾಫ್ ಮುಂತಾದ ಅಗತ್ಯ ಸೇವೆಗಳು ಎಂದಿನಂತೆ ಕಾರ್ಯನಿರ್ವಹಿಸಿದ್ದು, ಕೆಲವೊಂದು ಕಡೆಗಳಲ್ಲಿ ನೂಕುನುಗ್ಗಲು, ಪೊಲೀಸರು ಕಾರ್ಯಚರಣೆಗಳಿದದ್ದು ಹೊರತುಪಡಿಸಿದರೆ ಬಹುತೇಕ ರಾಜ್ಯಗಳು ಅಕ್ಷರಶಃ ಸ್ತಬ್ಧವಾಗಿದ್ದವು.
ಭಾರತದಲ್ಲಿ ಬುಧವಾರ ಕೋವಿಡ್-19 ವೈರಸ್ ನ 101 ಪ್ರಕರಣಗಳು ದಾಖಲಾಗಿವೆ. ಹಾಗಾಗಿ ಒಟ್ಟಾರೆ ವೈರಾಣು ಪೀಡಿತರ ಪ್ರಮಾಣ 627ಕ್ಕೆ ಜಿಗಿದಿದೆ. ಮಾತ್ರವಲ್ಲದೆ ಸಾವನ್ನಪ್ಪಿದವರ ಪ್ರಮಾಣ ಕೂಡ 12ಕ್ಕೆ ಏರಿಕೆಯಾಗಿದೆ.
ಜಗತ್ತಿನಾದ್ಯಂತ ಸೋಂಕು ಪೀಡಿತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿದ್ದು 181 ದೇಶಗಳಲ್ಲಿ 427,940 ಪ್ರಕರಣಗಳು ದಾಖಲಾಗಿವೆ. ವಿಶ್ವದಾದ್ಯಂತ ಸಾವಿನ ಪ್ರಮಾಣ ಕೂಡ ಏರಿಕೆಯಾಗಿದ್ದು 19,246ಕ್ಕೆ ತಲುಪಿದೆ.
ಭಾರತದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕೋವಿಡ್ 19 ತಡೆಗಟ್ಟುವ ನಿಟ್ಟಿನಲ್ಲಿ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದು, 21 ದಿನಗಳ ಲಾಕ್ ಡೌನ್ ಅವಧಿಯಲ್ಲಿ ಅಗತ್ಯವಸ್ತುಗಳ ಪೂರೈಕೆಗೆ ಧಕ್ಕೆಯಾಗದಂತೆ ಜಾಗೃತೆ ವಹಿಸಿವೆ.
ಪ್ರತಿಯೊಂದು ರಸ್ತೆಗಳು ಕೂಡ ಬಿಕೋ ಅನ್ನುತ್ತಿದ್ದು, ಲಾಕ್ ಡೌನ್ ನಿಯಮ ಉಲ್ಲಂಘಿಸಿದವರ ಮೇಲೆ ಪೊಲೀಸರು ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ.
ಭಾರತ ಸರ್ಕಾರ ಇರಾನ್ ನಲ್ಲಿದ್ದ 277 ಭಾರತೀಯರನ್ನು ಕರೆತಂದಿದ್ದು ರಾಜಸ್ತಾನದ ಜೋಧ್ ಪುರದಲ್ಲಿ ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿದೆ.