ನವದೆಹಲಿ: ಭಾರತ ಮತ್ತು ಮಾಲ್ಡೀವ್ಸ್ ನಡುವಿನ ರಾಜತಾಂತ್ರಿಕ ಸಂಬಂಧಗಳನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಆರು ಒಪ್ಪಂದಗಳನ್ನು ಮಾಡಿಕೊಂಡಿದೆ.
ಜೊತೆಗೆ, ಭಾರತದ ಪ್ರಧಾನಿ ಮೋದಿ, ಮಾಲ್ಡೀವ್ಸ್‌ನಲ್ಲಿ ನಡೆಯುತ್ತಿರುವ ಕೆಲವು ಮೂಲಸೌಕರ್ಯಗಳ ಕಾಮಗಾರಿಗಳನ್ನು ಪೂರ್ಣಗೊಳಿಸುವುದಕ್ಕಾಗಿ 784 ಕೋಟಿ ರೂ. ಸಹಾಯ ಘೋಷಿಸಿದ್ದಾರೆ.
ಸದ್ಯಕ್ಕೆ ಭಾರತ ಪ್ರವಾಸದಲ್ಲಿರುವ ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಜತೆಗೆ ಪ್ರಧಾನಿ ಮೋದಿಯವರು ಹಲವು ಸುತ್ತಿನ ಮಾತುಕತೆ ನಡೆಸಿದರು. ಆ ಮಾತುಕತೆಯ ಫಲಶ್ರುತಿಯಿಂದಾಗಿ ಉಭಯ ದೇಶಗಳ ನಡುವೆ ಒಪ್ಪಂದ ಏರ್ಪಟ್ಟಿದೆ.
ಇದನ್ನೂ ಓದಿ: 60 ಕೋಟಿ ಯುಪಿಐ ವ್ಯವಹಾರ: ಪ್ರಧಾನಿ ಮೋದಿ ಸಂತಸ
ಈಗ ಕೈಗೊಳ್ಳಲಾಗಿರುವ ಆರು ಒಪ್ಪಂದಗಳಲ್ಲಿ ಮಾಲ್ಡೀವ್ಸ್ ಭದ್ರತಾ ಪಡೆಗಳಿಗೆ 24 ಸೇನಾ ವಾಹನಗಳು, ಒಂದು ಸಮರ ನೌಕೆಯನ್ನು ನೀಡಲು ಭಾರತ ಒಪ್ಪಿಗೆ ನೀಡಿದೆ. ಜೊತೆಗೆ, ಆ ದೇಶದಲ್ಲಿರುವ 61 ದ್ವೀಪಗಳಲ್ಲಿ ಮಾಲ್ಡೀವ್ಸ್ ಪೊಲೀಸ್ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಲು ಭಾರತ ಸಹಾಯ ಹಸ್ತ ನೀಡಲಿದೆ.