ರಾಯ್ಪುರ: ನಿವೃತ್ತಿ ಹೊಂದಿದ ಕ್ರಿಕೆಟಿಗರ ಕೂಟ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ನ ಫೈನಲ್ ಪಂದ್ಯವು ಶನಿವಾರ ನಡೆದಿದ್ದು, ಶ್ರೀಲಂಕಾ ವಿರುದ್ಧ ಗೆಲುವು ದಾಖಲಿಸಿದ ಇಂಡಿಯಾ ಲೆಜೆಂಡ್ಸ್ ಮತ್ತೆ ಚಾಂಪಿಯನ್ ಆಗಿದೆ.
ಇಲ್ಲಿನ ವೀರ ನಾರಾಯಣ ಸಿಂಗ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ತಂಡವು 20 ಓವರ್ ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 195 ರನ್ ಗಳಿಸಿದರೆ, ಲಂಕಾ ಲೆಜೆಂಡ್ಸ್ ತಂಡವು 18.5 ಓವರ್ ಗಳಲ್ಲಿ 162 ರನ್ ಗಳಷ್ಟೇ ಮಾಡಲು ಸಾಧ್ಯವಾಯಿತು.
ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಕೀಪರ್ ನಮನ್ ಓಝಾ ಶತಕದ ನೆರವು ನೀಡಿದರು. ನಮನ್ ಔಟಾಗದೆ 108 ರನ್ ಗಳಿಸಿದರೆ, ವಿನಯ್ ಕುಮಾರ್ 36 ರನ್ ಗಳಿಸಿದರು. ಲಂಕಾ ಪರ ಕುಲಶೇಖರ್ ಮೂರು ವಿಕೆಟ್ ಕಿತ್ತರು.
ಇದನ್ನೂ ಓದಿ:ಗಾಂಧಿ ಜಯಂತಿ: ರಾಜ್ ಘಾಟ್ ನಲ್ಲಿ ಪುಷ್ಪ ನಮನ ಸಲ್ಲಿಸಿದ ಮೋದಿ, ಸೋನಿಯಾ, ಖರ್ಗೆ
ಗುರಿ ಬೆನ್ನತ್ತಿದ ಲಂಕಾ ಸತತ ವಿಕೆಟ್ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಇಶಾನ್ ಜಯರತ್ನೆ ಅರ್ಧಶತಕ ಬಾರಿಸಿದ್ದು ಬಿಟ್ಟರೆ ಉಳಿದ ಯಾರೂ ಬೆಂಬಲ ನೀಡಲಿಲ್ಲ. ಲಂಕಾ 162 ರನ್ ಗಳಿಗೆ ಎಲ್ಲಾ ವಿಕೆಟ್ ಕಳೆದುಕೊಂಡಿತು. ಭಾರತದ ಪರ ವಿನಯ್ ಕುಮಾರ್ ಮೂರು ವಿಕೆಟ್ ಕಿತ್ತರೆ, ಅಭಿಮನ್ಯು ಮಿಥುನ್ ಎರಡು ವಿಕೆಟ್ ಪಡೆದರು.
ನಮನ್ ಓಝಾ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರೆ, ತಿಲಕರತ್ನೆ ದಿಲ್ಶನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು. ಇಂಡಿಯಾ ಲೆಜೆಂಡ್ಸ್ ಮತ್ತೊಮ್ಮೆ ಚಾಂಪಿಯನ್ ಆಯಿತು.