Advertisement

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

11:55 PM Nov 17, 2024 | Team Udayavani |

ಹೊಸದಿಲ್ಲಿ: ಭಾರತದಲ್ಲಿ ಡ್ರಗ್ಸ್‌ ಕಳ್ಳಸಾಗಣೆಗೆ ಕಡಿವಾಣಹಾಕಲು ಮುಂದಾಗಿರುವ ಮೋದಿ ಸರಕಾರ ಈ ಮಾಫಿಯಾದ ಹಿಂದಿರುವ ಪಾಕ್‌ ಮೂಲದ ಡ್ರಗ್ಸ್‌ ದೊರೆ ಹಾಜಿ ಸಲೀಂ ದೇಶದಲ್ಲಿ ಹೊಂದಿರುವ ನೆಟ್‌ವರ್ಕ್‌ ಅನ್ನು ಚಿವುಟಿಹಾಕಲು ಪಣತೊಟ್ಟಿದೆ. ಈ ನಿಟ್ಟಿನಲ್ಲಿ “ಆಪರೇಷನ್‌ ಸಾಗರ ಮಂಥನ’ ಎಂಬ ಬಹುದೊಡ್ಡ ಕಾರ್ಯಾಚರಣೆಯನ್ನೂ ಆರಂಭಿಸಿದೆ.

Advertisement

ಒಂದು ತಿಂಗಳಲ್ಲಿ ಗುಜರಾತ್‌ನ ಕರಾ ವಳಿ ಭಾಗದಲ್ಲೇ ಸಾವಿರಾರು ಕೋಟಿ ರೂ ಮೌಲ್ಯದ ಮಾದಕವಸ್ತುವನ್ನು ಎನ್‌ಸಿಬಿ ವಶಪಡಿಸಿಕೊಂಡಿತ್ತು. ಇದು ಮಾತ್ರವಲ್ಲದೇ, ಸಾಗರ ಮಾರ್ಗದ ಮೂಲಕ ಭಾರತಕ್ಕೆ ಬರುತ್ತಿ ರುವ ಡ್ರಗ್ಸ್‌ ಕಳ್ಳಸಾಗಣೆಯ ಬೆನ್ನಟ್ಟಿದಾಗ ಅದರ ಮೂಲ “ಹಾಜಿ ಸಲೀಂ’ ಎಂಬ ಶಂಕೆಯೂ ವ್ಯಕ್ತವಾಗಿತ್ತು.

ಈ ಹಿನ್ನೆಲೆಯಲ್ಲಿ ಆತನ ಜಾಲವನ್ನೇ ಕತ್ತರಿಸಲು ಗೃಹ ಸಚಿವ ಅಮಿತ್‌ ಶಾ ಆದೇಶಿಸಿದ್ದು, ಅದಕ್ಕಾಗಿ ಎನ್‌ಸಿಬಿ ಸಾಗರ ಮಂಥನ ಕಾರ್ಯಾಚರಣೆಗೆ ಇಳಿದಿದೆ ಎನ್ನಲಾಗಿದೆ. ಈಗಾಗಲೇ 4000 ಕೆಜಿ ಡ್ರಗ್ಸ್‌ ವಶದ ಜತೆಗೆ ಹಲವು ಪಾಕಿಸ್ಥಾನಿಯರನ್ನೂ ಬಂಧಿಸಲಾಗಿದೆ ಎಂದು ಎನ್‌ಸಿಬಿ ಅಧಿಕಾರಿ ಹೇಳಿದ್ದಾರೆ. ಡ್ರಗ್ಸ್‌ ದೊರೆ ಹಾಜಿ ಸಲೀಂ ಪಾತಕಿ ದಾವೂದ್‌ ಇಬ್ರಾಹಿಂನ ನೆರೆಹೊರೆಯವ.

 

Advertisement

Udayavani is now on Telegram. Click here to join our channel and stay updated with the latest news.

Next