Advertisement

ಭಾರತ-ಜಪಾನ್‌ “2+2′ಸಭೆ

10:01 AM Dec 02, 2019 | sudhir |

ಹೊಸದಿಲ್ಲಿ: ಭಾರತ ಮತ್ತು ಜಪಾನ್‌ ನಡುವಿನ 2+2 “ವಿಶೇಷ ಕಾರ್ಯತಂತ್ರ ಸಹಭಾಗಿತ್ವ’ (ಸ್ಪೆಷಲ್‌ ಸ್ಟ್ರಾಟೆಜಿಕ್‌ ಪಾರ್ಟ್‌ನರ್‌ಶಿಪ್‌) ಸೇನಾ ಸಹಕಾರಕ್ಕೆ ಮತ್ತಷ್ಟು ಶಕ್ತಿ ತುಂಬುವ ನಿಟ್ಟಿನಲ್ಲಿ ಶನಿವಾರದಿಂದ ಹೊಸದಿಲ್ಲಿಯಲ್ಲಿ ಎರಡೂ ರಾಷ್ಟ್ರಗಳ ರಕ್ಷಣೆ ಹಾಗೂ ವಿದೇಶಾಂಗ ಸಚಿವಾಲಯಗಳ ಮಟ್ಟದ ಸಭೆಗಳು ಆರಂಭವಾಗಿವೆ.

Advertisement

ಸಭೆಯಲ್ಲಿ ಪಾಲ್ಗೊಂಡಿದ್ದ ಭಾರತದ ನಿಯೋಗಕ್ಕೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌, ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ನೇತೃತ್ವ ವಹಿಸಿದ್ದು, ಜಪಾನ್‌ ನಿಯೋಗಕ್ಕೆ ಆ ದೇಶದ ರಕ್ಷಣಾ ಸಚಿವ ಟಾರೊ ಕೊನೊ, ವಿದೇಶಾಂಗ ಸಚಿವ ಟೊಶಿಮಿಟ್ಸು ಮೊಗೆಟಿ ಮುಂದಾಳತ್ವ ವಹಿಸಿದ್ದರು. ಸಭೆಗಳಲ್ಲಿ, ಇಂಡೋ-ಪೆಸಿಫಿಕ್‌ ಪ್ರಾಂತ್ಯದಲ್ಲಿನ ಸದ್ಯದ ಸ್ಥಿತಿಗತಿಗಳು ಹಾಗೂ ಆ ಪ್ರಾಂತ್ಯದಲ್ಲಿ ಶಾಂತಿ, ಸೌಹಾರ್ದತೆ ಹಾಗೂ ಪ್ರಗತಿಯನ್ನು ಸಾಧಿಸಲು ಎರಡೂ ದೇಶಗಳು ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆ ಚರ್ಚಿಸಲಾಯಿತು.

ಸಚಿವರೊಂದಿಗೆ ಮೋದಿ ಮಾತುಕತೆ: ಸಭೆಗೂ ಮೊದಲು ಜಪಾನ್‌ನ ವಿದೇಶಾಂಗ, ರಕ್ಷಣಾ ಸಚಿವರನ್ನು ಭೇಟಿ ಮಾಡಿದ ಮೋದಿ, “ಎರಡೂ ರಾಷ್ಟ್ರಗಳ ಸರ್ವಾಂಗೀಣ ಅಭಿವೃದ್ಧಿಗೆ ಉಭಯ ರಾಷ್ಟ್ರಗಳು ಪರಸ್ಪರ ಸಹಕಾರ ನೀಡಬೇಕೆಂದು ಒತ್ತಿ ಹೇಳಿದರು. ಜತೆಗೆ, ಭಾರತದ “ಆ್ಯಕ್ಟ್ ಈಸ್ಟ್‌’ ನೀತಿಯಂತೆ, ಇಂಡೋ-ಪೆಸಿಫಿಕ್‌ ವಲಯದಲ್ಲಿ ಭಾರತ-ಜಪಾನ್‌ ನಡುವಿನ ದ್ವಿಪಕ್ಷೀಯ ಸಂಬಂಧಗಳು ಶಾಂತಿ, ಸ್ಥಿರತೆ, ಸಮೃದ್ಧಿ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ’ ಎಂದು ಆಶಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next