Advertisement
“ವಿಶ್ವಸಂಸ್ಥೆಯ ಶಾಂತಿ ಪಾಲನಾ ಕಾರ್ಯ ದಲ್ಲಿ ತನ್ನನ್ನು ತೊಡಗಿಸಿಕೊಂಡಿರುವ ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. ಪ್ರಪಂಚ ದಾದ್ಯಂತ ಹೆಚ್ಚಾಕಡಿಮೆ 7000 ಸಿಬಂದಿ ಯನ್ನು ಬೇರೆ ಬೇರೆ ಕಡೆಗಳಲ್ಲಿ ನಿಯೋಜನೆ ಮಾಡಲಾಗಿದೆ. ಶಾಂತಿ ಕಾಪಾಡುವ ಕಾರ್ಯ ವಿಧಾನಗಳ ಬಗ್ಗೆ ಭಾರತೀಯ ಸಿಬಂದಿ ತರ ಬೇತಿ ನೀಡುತ್ತಿದ್ದಾರೆ. ಅನೇಕ ದೇಶಗಳ ವೈದ್ಯ ಕೀಯ ಸೇವೆಗಳಲ್ಲಿ ಸಿಬಂದಿ ತೊಡಗಿಕೊಂಡಿ ದ್ದಾರೆ’ ಎಂದು ತಮ್ಮ ರೇಡಿಯೊ ಕಾರ್ಯಕ್ರಮ “ಮನ್ ಕೀ ಬಾತ್’ನಲ್ಲಿ ಮೋದಿ ಹೇಳಿದರು.
ಪ್ರಧಾನಿ ಮೋದಿ ತಮ್ಮ ಭಾಷಣದಲ್ಲಿ ಕ್ರೀಡಾಪಟುಗಳ ಸಾಧನೆಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಕಿರಿಯರ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯನ್ನು ಭಾರತ ದಲ್ಲಿ ಯಶಸ್ವಿಯಾಗಿ ಆಯೋಜಿಸಿರುವು ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಆತಿಥೇಯ ತಂಡ ದೇಶದ ಕ್ರೀಡಾಪಟು ಗಳ ಹೃದಯ ಗೆದ್ದಿದೆ ಎಂದು ಹೇಳಿದರು.