Advertisement

ಸಾಮರಸ್ಯಕ್ಕೆ ಭಾರತ ಜೀವಂತ ನಿದರ್ಶನ

06:15 AM Feb 17, 2018 | |

ಹೈದರಾಬಾದ್‌:”ಬೇರೆ ಬೇರೆ ಧರ್ಮ ಮತ್ತು ಜನಾಂಗಕ್ಕೆ ಸೇರಿದ ಜನರು ಶಾಂತಿಯುತವಾಗಿ ಸಹಬಾಳ್ವೆ ನಡೆಸಬಲ್ಲರು
ಎಂಬುದಕ್ಕೆ ಭಾರತವೇ ಜೀವಂತ ನಿದರ್ಶನ.’

Advertisement

ಹೀಗೆಂದು ಭಾರತದ ವಿವಿಧತೆಯಲ್ಲಿ ಏಕತೆಯನ್ನು ಶ್ಲಾಘಿಸಿದ್ದು ಇರಾನ್‌ ಅಧ್ಯಕ್ಷ ಹಸನ್‌ ರೌಹಾನಿ. 3 ದಿನಗಳ ಭಾರತ
ಪ್ರವಾಸದಲ್ಲಿರುವ ರೌಹಾನಿ, ಶುಕ್ರವಾರ ಹೈದರಾಬಾದ್‌ಗೆ ಭೇಟಿ ನೀಡಿದ್ದು, ಇಲ್ಲಿನ ಮುಸ್ಲಿಂ ನಾಯಕರು ಮತ್ತು ವಿದ್ವಾಂಸರನ್ನು
ಉದ್ದೇಶಿಸಿ ಮಾತನಾಡಿದ್ದಾರೆ. “ಭಾರತದಲ್ಲಿ ವಿವಿಧ ಜನಾಂಗಗಳು, ಧರ್ಮಗಳು ಪ್ರೀತಿಯಿಂದ ಬಾಳಿ ಬದುಕುತ್ತಿದ್ದಾರೆ. ಇದು ಶತಮಾನಗ ಳಿಂದಲೂ ಮುಂದುವರಿಯುತ್ತಾ ಬಂದಿದೆ. ಇಲ್ಲಿ ಶಿಯಾಗಳು, ಸುನ್ನಿ, ಸೂಫಿಗಳು, ಹಿಂದೂಗಳು, ಸಿಖರು ಮತ್ತು ಇತರರ ಒಂದಾಗಿ ಬಾಳುತ್ತಿದ್ದಾರೆ.

ಇವರೆಲ್ಲರೂ ಒಂದಾಗಿ ನಾಗರೀಕತೆ ಹಾಗೂ ದೇಶವನ್ನು ಕಟ್ಟಿದ್ದಾರೆ,’ ಎಂದಿದ್ದಾರೆ. ಅಲ್ಲದೆ, ಭಾರತ ಮತ್ತು ಇರಾನ್‌ ರಾಜಕೀಯ ಹಾಗೂ ಆರ್ಥಿಕತೆ ಮೀರಿದಂಥ ಸಂಬಂಧವನ್ನು ಹೊಂದಿದೆ. ಈ ಸಂಬಂಧವನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿರೀಕ್ಷೆಯಿದೆ ಎಂದೂ ರೌಹಾನಿ ಹೇಳಿದ್ದಾರೆ.

ಕುತುಬ್‌ ಶಾಹಿ ಸಮಾಧಿಗೆ ಭೇಟಿ: ಶುಕ್ರವಾರ ರೌಹಾನಿ ಅವರು ಇಲ್ಲಿನ ಕುತುಬ್‌ ಶಾಹಿ ಸಮಾಧಿಗೆ ಭೇಟಿ ನೀಡಿದ್ದಾರೆ. ಈ
ಸಮಾಧಿಯು “ಏಳು ಗೋರಿಗಳು’ ಎಂದೇ ಖ್ಯಾತಿ ಗಳಿಸಿದ್ದು, ಇವನ್ನು ಇರಾನ್‌ನ ವಾಸ್ತುಶಿಲ್ಪದ ವಿನ್ಯಾಸದಲ್ಲಿ ನಿರ್ಮಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next