ಕಲಬುರಗಿ: ನಮ್ಮ ದೇಶದಲ್ಲಿ ಅನೇಕ ಶರಣರು, ಸಂತರು, ಮಹಾತ್ಮರು ಸರ್ವರ ಏಳ್ಗೆಗೆ ಶ್ರಮಿಸಿದ್ದಾರೆ. ಅವರ ಜೀವನ ಮತ್ತು ಕೊಡುಗೆಯನ್ನು ನಮ್ಮ ದೇಶದಲ್ಲಿ ಪುರಾಣ, ಪ್ರವಚನ, ಸತ್ಸಂಗ ಕಾರ್ಯಕ್ರಮಗಳ ಮೂಲಕ ಜನರಿಗೆ ಮುಟ್ಟಿಸುವ ಕಾರ್ಯ ಸಾಗಿದೆ. ಇಡೀ ವಿಶ್ವದಲ್ಲಿಯೇ ಭಾರತ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮಂಚೂಣಿಯಲ್ಲಿದ್ದು, ಪ್ರಮುಖವಾದ ಕೊಡುಗೆ ನೀಡಿದೆಯೆಂದು ಹಾರಕೂಡ ಮಠದ ಡಾ| ಚನ್ನವೀರ ಶಿವಾಚಾರ್ಯರು ಅಭಿಮತ ವ್ಯಕ್ತಪಡಿಸಿದರು.
ಕೈಲಾಸ ನಗರದಲ್ಲಿರುವ ಶ್ರೀ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಮಹಾ ಶಿವರಾತ್ರಿ ನಿಮಿತ್ತ 11 ದಿವಸಗಳ ಕಾಲ ನಡೆದ ಹಾರಕೂಡ ಮಠದ ಲಿಂ.ಚನ್ನಬಸವ ಶಿವಯೋಗಿಗಳ ಪುರಾಣ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಆಶೀರ್ವಚನ ನೀಡಿದರು. ಧಾರ್ಮಿಕ ಕಾರ್ಯಕ್ರಮಗಳು ಪಟ್ಟಣ ಪ್ರದೇಶಗಳಲ್ಲಿ ಹೆಚ್ಚು ಜರುಗಬೇಕಿದೆ. ಈ ಮೂಲಕ ನಗರವಾಸಿಗಳಲ್ಲಿ ಭಕ್ತಿ ಮೂಡಿಸಬೇಕು.ಪ್ರತಿಯೊಬ್ಬರು ಪುಣ್ಯದ ಕೆಲಸ ಮಾಡಬೇಕು. ಜೊತೆಗೆ ಸಹಕಾರ ನೀಡಬೇಕು ಎಂದರು.
ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ| ಭೀಮಾಶಂಕರ ಬಿಲಗುಂದಿ, ಉಪಾಧ್ಯಕ್ಷ ಡಾ| ಶರಣಬಸಪ್ಪ ಹರವಾಳ, ಆಡಳಿತ ಮಂಡಳಿ ಸದಸ್ಯರಾದ ಡಾ| ಮಹಾದೇವಪ್ಪ ರಾಂಪೂರೆ, ಡಾ| ನಾಗೇಂದ್ರಪ್ಪ ಮಂಠಾಳೆ, ಡಾ| ಶರಣಬಸಪ್ಪ ಕಾಮರೆಡ್ಡಿ, ಅರುಣಕುಮಾರ ಎಂ.ಪಾಟೀಲ, ಡಾ| ಕೈಲಾಸ ಬಿ.ಪಾಟೀಲ, ವಿನಯ ಪಾಟೀಲ, ಬಿ.ಜೆ. ಖಂಡೇರಾವ್, ಡಾ| ಅನಿಲ ಪಟ್ಟಣ, ಡಾ. ಜಗನ್ನಾಥ ಬಿಜಾಪುರೆ, ಸಾಯಿನಾಥ ಪಾಟೀಲ ಅವರನ್ನು ದೇವಸ್ಥಾನ ಸಮಿತಿ ವತಿಯಿಂದ ಸನ್ಮಾನಿಸಲಾಯಿತು.
ನಂತರ ವೇದಮೂರ್ತಿ ಗಂಗಾಧರ ಶಾಸ್ತ್ರೀಗಳಿಂದ ಪುರಾಣ ಸೇವೆ, ಸೈದಪ್ಪ ಚೌಡಪುರ, ರವಿ ಸ್ವಾಮಿ ಗೋಟೂರ ಅವರಿಂದ ಸಂಗೀತ ಸೇವೆ ಜರುಗಿತು. ದೇವಸ್ಥಾನ ಸಮಿತಿ ಅಧ್ಯಕ್ಷ ಶರಣಬಸಪ್ಪ ಭೂಸನೂರ, ಪ್ರಮುಖರಾದ ಆರ್.ಜಿ. ಪಾಟೀಲ, ರಾಜಕುಮಾರ ಪಾಟೀಲ, ರವಿ ಬಂಗರಗಿ, ಗಿರೀಶ ದಂಡಿನ್, ಶಿವಕುಮಾರ ಪಾಟೀಲ, ಕೃಷ್ಣಪ್ಪ ಬೆಳಮಗಿ, ರೇವಣಸಿದ್ದಯ್ಯ ಮಠ, ರಾಜೇಂದ್ರ ಬಡಿಗೇರ, ಅಶೋಕ ಪಟ್ಟಣಶೆಟ್ಟಿ, ಬಸವರಾಜ ಕಲ್ಯಾಣಿ, ಸಂತೋಷ ರಾಂಪೂರೆ,
ರಘುವೀರಸಿಂಗ್, ಮಲ್ಲಿಕಾರ್ಜುನ ಭೈರಾಮಡಗಿ, ಶಿವಕುಮಾರ ಪಾಟೀಲ, ಎಚ್ .ಬಿ.ಪಾಟೀಲ, ವಿಜಯಕುಮಾರ ತೇಗಲತಿಪ್ಪಿ, ಪ್ರಭುಲಿಂಗ ಮೂಲಗೆ, ನರಸಪ್ಪ ಬಿರಾದಾರ ದೇಗಾಂವ ಮತ್ತಿತರರು ಭಾಗವಹಿಸಿದ್ದರು.