Advertisement
ಕಳೆದ ಒಂದು ದಶಕದಲ್ಲಿ ದೇಶದಲ್ಲಾದ ರೈತರ ಸಾಲ ಮನ್ನಾ ಪ್ರಮಾಣವು, ಉದ್ಯೋಗ ಜಗತ್ತಿನಲ್ಲಿ ಸಿಲುಕಿರುವ ಎನ್‌ಪಿಎದ 22 ಪ್ರತಿಶತದಷ್ಟಿದೆ ಎಂದೂ ಈ ವರದಿ ಹೇಳುತ್ತದೆ. ರೈತರ ಸಾಲಮನ್ನಾದ ವಿಚಾರದಲ್ಲಿ ಮೊದಲಿನಿಂದಲೂ ಪ್ರಶ್ನೆಗಳೇಳುತ್ತಲೇ ಬಂದಿವೆ. ರೈತರ ಸ್ಥಿತಿಯನ್ನು ಸುಧಾರಿಸಲು ಸಾಲಮನ್ನಾ ಎಂದಿಗೂ ಶಾಶ್ವತ/ದೀರ್ಘಾವಧಿ ಪರಿಹಾರವಾಗಲಾರದು ಎಂದೇ ಪರಿಣತರೆಲ್ಲ ಹೇಳುತ್ತಾ ಬಂದಿದ್ದಾರೆ. ಇದರಿಂದಾಗಿ ಕೃಷಿ ಕ್ಷೇತ್ರದ ಸಮಸ್ಯೆಗಳಂತೂ ದೂರವಾಗುತ್ತಿಲ್ಲ, ಬದಲಾಗಿ ಸರ್ಕಾರಿ ಖಜಾನೆಯ ಮೇಲೆ ಭಾರ ಬೀಳುತ್ತಾ ಸಾಗಿದೆ. ಸಾಲ ಮನ್ನಾ ಮಾಡುವುದನ್ನು ಪಕ್ಷಗಳು ರೈತರನ್ನು ಸೆಳೆಯುವ ಓಟ್‌ಬ್ಯಾಂಕ್ ತಂತ್ರವಾಗಿಸಿಕೊಂಡಿವೆ. ಆದರೆ ಕೃಷಿಕರು ಎದುರಿಸುತ್ತಿರುವ ಮೂಲಭೂತ ಸಮಸ್ಯೆಗಳ ಸಮಾಧಾನದ ವಿಷಯದಲ್ಲಿ ನಿಜಕ್ಕೂ ಯಾರಿಂದಲೂ ಪ್ರಾಮಾಣಿಕ ಪ್ರಯತ್ನಗಳು ಆಗುತ್ತಲೇ ಇಲ್ಲ. ಈ ಕಾರಣಕ್ಕಾಗಿಯೇ, ಭಾರತದ ರೈತರು, ಅದರಲ್ಲೂ ಮುಖ್ಯವಾಗಿ ಚಿಕ್ಕ ಕೃಷಿಕರ ಸ್ಥಿತಿ ದಶಕಗಳ ಹಿಂದೆ ಹೇಗಿತ್ತೋ, ಈಗಲೂ ಹಾಗೆಯೇ ಇದೆ.
ರೈತರ ಸಾಲಮನ್ನಾ ಮಾಡುವ ವಿಚಾರದಲ್ಲಿ ಅಸಮ್ಮತಿ ವ್ಯಕ್ತಪಡಿಸಿದ್ದವು. ನೀತಿ ಆಯೋಗವಂತೂ ಸ್ಪಷ್ಟವಾಗಿ, “”ಸಾಲ ಮನ್ನಾದ ಪ್ರಯೋಜನ 10-15 ಪ್ರತಿಶತದಷ್ಟಿರುವ ಸೀಮಿತ ವರ್ಗಕ್ಕಷ್ಟೇ ತಲುಪುತ್ತಿದೆ. ಈ ಕಾರಣಕ್ಕಾಗಿಯೇ ಈ ಪ್ರಕ್ರಿಯೆಯನ್ನು ರೈತರ ಸಮಸ್ಯೆಗಳಿಗೆ ಪರಿಹಾರವೆಂಬಂತೆ
ನೋಡುವುದು ವ್ಯಾವಹಾರಿಕವಲ್ಲ” ಎಂದಿತ್ತು. ಅತ್ತ ರಿಸರ್ವ್ ಬ್ಯಾಂಕ್ ಕೂಡ ಸಾಲಮನ್ನಾದ
ಪರ ಇಲ್ಲ. ಏಕೆಂದರೆ, ಇದರಿಂದ ಹೆಚ್ಚಿನ ಪ್ರಮಾಣದಲ್ಲಿ ಖಜಾನೆಯ ಮೇಲೆ ಒತ್ತಡ ಬೀಳುತ್ತದೆ. ರೈತರಿಗೆ ಸಾಲಮನ್ನಾದ ಬದಲಾಗಿ, ಕೃಷಿ ಸಂಬಂಧಿ ಸಮಸ್ಯೆಗಳ ವಿಚಾರದಲ್ಲಿ ಪರಿಹಾರ ಒದಗಿಸುವ ಕೆಲಸವನ್ನು ಎಲ್ಲಾ ಸರ್ಕಾರಗಳೂ ಮಾಡಬೇಕಿದೆ. ರೈತರನ್ನು ಸ್ವಾವಲಂಬಿಯಾಗಿಸುವ ದೂರಗಾಮಿ ಯೋಜನೆಯ ಅಗತ್ಯ ಹಿಂದೆಂದಿಗಿಂತಲೂ ಅಧಿಕವಿದೆ.