Advertisement

ಧಾರ್ಮಿಕ ಅಲ್ಪಸಂಖ್ಯಾಕ‌ರಿಗೆ ಭಾರತ ಸುರಕ್ಷಿತ ದೇಶ; ವಿಶ್ವಸಂಸ್ಥೆಗೂ ಇದೇ ವ್ಯವಸ್ಥೆ ಪಾಲನೆಗೆ ಯೋಗ್ಯ

11:54 PM Nov 29, 2022 | Team Udayavani |

ವಾಷಿಂಗ್ಟನ್‌: ಭಾರತದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಇತರರ ಜತೆಗೆ ಸೇರಿಕೊಂಡು ಬದುಕು ನಡೆಸುವ ವಾತಾವರಣ ಇದೆ. ಈ ಮಾದರಿಯನ್ನು ವಿಶ್ವಸಂಸ್ಥೆ ಅಳವಡಿಸಿಕೊಳ್ಳಬಹುದು ಎಂದು ಅಮೆರಿಕದ ವಾಷಿಂಗ್ಟನ್‌ನಲ್ಲಿ ಇರುವ ದ ಸೆಂಟರ್‌ ಫಾರ್‌ ಪಾಲಿಸಿ ಅನಾಲಿಸಿಸ್‌ ಎಂಬ ಸಂಸ್ಥೆ ತನ್ನ ವರದಿಯಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದೆ.

Advertisement

ಜಗತ್ತಿನ ಇತರ ದೇಶಗಳಲ್ಲಿ ಇರುವಂತೆ ಯಾವುದೇ ಧಾರ್ಮಿಕ ವಿಭಾಗಗಳಿಗೆ ಭಾರತದಲ್ಲಿ ನಿಷೇಧ ಹೇರಲಾಗಿಲ್ಲ ಎಂದೂ ಅದರಲ್ಲಿ ಶ್ಲಾಘಿಸಲಾಗಿದೆ.

ಧಾರ್ಮಿಕ ಅಲ್ಪಸಂಖ್ಯಾತರಿಗೆ ಸುಲಭವಾಗಿ ಹಾಗೂ ತೊಂದರೆ ಇಲ್ಲದೆ ಜೀವನ ನಡೆಸಲು ಅನುಕೂಲವಾಗಿರುವಂತೆ ಇರುವ ರಾಷ್ಟ್ರಗಳ ಪಟ್ಟಿಯನ್ನು ಈ ಸಂಸ್ಥೆ ಸಿದ್ಧಪಡಿಸಿದೆ. ಅದರಲ್ಲಿ ಭಾರತ ಮೊದಲ ಸ್ಥಾನದಲ್ಲಿ ಇದೆ.

“ಭಾರತದ ಸಂವಿಧಾನದಲ್ಲಿ ಧಾರ್ಮಿಕವಾಗಿ ಅಲ್ಪಸಂಖ್ಯಾತರಾದವರ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಹಕ್ಕುಗಳಿಗೆ ವಿಶೇಷ ಅವಕಾಶ ಕಲ್ಪಿಸಲಾಗಿದೆ. ಜಗತ್ತಿನ ಇತರ ರಾಷ್ಟ್ರಗಳ ಸಂವಿಧಾನದಲ್ಲಿ ಇಂಥ ಅವಕಾಶ ಕಲ್ಪಿಸಲಾಗಿಲ್ಲ. ಭಾಷಾ ಅಲ್ಪಸಂಖ್ಯಾತರಿಗೂ ಇದೇ ರೀತಿಯ ವಿಶೇಷ ಸವಲತ್ತು ಇದೆ’ ಎಂದು ವರದಿಯಲ್ಲಿ ಸಂತಸ ವ್ಯಕ್ತಪಡಿಸಲಾಗಿದೆ.

ನಿಷೇಧ ಇಲ್ಲ:
ಕೆಲವೊಂದು ದೇಶಗಳಲ್ಲಿ ಕೆಲವು ಧರ್ಮಗಳಿಗೆ ಮತ್ತು ಅವುಗಳ ಆಚರಣೆಗೆ ನಿಷೇಧ ಇರುವಂತೆ ಭಾರತದಲ್ಲಿ ಅಂಥ ವ್ಯವಸ್ಥೆ ಇಲ್ಲ. ಹೀಗಾಗಿ, ಧಾರ್ಮಿಕ ಅಲ್ಪಸಂಖ್ಯಾತರಿಗಾಗಿ ಅನುಸರಿಸುವ ನಿಯಮಗಳನ್ನು ವಿಶ್ವಸಂಸ್ಥೆ ಅಳವಡಿಸಿಕೊಳ್ಳಬಹುದು ಎಂದು ತನ್ನ ವರದಿಯಲ್ಲಿ ಪ್ರಶಂಸೆ ಮಾಡಿ, ಶಿಫಾರಸು ಮಾಡಿದೆ.

Advertisement

ಜಗತ್ತಿನ ಕೆಲವು ದೇಶಗಳಲ್ಲಿ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯಗಳು ನಡೆಯುತ್ತಿವೆ ಎಂಬ ಆರೋಪಗಳ ನಡುವೆ “ದ ಗ್ಲೋಬಲ್‌ ಮೈನಾರಿಟಿ ರಿಪೋರ್ಟ್‌’ ಪ್ರಕಟವಾಗಿದೆ. ವಿವಿಧ ದೇಶಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು ಅನುಭವಿಸುತ್ತಿರುವ ಕಷ್ಟಗಳನ್ನು ಅದರಲ್ಲಿ ಚಿತ್ರಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next