Advertisement

ಉಗ್ರರ ವಿರುದ್ಧ ಭಾರತ ಮೂಕಪ್ರೇಕ್ಷಕ ಆಗಿರಲ್ಲ

07:20 AM Sep 18, 2017 | Harsha Rao |

ವಾಷಿಂಗ್ಟನ್‌/ನ್ಯೂಯಾರ್ಕ್‌: ಇನ್ನೇನು ಕೆಲವೇ ದಿನಗಳಲ್ಲಿ ವಿಶ್ವ ಸಂಸ್ಥೆಯ 72ನೇ ಸಾಮಾನ್ಯ ಸಭೆ ಶುರುವಾಗಲಿದೆ. ಹಾಲಿ ಸಾಲಿನಲ್ಲಿ ಭಾರತ ಮತ್ತು ಪಾಕಿಸ್ಥಾನ ನಡುವೆ ಬಿರುಸಿನ ಆರೋಪ ಪ್ರತ್ಯಾರೋಪಗಳು ನಡೆಯುವುದು ನಿರೀಕ್ಷಿತವೇ. ಶನಿವಾರವಷ್ಟೇ ಪಾಕಿಸ್ಥಾನ ಕಾಶ್ಮೀರ ವಿಚಾರ ಪ್ರಸ್ತಾವಿಸಿ ಮುಖಭಂಗಕ್ಕೆ ಈಡಾಗಿತ್ತು. ಹಾಲಿ ಸಾಲಿನ ಭಾಷಣದಲ್ಲಿ ಪಠಾಣ್‌ಕೋಟ್‌ ಮೇಲೆ ದಾಳಿ ನಡೆಸಿದ ರೂವಾರಿ ಮಸೂದ್‌ ಅಜರ್‌ ವಿರುದ್ಧ ವಿಶ್ವಸಂಸ್ಥೆ ನಿಷೇಧ ಹೇರಬೇಕು ಎಂಬ ಅಂಶವನ್ನು ಆದ್ಯತೆಯಲ್ಲಿ ಪ್ರಸ್ತಾವ‌ ಮಾಡಲು ಭಾರತ ಮುಂದಾಗಿದೆ. ವಿಶ್ವಸಂಸ್ಥೆ ಯಲ್ಲಿ ಭಾರತದ ರಾಯಭಾರಿಯಾಗಿರುವ ಸಯ್ಯದ್‌ ಅಕºರುದ್ದೀನ್‌ ಈ ಮಾಹಿತಿ ನೀಡಿದ್ದಾರೆ. 

Advertisement

ಈ ಬಾರಿ ಪ್ರಧಾನಿ ಮೋದಿಯವರ ಬದಲಿಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಸೆ.23ರಂದು ಭಾಷಣ ಮಾಡಲಿ ದ್ದಾರೆ. ಅವರ ಭಾಷಣದಲ್ಲಿ ಭಯೋತ್ಪಾ ದನೆ ವಿರುದ್ಧದ ಹೋರಾಟದ ಬಗ್ಗೆ ಹೆಚ್ಚಿನ ಒತ್ತು ಇರುವ ಸಾಧ್ಯತೆ ಇದೆ ಎಂದಿದ್ದಾರೆ ಅಕºರುದ್ದೀನ್‌. ವಿಶ್ವಸಂಸ್ಥೆ ಅಧಿವೇಶನದ ವೇಳೆ ಸುಷ್ಮಾ ಪ್ರಮುಖ ನಾಯಕರ ಜತೆ ಮಾತುಕತೆ ನಡೆಸಲಿದ್ದಾರೆ. 21ರಂದು ಪಾಕ್‌ ಪ್ರಧಾನಿ ಸಾಮಾನ್ಯ ಸಭೆಯಲ್ಲಿ ಮಾತನಾಡಲಿದ್ದಾರೆ. ಈ ವೇಳೆ ಕಾಶ್ಮೀರ ವಿಚಾರ ಪ್ರಸ್ತಾವಿಸಿದರೆ ತಕ್ಕ ಪ್ರತ್ಯುತ್ತರ ನೀಡ ಲಾಗುತ್ತದೆ ಎಂದೂ ಎಚ್ಚರಿಸಿದ್ದಾರೆ.
ವಿಶ್ವಸಂಸ್ಥೆಯ ಉಗ್ರರ ಪಟ್ಟಿಗೆ ಮಸೂದ್‌ ಅಜರ್‌ನನ್ನು ಸೇರ್ಪಡೆಗೊಳಿ ಸುವ ಬಗ್ಗೆ ಚೀನ ಪ್ರತಿರೋಧ ಒಡ್ಡುತ್ತಿರುವ ಬಗ್ಗೆ ಹೇಳಿದ ಅವರು “ಚೀನ ಜತೆ ಕೊಟ್ಟು ತೆಗೆದುಕೊಳ್ಳುವ ರಾಜತಾಂತ್ರಿಕ ಮಾರ್ಗ ಅನುಸರಿಸಲಾ ಗುತ್ತದೆ’ ಎಂದಿದ್ದಾರೆ. ಈ ನಡುವೆ ಪಾಕಿಸ್ಥಾನ ಕಾಶ್ಮೀರ ವಿಚಾರ 
ಪ್ರಸ್ತಾ ವಿ ಸಿದ ಬಗ್ಗೆ ಆಕ್ಷೇಪಿಸಿದ ಅವರು ನೆರೆಯ ದೇಶ ವಿನಾ ಕಾರಣ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಆ ವಿಚಾರ ಪ್ರಸ್ತಾವ‌ ಮಾಡು ತ್ತಿದೆ. ಈ ಬಗ್ಗೆ ಉರ್ದು ಗಾದೆಯನ್ನು ಉಲ್ಲೇಖೀಸಿದ ಅಕºರುದ್ದೀನ್‌ “ಅವರು ಸೀಮಿತ ವ್ಯಾಪ್ತಿಯಲ್ಲಿ ಮಾತ್ರ ಚಿಂತಿಸುತ್ತಾರೆ. ಅದರಿಂದ ಹೊರತಾಗಿ ಅವರು ಏನನ್ನೂ ಯೋಚಿಸುವುದಿಲ್ಲ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next