Advertisement

ಬಾಹ್ಯಾಕಾಶ ತಂತ್ರಜ್ಞಾನ ಬಳಕೆಯಲ್ಲಿ ಭಾರತ ಮುಂಚೂಣಿಯಲ್ಲಿದೆ

09:46 PM Feb 05, 2020 | Lakshmi GovindaRaj |

ಹಳೇಬೀಡು: ಬಾಹ್ಯಾಕಾಶ ತಂತ್ರಜ್ಞಾನ ಬಳಕೆಯಲ್ಲಿ ಭಾರತ ಮುಂಚೂಣಿಯಲ್ಲಿದೆ ಎಂದು ಇಸ್ರೋ ಮಾಜಿ ಅಧ್ಯಕ್ಷ ಡಾ. ಎ. ಎಸ್‌.ಕಿರಣ್‌ ಕುಮಾರ್‌ ಹೇಳಿದರು. ಹಳೇಬೀಡಿನಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆಯ ಐದನೇ ದಿನದ ಕಾರ್ಯಕ್ರಮದಲ್ಲಿ ಭಾರತೀಯ ಬಾಹ್ಯಾಕಾಶದ ಬಗ್ಗೆ ಉಪನ್ಯಾಸ ನೀಡಿದರು.

Advertisement

ರಾಕೇಟ್‌ ಎಂಜಿನ್‌, ತಯಾರಿಕೆಯಲ್ಲಿ ಇತರೆ ರಾಷ್ಟ್ರಗಳು ಮುಂದಿದ್ದರೂ ಉಪಗ್ರಹದ ತಂತ್ರಜ್ಞಾನವನ್ನು ಸಾಮಜಿಕ ಜಾಲತಾಣ ವ್ಯವಸ್ಥೆಯಲ್ಲಿ ಬಳಸಿಕೊಂಡು ಶ್ರೀಸಾಮಾನ್ಯರಿಗೂ ತಂತ್ರಜ್ಞಾನದ ಉಪಯೋಗ ಬಳಕೆಯಾಗುವಂತೆ ಮಾಡಿದ್ದೇವೆ ಎಟಿಎಂ, ಹವಾಮಾನ ಮುನ್ಸೂಚನೆ, ಟೀವಿ, ಮೊಬೈಲ್‌ ಮೊದಲಾದ ದಿನನಿತ್ಯದ ಬಳಕೆಯಲ್ಲಿ ಉಪಗ್ರಹ ತಂತ್ರಜ್ಞಾನ ಉಪಯೋಗಿಸುತ್ತಿದ್ದೇವೆ ಎಂದರು.

ಇಸ್ರೋ ಸಾಧನೆ: ಮೊದಲು ಚಂದ್ರಯಾನ ಸಂದರ್ಭದಲ್ಲಿ ಚಂದ್ರನ ಮೇಲೆ ನೀರಿನ ಅಂಶ ಇದೆ ಎಂದು ಪತ್ತೆ ಮಾಡಿದ್ದು , ನಮ್ಮ ದೇಶದ ಉಪಗ್ರಹ. ಮಂಗಳ ಗ್ರಹದ ಕಕ್ಷೆಗೆ ಸೇರಿಸಿದ್ದು, ನಮ್ಮ ದೇಶಲ್ಲಿ ತಯಾರಾದ ಉಪಗ್ರದಿಂದ ಎಂಬುದು ಹೆಮ್ಮೆಯ ವಿಚಾರ ಎಂದು. ಇತ್ತೀಚಿನ ದಿನಗಳಲ್ಲಿ ಉಪಗ್ರಗಹದಿಂದ ದೇಶದಲ್ಲಿ ಮುಂದೆ ಸಂಭವಿಸುವ ನೈಸರ್ಗಿಕ ಅವಗಢಗಳನ್ನು ಪತ್ತೆ ಮಾಡಬಹುದಾಗಿದೆ.

ಮೀನುಗಾರರು, ಯಾವ ಭಾಗಕ್ಕೆ ಹೋದರೆ ಹೆಚ್ಚು ಮೀನು ಸಿಗುತ್ತದೆ ಎಂಬ ಖಚಿತ ಮಾಹಿತಿಯನ್ನು ಉಪಗ್ರಹ ಒದಗಿಸುತ್ತದೆ ಇದರಿಂದ ಮೀನುಗಾರರ ಸಮಯ ಹಾಗೂ ವರ್ಷಕ್ಕೆ 15ರಿಂದ 20 ಸಾವಿರ ಕೋಟಿ ರೂ.ಗಳಷ್ಟು ಹಣ, ಪೆಟ್ರೋಲ್‌, ಡೀಸೆಲ್‌ ಖರ್ಚಾಗುವುದು ಉಳಿಯುತ್ತಿದೆ ಎಂದು ಹೇಳಿದರು.

ತಂತ್ರಜ್ಞಾನ ಆವಿಷ್ಕಾರ ಅಗತ್ಯ: ಭಾರತ ದೇಶ ಆರ್ಥಿಕವಾಗಿ ಐದನೇ ಅತಿ ದೊಡ್ಡ ರಾಷ್ಟ್ರಗಳ ಪಟ್ಟಿಯಲ್ಲಿದ್ದು, ಮೊದಲನೇ ಸ್ಥಾನಕ್ಕೆ ಬರಬೇಕಾದರೆ ದೇಶದ ಯುವಜನತೆ, ತಂತ್ರಜ್ಞಾನ ಬಳಸಿಕೊಂಡು ಹೊಸ ಆವಿಷ್ಕಾರ ಮಾಡಲು ಮುಂದಾಗಬೇಕು. ವಿಜ್ಞಾನದ ಜತೆಗೆ ನಮ್ಮ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು.

Advertisement

ಎಲ್ಲಾ ಜಾತಿ ಧರ್ಮವರು ಒಟ್ಟಾಗಿ ಜೀವನ ನಡೆಸಿದರೆ ನಮ್ಮ ದೇಶದ ಏಳಿಗೆ ಸಾದ್ಯ ಎಂಬುದು ತರಳಬಾಳು ಶ್ರೀಗಳ ಆಶಯವಾಗಿದ್ದು, ಅದರಂತೆ ನಾವು ಜೀವನ ನಡೆಸಬೇಕು ಎಂದು ತಿಳಿಸಿದರು. ಹಳೇಬೀಡು ಪೋಟೊ ಇಸ್ರೋ ಮಾಜಿ ಅಧ್ಯಕ್ಷ ಡಾ.ಎ. ಎಸ್‌ .ಕಿರಣ್‌ ಕುಮಾರ್‌ ಮಾತನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next