Advertisement

India: ಭಾರತವು ಜಗತ್ತಿನ “ವಿಶ್ವ ಮಿತ್ರ”: ಜೈಶಂಕರ್‌

11:04 PM Oct 11, 2023 | Team Udayavani |

ಕೊಲಂಬೊ: ಭಾರತವು “ವಿಶ್ವ ಮಿತ್ರ’, ಜಗತ್ತಿನ ಸ್ನೇಹಿತ ಹಾಗೂ ಜಾಗತಿಕ ದಕ್ಷಿಣದ ಧ್ವನಿಯಾಗಿದೆ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಹೇಳಿದ್ದಾರೆ.

Advertisement

ಶ್ರೀಲಂಕಾದ ಕೊಲೊಂಬೊದಲ್ಲಿ ನಡೆಯುತ್ತಿರುವ 23ನೇ ಇಂಡಿಯನ್‌ ಓಶನ್‌ ರಿಮ್‌ ಅಸೋಸಿಯೇಷನ್‌(ಐಒಆರ್‌ಎ)ನ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, “ಐಒಆರ್‌ಎ ಸಾಂಸ್ಥಿಕ, ಹಣಕಾಸು ಮತ್ತು ಕಾನೂನು ಚೌಕಟ್ಟನ್ನು ಬಲಪಡಿಸಲು ಹಾಗೂ ಈ ಕ್ರಿಯಾತ್ಮಕ ಗುಂಪಿನ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳಲು, ಐಒಆರ್‌ಎ ಸದಸ್ಯ ರಾಷ್ಟ್ರಗಳೊಂದಿಗೆ ಭಾರತ ಕೆಲಸ ಮಾಡುತ್ತದೆ’ ಎಂದಿದ್ದಾರೆ.

“ಬಹುಪಕ್ಷೀಯ ನಿಯಮಗಳ ಆಧಾರಿತ ಅಂತಾರಾಷ್ಟ್ರೀಯ ಕ್ರಮವು ಹಾಗೂ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಯ ಮೇಲಿನ ಪ್ರಾಮಾಣಿಕ ಗೌರವವು ಹಿಂದೂ ಮಹಾಸಾಗರದ ರಾಷ್ಟ್ರಗಳನ್ನು ಪ್ರಬಲ ಸಮುದಾಯವಾಗಿ ಪುನರುಜ್ಜೀವನಗೊಳಿಸಲು ಅಡಿಪಾಯವಾಗಿದೆ,’ ಎಂದು ಜೈಶಂಕರ್‌ ಅಭಿಪ್ರಾಯಪಟ್ಟಿದ್ದಾರೆ.

ಹಿಂದೂ ಮಹಾಸಾಗರದಲ್ಲಿ ಚೀನಾ ತನ್ನ ಕಬಂದಬಾಹುಗಳನ್ನು ಚಾಚುತ್ತಿರುವ ಹಿನ್ನೆಲೆಯಲ್ಲಿ ಅದರ ವಿರುದ್ಧ ಜೈಶಂಕರ್‌ ಚಾಟಿ ಬೀಸಿದ್ದಾರೆ. ಭಾರತವು 2023-25ನೇ ಸಾಲಿಗೆ ಐಒಆರ್‌ಎ ಉಪಾಧ್ಯಕ್ಷ ಸ್ಥಾನವನ್ನು ಆಲಂಕರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next