ಹೊಸದಿಲ್ಲಿ : ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಉಕ್ಕು ಮತ್ತು ಅಲ್ಯುಮಿನಿಯಂ ಮೇಲಿನ ಅಮದು ಸುಂಕ ಏರಿಸಿರುವುದಕ್ಕೆ ಪ್ರತೀಕಾರದ ಕ್ರಮ ಕೈಗೊಂಡಿರುವ ಐರೋಪ್ಯ ಒಕ್ಕೂಟ ಮತ್ತು ಚೀನದೊಂದಿಗೆ ಇದೀಗ ಭಾರತ ಕೂಡ ಸೇರಿಕೊಂಡಿದೆ.
ಅಂತೆಯೇ ಭಾರತ ಕೆಲವಾರು ಕೃಷಿ ಉತ್ಪನ್ನಗಳು, ಉಕ್ಕು ಮತ್ತು ಕಬ್ಬಿಣ ಆಮದು ಸುಂಕವನ್ನುಏರಿಸಿದೆ ಎಂದು ಸರಕಾರದ ನೊಟೀಸ್ ತಿಳಿಸಿದೆ.
ಐರೋಪ್ಯ ಒಕ್ಕೂ ಅಮೆರಿಕದ ಹಲವಾರು ಉತ್ಪನ್ನಗಳ ಮೇಲೆ ಆಮದು ಸುಂಕ ಏರಿಸುವ ನಿರ್ಧಾರ ಕೈಗೊಂಡ ಕೆಲವೇ ದಿನಗಳಲ್ಲಿ ಭಾರತ ಈ ನಿರ್ಧಾರವನ್ನು ಪ್ರಕಟಿಸಿದೆ.
ನಿನ್ನೆ ಬುಧವಾರ ಭಾರತದ ವಾಣಿಜ್ಯ ಸಚಿವಾಲಯ ಹೊರಡಿಸುವ ಸುಂಕ ದರ ಪಟ್ಟಿಯಲ್ಲಿ ಆ್ಯಪಲ್, ಆಲ್ಮಂಡ್, ಚಿಕ್ ಪೀಸ್, ಲೆಂಟಿಲ್, ವಾಲ್ ನಟ್, ಆರ್ಟೆಮಿಯಾ ಇತ್ಯಾದಿ ಉತ್ಪನ್ನಗಳನ್ನು ಹೆಸರಿಸಿ ಅವುಗಳ ಮೇಲಿನ ಆಮದು ತೆರಿಗೆಯನ್ನು ಹೆಚ್ಚಿಸಿದೆ. ಇವುಗಳಲ್ಲಿ ಹೆಚ್ಚಿನವುಗಳನ್ನು ಅಮೆರಿಕದಿಂದ ಆಮದಿಸಿಕೊಳ್ಳಲಾಗುತ್ತಿದೆ.
ಇದೇ ವೇಳೆ ಭಾರತ ಕೆಲವೊಂದು ವರ್ಗಗಳ ಕಬ್ಬಿಣ ಮತ್ತು ಉಕ್ಕು ಉತ್ಪನ್ನಗಳ ಮೇಲಿನ ಸುಂಕವನ್ನು ಏರಿಸಿದೆ.
ಅಮೆರಿಕದ ಉಕ್ಕು ಮತ್ತು ಅಲ್ಯುಮಿನಿಯಂ ಸುಂಕ ಏರಿಕೆಯಿಂದ ವಿನಾಯಿತಿ ಪಡೆಯುವಲ್ಲಿ ವಿಫಲವಾದ ಬಳಿಕ ಭಾರತ ವಿಶ್ವ ವಾಣಿಜ್ಯ ಸಂಘಟನೆಯಲ್ಲಿ ತನ್ನ ದೂರನ್ನು ದಾಖಲಿಸಿತ್ತು.
ಮಾತ್ರವಲ್ಲದೆ ಭಾರತ ಡಬ್ಲ್ಯುಟಿಓ ಗೆ ಉತ್ಪನ್ನಗಳ ಒಂದು ಪಟ್ಟಿಯನ್ನು ಸಲ್ಲಿಸಿ ಅವುಗಳ ಮೇಲೆ ತಾನು ಹೆಚ್ಚಿನ ಸಂಕ ಭರಿಸಬೇಕಾದೀತು ಎಂದುಹೇಳಿತ್ತು.