Advertisement

ಭಾರತ ಮುಸ್ಲಿಮರಿಗೆ ಸ್ವರ್ಗ: ಸಚಿವ ನಖ್ವಿ

05:03 PM Apr 22, 2020 | sudhir |

ಹೊಸದಿಲ್ಲಿ: ಭಾರತ ಮುಸ್ಲಿಮರಿಗೆ ಸ್ವರ್ಗ. ಅವರ ಸಾಮಾಜಿಕ, ಆರ್ಥಿಕ ಮತ್ತು ಧಾರ್ಮಿಕ ಹಕ್ಕುಗಳನ್ನು ಕಾಪಾಡಲಾಗುತ್ತಿದೆ ಎಂದು ಕೇಂದ್ರ ಸಚಿವ ಮುಖ್ತರ್‌ ಅಬ್ಟಾಸ್‌ ನಖ್ವಿ ಮಂಗಳವಾರ ಹೇಳಿದ್ದಾರೆ. ಭಾರತದಲ್ಲಿ ಮುಸ್ಲಿಮರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ ಎಂದು ಆರ್ಗ ನೈಸೇಷನ್‌ ಆಫ್ ಇಸ್ಲಾಮಿಕ್‌ ಕಾರ್ಪೊರೇಷನ್‌ (ಒಐಸಿ) ಹೇಳಿಕೆ ನೀಡಿರುವ ಹಿನ್ನೆಲೆಯಲ್ಲಿ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. ಭಾರತೀಯ ಮುಸ್ಲಿಮರು ಸಂಭಾವ್ಯರು, ದೇಶದ ಸೌಹಾರ್ದ ವಾತಾವರಣ ಹಾಳು ಮಾಡುವವರನ್ನು ಅವರು ದೂರ ಇಡುತ್ತಾರೆ. ಅಲ್ಪಸಂಖ್ಯಾಕರೂ ಸೇರಿ ಎಲ್ಲ ಸಮುದಾಯಗಳ ಸಂವಿಧಾನಿಕ, ಸಾಮಾಜಿಕ ಮತ್ತು ಧಾರ್ಮಿಕ ಹಕ್ಕು ಕಾಪಾಡುವುದು ಭಾರತದ ಸಂವಿಧಾನದ ಮತ್ತು ನೈತಿಕತೆಯ ಹೊಣೆಯಾಗಿದೆ ಎಂದು ಹೇಳಿದರು. ಕೋವಿಡ್ ಸೋಂಕನ್ನು ಮುಸ್ಲಿಮರ ನಿಂದಿಸಲು ಭಾರತದ ಮಾಧ್ಯಮಗಳು ಬಳಸುತ್ತಿವೆ ಎಂದು ಒಐಸಿ ಆರೋಪಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next