ನವ ದೆಹಲಿ : ಅಮೆರಿಕಾ ಮತ್ತು ಚೀನಾ ನಂತರ ಭಾರತವು ವಿಶ್ವದಲ್ಲೇ ಮೂರನೇ ಅತಿ ಹೆಚ್ಚು ಶತಕೋಟ್ಯಧಿಪತಿಗಳನ್ನು ಹೊಂದಿದೆ ಎಂದು ಪ್ರತಿಷ್ಠಿತ ಫೋರ್ಬ್ಸ್ ಬಿಲಿಯನೇರ್ಸ್ ಹೊಸ ಪಟ್ಟಿ ಬಹಿರಂಗಪಡಿಸಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಕೇಶ್ ಅಂಬಾನಿ ಏಷ್ಯಾದ ಶ್ರೀಮಂತ ವ್ಯಕ್ತಿ ಆಗಿರುವುದರ ಜೊತೆಗೆ ವಿಶ್ವದ 10ನೇ ಶ್ರೀಮಂತ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ ಎಂದು ಫೋರ್ಬ್ಸ್ ಬಿಲಿಯನೇರ್ಸ್ ಹೊಸ ಪಟ್ಟಿ ತಿಳಿಸಿದೆ.
ಓದಿ : ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದ ಪ್ರಧಾನಿ ನರೇಂದ್ರ ಮೋದಿ
ಇನ್ನು, ವಿಶ್ವದ ಶತಕೋಟ್ಯಾಧಿಪತಿಗಳ ಫೋರ್ಬ್ಸ್ ನ 35 ನೇ ವಾರ್ಷಿಕ ಪಟ್ಟಿಯಲ್ಲಿ ಅಮೆಜಾನ್ ಸಿಇಒ ಮತ್ತು ಸ್ಥಾಪಕ ಜೆಫ್ ಬೆಜೋಸ್ ಸತತ ನಾಲ್ಕನೇ ವರ್ಷ ಅಗ್ರಸ್ಥಾನದಲ್ಲಿದ್ದಾರೆ. ಟೆಸ್ಲಾ ಸಿಇಒ ಎಲೋನ್ ಮಸ್ಕ್ 2ನೇ ಸ್ಥಾನ ಪಡೆದಿದ್ದಾರೆ.
ಭಾರತವು ವಿಶ್ವದಲ್ಲೇ ಮೂರನೇ ಅತಿ ಹೆಚ್ಚು ಶತಕೋಟ್ಯಧಿಪತಿಗಳನ್ನು ಹೊಂದಿದ್ದು 140, ಜರ್ಮನಿಯು 136, ರಷ್ಯಾ 117ರಷ್ಟಿದೆ. ಏಷ್ಯಾ-ಪೆಸಿಫಿಕ್ ದೇಶಗಳ 1,149 ಶತಕೋಟ್ಯಾಧಿಪತಿಗಳು ಒಟ್ಟಾಗಿ 4.7 ಟ್ರಿಲಿಯನ್ ಯುಎಸ್ ಡಾಲರ್ ಮೌಲ್ಯವನ್ನು ಹೊಂದಿದ್ದರೆ, ಅಮೆರಿಕಾದ ಬಿಲಿಯನೇರ್ಸ್ ಒಟ್ಟು 4.4 ಟ್ರಿಲಿಯನ್ ಅಮೆರಿಕಾ ಡಾಲರ್ ಮೌಲ್ಯವನ್ನು ಹೊಂದಿದ್ದಾರೆ ಎಂದು ಫೋರ್ಬ್ಸ್ ಹೇಳಿದೆ.
ಜಾಗತಿಕ ಪಟ್ಟಿಯಲ್ಲಿ, 40 ವರ್ಷ ವಯಸ್ಸಿನ 106 ಶತಕೋಟ್ಯಧಿಪತಿಗಳಿದ್ದಾರೆ. ಜರ್ಮನಿಯ 18ನೇ ವರ್ಷ ವಯಸ್ಸಿನ ಕೆವಿನ್ ಡೇವಿಡ್ ಲೆಹ್ಮನ್ ಜಾಗತಿಕವಾಗಿ ಅತಿ ಕಿರಿಯ ಬಿಲಿಯನೇರ್ ಆಗಿದ್ದಾರೆ.
ಓದಿ : ತಂದೆ ಪರ ಮಾತಾಡಿದ ಮಗುವನ್ನು ಕೊಂದ ತಾಯಿ: ಗೋಬಿ ಮಂಚೂರಿ ಕೊಡಿಸಲು ಕರೆದೊಯ್ದು ಕೊಲೆ!