Advertisement

ಭಾರತವನ್ನು 7 ತಿಂಗಳಿಂದಲೂ ಪರೀಕ್ಷಿಸಲಾಗುತ್ತಿದೆ: ಜೈಶಂಕರ್‌

12:40 AM Dec 13, 2020 | mahesh |

ಹೊಸದಿಲ್ಲಿ: “ಪೂರ್ವ ಲಡಾಖ್‌ನ ಗಡಿ ಬಿಕ್ಕಟ್ಟಿನ ಮೂಲಕ ಕಳೆದ ಏಳು ತಿಂಗಳಿನಿಂದಲೂ ಭಾರತವು ಅಗ್ನಿಪರೀಕ್ಷೆಗೆ ಒಳಪಟ್ಟಿದೆ. ಆದರೆ, ರಾಷ್ಟ್ರೀಯ ಭದ್ರತಾ ಸವಾಲುಗಳನ್ನು ಸಮರ್ಪಕ ವಾಗಿ ಎದುರಿಸುತ್ತೇವೆಂಬ ವಿಶ್ವಾಸ ನಮಗಿದೆ’ ಎಂದು ವಿದೇಶಾಂಗ ಸಚಿವ ಎಸ್‌.ಜೈಶಂಕರ್‌ ಅವರು ಹೇಳಿದ್ದಾರೆ.

Advertisement

ಎಫ್ಐಸಿಸಿಐ ವಾರ್ಷಿಕ ಸಮ್ಮೇಳನದ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ. ಎಲ್‌ಎಸಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು “ಅತ್ಯಂತ ವ್ಯಾಕುಲಪಡಿಸುವಂಥದ್ದು’ ಎಂದಿರುವ ಜೈಶಂಕರ್‌, ಗಡಿಯಲ್ಲಿ ನಡೆದ ಘಟನೆಗಳು ಖಂಡಿತಾ ಚೀನದ ಹಿತಾಸಕ್ತಿಯನ್ನು ರಕ್ಷಿಸುವಂಥದ್ದಲ್ಲ. ಏಕೆಂದರೆ, ಇತ್ತೀಚೆಗಿನ ದಶಕಗಳಲ್ಲಿ ಭಾರತದೊಂದಿಗೆ ಆ ದೇಶ ಬೆಳೆಸಿಕೊಂಡಿದ್ದ ಉತ್ತಮ ಬಾಂಧವ್ಯ ವನ್ನು ಅದು ಈಗ ಕಳೆದುಕೊಳ್ಳುತ್ತಿದೆ. ಅಲ್ಲದೆ, ಎಲ್‌ಎಸಿ ಕುರಿತ ಒಪ್ಪಂದಗಳಿಗೆ ಅಗೌರವ ತೋರಿದ ಕುಖ್ಯಾತಿಯನ್ನೂ ಅದು ಪಡೆದಿದೆ’ ಎಂದಿದ್ದಾರೆ.

ಇದೇ ವೇಳೆ, ಗಡಿ ಬಿಕ್ಕಟ್ಟು ಯಾವಾಗ ಸಂಪೂರ್ಣವಾಗಿ ಪರಿಹಾರ ಕಾಣಲಿದೆ ಎಂಬ ಪ್ರಶ್ನೆಗೆ ಅರು ಯಾವುದೇ ಉತ್ತರ ನೀಡಲಿಲ್ಲ. ಬದಲಿಗೆ, ನಾನು ಯಾವುದೇ ಊಹೆ ಮಾಡಿಕೊಂಡು ಉತ್ತರಿಸಲು ಇಚ್ಛಿಸುವುದಿಲ್ಲ ಎಂದಷ್ಟೇ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next