Advertisement

ಸೆಮಿಕಂಡಕ್ಟರ್‌ನಲ್ಲೂ ಆತ್ಮನಿರ್ಭರಕ್ಕೆ ಶ್ರೀಕಾರ

09:07 PM Feb 20, 2022 | Team Udayavani |

ಒಟ್ಟಾರೆ 114 ಲಕ್ಷ ಕೋಟಿ ರೂ. ಹೂಡಿಕೆಯ ಅಗತ್ಯವಿರುವ ಸೆಮಿಕಂಡಕ್ಟರ್‌ ಹಾಗೂ ಡಿಸ್‌ಪ್ಲೇ ಪರದೆಗಳ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಐದು ಕಂಪನಿಗಳು ಮುಂದೆ ಬಂದಿವೆ. ಅದಕ್ಕಾಗಿ ಕೇಂದ್ರದ ಆರ್ಥಿಕ ಬೆಂಬಲ ಬೇಕೆಂದು ಕೋರಿವೆ.

Advertisement

ಯಾವ್ಯಾವ ಕಂಪನಿಗಳಿಂದ ಪ್ರಸ್ತಾವನೆ?
ವೇದಾಂತ ಫಾಕ್ಸ್‌ಕಾನ್‌ ಜೆವಿ, ಐಜಿಎಸ್‌ಎಸ್‌ ವೆಂಚರ್ಸ್‌, ಐಎಸ್‌ಎಂಸಿ ಕಂಪನಿಗಳು 97 ಸಾವಿರ ಕೋಟಿ ರೂ. ಹೂಡಿಕೆ ಅಗತ್ಯವಿರುವ ಸೆಮಿಕಂಡಕ್ಟರ್‌ ಘಟಕಗಳನ್ನು ಸ್ಥಾಪಿಸುವ ಪ್ರಸ್ತಾವನೆ ಸಲ್ಲಿಸಿದ್ದು, ಕೇಂದ್ರದಿಂದ 41 ಸಾವಿರ ಕೋಟಿ ರೂ. ಬೆಂಬಲದ ಹೂಡಿಕೆ ಬೇಕೆಂದು ಮನವಿ ಸಲ್ಲಿಸಿವೆ. ವೇದಾಂತ ಹಾಗೂ ಎಲೆಸ್ಟ್‌ ಕಂಪನಿ, 50 ಸಾವಿರ ಕೋಟಿ ರೂ.ಗಳ ಹೂಡಿಕೆ ಅಗತ್ಯವಿರುವ ಡಿಸ್‌ಪ್ಲೇ ಪರದೆಗಳ ತಯಾರಿಕಾ ಘಟಕಗಳನ್ನು ಸ್ಥಾಪಿಸಲು ಪ್ರಸ್ತಾವನೆ ಸಲ್ಲಿಸಿವೆ. ಇದಕ್ಕಾಗಿ, ಕೇಂದ್ರದಿಂದ ಒಟ್ಟಾರೆ 20 ಸಾವಿರ ಕೋಟಿ ರೂ. ಹೂಡಿಕೆಯನ್ನು ಅಪೇಕ್ಷಿಸಿವೆ.

ಸೆಮಿಕಂಡಕ್ಟರ್‌ “ಆತ್ಮನಿರ್ಭರ’ಕ್ಕೆ ಶ್ರೀಕಾರ
2020-2021ರಲ್ಲಿ ವಿಶ್ವಾದ್ಯಂತ ಸೆಮಿಕಂಡಕ್ಟರ್‌ ಚಿಪ್‌ಗ್ಳ ಅಭಾವದಿಂದಾಗಿ ಆಟೋಮೊಬೈಲ್‌, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಿಗೆ ತೊಂದರೆಯಾಗಿತ್ತು. ವಿಶ್ವದಲ್ಲಿ ಅತಿ ಹೆಚ್ಚು ಸೆಮಿಕಂಡಕ್ಟರ್‌ ಚಿಪ್‌ಗಳನ್ನು ತಯಾರಿಸುವುದು ಚೀನಾ, ದಕ್ಷಿಣ ಕೊರಿಯಾ, ಸಿಂಗಾಪುರ, ಮಲೇಷ್ಯಾ, ಜಪಾನ್‌. ಇವುಗಳ ಮೇಲೆ ಇಡೀ ಪ್ರಪಂಚ ಅವಲಂಬಿತವಾಗಿವೆ. ಇದನ್ನು ನಿವಾರಿಸಿ, ಸೆಮಿಕಂಡಕ್ಟರ್‌ ವಿಚಾರದಲ್ಲಿ ಭಾರತವನ್ನು ಸ್ವಾವಲಂಬಿ ರಾಷ್ಟ್ರವನ್ನಾಗಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆತ್ಮನಿರ್ಭರ ಭಾರತ ಕಟ್ಟುವ ಪ್ರಯತ್ನದ ಭಾಗವಾಗಿ ಈ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಕಂಪನಿ ನಿರ್ಧರಿಸಿದೆ.

ಅಂಕಿ-ಅಂಶ:
5- ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಕಂಪನಿಗಳು

114 ಲಕ್ಷ ಕೋಟಿ ರೂ.
– ಪ್ರಸ್ತಾವನೆಯಲ್ಲಿರುವ ಹೂಡಿಕೆಯ ಒಟ್ಟು ಮೊತ್ತ

Advertisement

97,000 ಕೋಟಿ ರೂ.
– ಸೆಮಿಕಂಡಕ್ಟರ್‌ ಘಟಕಗಳಿಗೆ ಬೇಕಿರುವ ಬಂಡವಾಳ

41,000 ಕೋಟಿ ರೂ.
– ಸೆಮಿಕಂಡಕ್ಟರ್‌ ಘಟಕಗಳಿಗೆ ಕೇಂದ್ರದಿಂದ ನಿರೀಕ್ಷಿಸಲಾಗಿರುವ ನೆರವು

50,000 ಕೋಟಿ ರೂ.
– ಡಿಸ್‌ಪ್ಲೇ ಘಟಕಗಳ ನಿರ್ಮಾಣಕ್ಕಾಗಿ ಅಗತ್ಯವಿರುವ ಬಂಡವಾಳ

20,000 ಕೋಟಿ ರೂ.
– ಡಿಸ್‌ಪ್ಲೇ ಘಟಕಗಳಿಗೆ ಕೇಂದ್ರದಿಂದ ಕೋರಿರುವ ನೆರವು

Advertisement

Udayavani is now on Telegram. Click here to join our channel and stay updated with the latest news.

Next