Advertisement

ಉತ್ತರಾಖಂಡ: ನೈನಿತಾಲ್‌ನಲ್ಲಿ ದೇಶದ ಮೊದಲ ಪಾಚಿ ತೋಟ

11:34 PM Nov 22, 2020 | mahesh |

ನೈನಿತಾಲ್‌ (ಡೆಹ್ರಾಡೂನ್‌): ಉತ್ತರಾಖಂಡ ರಾಜ್ಯದ ನೈನಿತಾಲ್‌ನ ಖುರ್ಪತಲ್‌ನಲ್ಲಿ ದೇಶದ ಮೊದಲ ಪಾಚಿ ತೋಟ ನಿರ್ಮಾ ಣವಾಗಿದೆ. ಉತ್ತರಾಖಂಡ ಅರಣ್ಯ ಇಲಾಖೆ ಕಳೆದ ವರ್ಷವೇ ಇದಕ್ಕೆ ಅನುಮೋದನೆ ನೀಡಿತ್ತು.

Advertisement

ಇದೀಗ ಖ್ಯಾತ ಜಲಸಂರಕ್ಷಣ ಕಾರ್ಯಕರ್ತ ರಾಜೇಂದ್ರ ಸಿಂಗ್‌ ಇದನ್ನು ಉದ್ಘಾಟಿಸಿದ್ದಾರೆ. ಇಲ್ಲಿ 30 ವಿವಿಧ ರೀತಿಯ ಪಾಚಿಗಳಿವೆ. ಈ ತೋಟದ ಮುಖ್ಯ ಉದ್ದೇಶ ಪಾಚಿಯ ವಿವಿಧ ತಳಿಗಳನ್ನು ರಕ್ಷಿಸುವುದು ಮತ್ತು ಅದರ ಮಹತ್ವವನ್ನು ಜನರಿಗೆ ತಿಳಿಸುವುದು. ಈ ತೋಟದಲ್ಲೊಂದು ಮನೋರಂಜನೆ ತಾಣವೂ ಇದೆ.

ಹಾಗೆಯೇ ತೋಟದ ಮಹತ್ವವನ್ನು ವಿವರಿಸುವ ಕೇಂದ್ರವೂ ಇದೆ. ಈ ಕೇಂದ್ರದಲ್ಲಿ ಮೊದಲ ವಿಶ್ವಯುದ್ಧದಲ್ಲಿ ಗಾಯಗಳಿಗೆ ಸಾ#ಗ್ನಮ್‌ ಎಂಬ ಪಾಚಿಯನ್ನು ಕಟ್ಟಿದ ಕುರಿತು ಚಿತ್ರಗಳಿವೆ. ಇದು ಹತ್ತಿಗಿಂತ ಮೂರುಪಟ್ಟು ವೇಗದಲ್ಲಿ ದ್ರವವನ್ನು ಹೀರಿಕೊಳ್ಳುವ ಶಕ್ತಿ ಹೊಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next