Advertisement

ಇಂಧನ ಬೇಡಿಕೆ ಸುಧಾರಣೆ : ಜೂನ್‌ ನಲ್ಲಿ ಶೇಕಡಾ. 1.5 ರಷ್ಟು ಹೆಚ್ಚಳ..!

02:03 PM Jul 11, 2021 | |

ನವ ದೆಹಲಿ : ಜೂನ್ ನಲ್ಲಿ ದೇಶದ  ಇಂಧನ ಬೇಡಿಕೆಯು ಚೇತರಿಕೆಯ ಹಾದಿಗೆ ಬರಲಿದೆ. ಮೇ ತಿಂಗಳಿನಲ್ಲಿ ಇಂಧನ ಬೇಡಿಕೆಯು ಒಂಬತ್ತು ತಿಂಗಳ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿತ್ತು.

Advertisement

ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಕೆ ಮತ್ತು ಲಾಕ್‌ ಡೌನ್‌ ನಿರ್ಬಂಧಗಳನ್ನು ಸಡಿಲಿಕೆಯಿಂದ 2020ರ ಜೂನ್‌ ಗೆ ಹೋಲಿಸಿದರೆ 2021ರ ಜೂನ್‌ ನಲ್ಲಿ ಇಂಧನ ಬಳಕೆ ಶೇ 1.5ರಷ್ಟು ಹೆಚ್ಚಾಗಿದ್ದು, 1.63 ಕೋಟಿ ಟನ್‌ಗಳಷ್ಟಾಗಿದೆ. 2021ರ ಮೇ ತಿಂಗಳಿಗೆ ಹೋಲಿಸಿದರೆ ಬಳಕೆಯಲ್ಲಿ ಪ್ರಮಾಣ ಶೇಕಡಾ 8 ರಷ್ಟು ಹಚ್ಚಳ ಆಗಿದೆ ಎಂದು  ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ ಅಧೀನದ ‘ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣೆ ಘಟಕ’ದಲ್ಲಿ (ಪಿಪಿಎಸಿ) ಈ ಮಾಹಿತಿಯನ್ನು ನೀಡಲಾಗಿದೆ.

ಇದನ್ನೂ ಓದಿ : ಉಳಿದವರು ಕಾಣದ ‘ರಿಚರ್ಡ್ ಆಂಟನಿ’ಗೆ ಸಿಂಪಲ್ ಸ್ಟಾರ್ ರಕ್ಷಿತ್ ಆಕ್ಷನ್ ಕಟ್

ಹಿಂದಿನ ವರ್ಷದ ಜೂನ್ ಗೆ ಹೋಲಿಸಿದರೆ ಈ ವರ್ಷದ ಜೂನ್ ನಲ್ಲಿ ಪೆಟ್ರೋಲ್ ವ್ಯಾಪಾರದ ವಹಿವಾಟವು ಶೇಕಡಾ 5.6 ರಷ್ಟು ಏರಿಕೆಯಾಗಿದೆ. ಅದು ಈಗ 24 ಲಕ್ಷ ಟನ್ ಗೆ ತಲುಪಿದೆ. ಇನ್ನು, ಡೀಸೆಲ್ ವ್ಯಾಪಾರ ವಹಿವಾಟಿನಲ್ಲಿ ಶೇಕಡಾ. 1.5 ರಷ್ಟು ಕುಸಿತ ಕಂಡಿದೆ ಎಂದು ಮಾಹಿತಿ ನೀಡಿದೆ. ಮಾರ್ಚ್ ನಂತರ ತಿಂಗಳಲ್ಲಿ ಈ ಏರಿಕೆ ಇದಾಗಿದೆ.

ಕೋವಿಡ್ ಸೋಂಕಿನ ಎರಡನೇ ಅಲೆ ಹಬ್ಬುವುದಕ್ಕೆ ಆರಂಭಕ್ಕೂ ಮುನ್ನ ಇದೇ ಮೊದಲು ಇಂಧನದ ಬೇಡಿಕೆ ಮಾರ್ಚ್ ನಲ್ಲಿ ಸಹಜ ಸ್ಥಿತಿಗೆ ಬಂದಿತ್ತು.

Advertisement

ಕೋವಿಡ್ ಸೋಂಕಿನ ಅಲೆಯ ಹೆಚ್ಚಳದ ಕಾರಣದಿಂದಾಗಿ ಅದರ ತೀವ್ರತೆಯನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ದೇಶದ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಲಾಕ್ ಡೌನ್, ಕೋವಿಡ್ ಕರ್ಫ್ಯೂ ಜಾರಿಗೊಳಿಸಿರುವ ಕಾರಣದಿಂದಾಗಿ ಪೆಟ್ರೋಲ್ ಹಾಗೂ ಡೀಸೆಲ್ ಬೇಡಿಕೆ ಇಳಿಕೆ ಕಂಡಿತ್ತು.

ಇದನ್ನೂ ಓದಿ : ಕಂದಹಾರ್ ನಲ್ಲಿ ತಾಲಿಬಾನ್ ಹಿಡಿತ: ರಾಯಭಾರ ಕಚೇರಿಯ ಸಿಬ್ಬಂದಿಗಳ ವಾಪಾಸ್ ಗೆ ಭಾರತ ಕ್ರಮ

Advertisement

Udayavani is now on Telegram. Click here to join our channel and stay updated with the latest news.

Next