Advertisement
ರಫೇಲ್-ಎಂ ಯುದ್ಧ ವಿಮಾನಭಾರತದ ಕೋಠಿಯಲ್ಲಿ ರಫೇಲ್‌ಗಳಿವೆ. 2015 ರಲ್ಲಿ ಫ್ರಾನ್ಸ್‌ನಿಂ¨ 59 ಸಾವಿರ ಕೋಟಿ ರೂ. ಮೌಲ್ಯದ 36 ರಫೇಲ್ ಗಳ ಖರೀದಿ ಒಪ್ಪಂದವಾಯಿತು. ಈಗ ಹೊಸದಾಗಿ 26 ರಫೇಲ್ – ಎಂ ಖರೀದಿಗೆ ಮುಂದಾಗಿದೆ. ಅಲ್ಲದೇ ಫ್ರಾನ್ಸ್‌ನ ಅನಂತರ ರಫೇಲ್ ವ್ಯವಸ್ಥೆ ಹೊಂದಿದ 2ನೇ ದೇಶ ಭಾರತವಾಗಲಿದೆ. ಇವುಗಳನ್ನು ಐಎನ್‌ಎಸ್ ವಿಕ್ರಾಂತ್ ಹಾಗೂ ಐಎನ್‌ಎಸ್ ವಿಕ್ರಮಾದಿತ್ಯ ನೌಕೆಯಲ್ಲಿ ಅಳವಡಿಸಲಾಗುತ್ತದೆ.
ಭಾರತೀಯ ನೌಕಾಪಡೆಯು ಮಿಗ್-29 ಗಳನ್ನು ಐಎನ್‌ಎಸ್ ವಿಕ್ರಾಂತ್‌ನಲ್ಲಿ ಬಳಸಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಿಗ್‌ಗಳು ವಿಫಲವಾಗುತ್ತಿರುವ ಹಿನ್ನೆಲೆಯಲ್ಲಿ ರಫೇಲ್ – ಎಂ ಅಥವಾ ಎಫ್-18 ಸೂಪರ್ ಹಾರ್ನೆಟ್ ಯುದ್ಧ ವಿಮಾನಗಳತ್ತ ನೌಕಾಪಡೆ ಮುಖ ಮಾಡಿತ್ತು. ಇದರ ಸಲುವಾಗಿ ಗೋವಾದಲ್ಲಿ ಈ ಎರಡನ್ನೂ ಪರೀಕ್ಷೆಗೆ ಒಳಪಡಿಸಿ ರಫೇಲ್ – ಎಂ ಅನ್ನು ಆಯ್ಕೆ ಮಾಡಿತು. ಜತೆಗೆ ತೇಜಸ್ ಲೈಟ್ ಕಾಂಬಾಕ್ಟ್‌ನ ನೌಕಾ ಆವೃತ್ತಿಯನ್ನು ಬಳಸುವ ಆಲೋಚನೆಯೂ ನೌಕಾಪಡೆಯದ್ದು. ರಕ್ಷಣ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ( ಡಿಆರ್‌ಡಿಓ) ತೇಜಸ್ ಅನ್ನು ವಿನ್ಯಾಸಗೊಳಿಸುತ್ತಿದ್ದು, ಐದಾರು ವರ್ಷಗಳಲ್ಲಿ ನೌಕಾಸೇನೆಗೆ ಸೇರಿಕೊಳ್ಳುವ ಸಂಭವವಿದೆ. ಸ್ಕಾರ್ಪಿಯನ್ ಜಲಾಂತರ್ಗಾಮಿ ನೌಕೆ
Related Articles
Advertisement
ಸ್ಕಾರ್ಪಿಯನ್ ಜಲಾಂತರ್ಗಾಮಿಯ ವಿಶೇಷತೆ ಉದ್ದ: 200 ಅಡಿ ಎತ್ತರ: 40 ಅಡಿ
ನೀರಿನೊಳಗೆ ಪ್ರತೀ ಗಂಟೆಗೆ 37 ಕಿ.ಮೀ.ಚಲಿಸುತ್ತದೆ,
ನೀರಿನ ಮೇಲ್ಭಾಗದಲ್ಲಿ ಪ್ರತೀ ಗಂಟೆಗೆ 20 ಕಿ.ಮೀ ವೇಗದಲ್ಲಿ ಚಲಿಸುತ್ತದೆ.
35 ನಾವಿಕರು ಹಾಗೂ 8 ಆಫೀಸರ್‌ಗಳನ್ನು ಹೊತ್ತೂಯ್ಯುವ ಸಾಮರ್ಥ್ಯವಿದೆ.
50 ದಿನಗಳ ವರೆಗೆ ಸಮುದ್ರದಲ್ಲಿ ಇರುವಷ್ಟು ಆಹಾರ ಸೇರಿದಂತೆ ಇತರೆ ಸರಕುಗಳನ್ನೂ ಹೊಂದುವ ಸಾಮರ್ಥ್ಯಇದೆ.
ಈ ಸಬ್‌ಮೇರಿನ್‌ಗಳು ಆ್ಯಂಟಿ ಸಫೇìಸ್, ಆ್ಯಂಟಿ ಸಬ್‌ಮೇರಿನ್ ವಾರ್‌ಫೇರ್, ಸ್ಪೆಶಲ್ ಆಪರೇಶನ್‌ಗಳಲ್ಲಿ , ಗುಪ್ತಚರ ಮಾಹಿತಿಗಳನ್ನು ಸಂಗ್ರಹಿಸುವಲ್ಲಿಯೂ ಬಳಸಲಾಗುತ್ತದೆ. ಭಾರತವು ವಿಶ್ವದ ಅತೀ ದೊಡ್ಡ ಶಸ್ತ್ರಾಸ್ತ್ರ ಖರೀದಿದಾರ ಮತ್ತು ರಷ್ಯಾದ ಪ್ರಮುಖ ಗ್ರಾಹಕ. ಕೆಲವು ವರ್ಷಗಳಿಂದ ಭಾರತವು ಫ್ರಾನ್ಸ್‌ನಿಂದಲೂ ಶಸ್ತ್ರಾಸ್ತ್ರಗಳನ್ನು ಖರೀದಿಸುತ್ತಿದೆ. ಈ ಖರೀದಿಗಳು ಭಾರತ ರಕ್ಷಣ ಕ್ಷೇತ್ರದ ಸಾಮರ್ಥ್ಯವನ್ನು ಹೆಚ್ಚಿಸಲಿವೆ.