ಕಳೆದ ತಿಂಗಳಷ್ಟೇ ರಷ್ಯಾಕ್ಕೆ ಹೋಗಿ ಬಂದು ಶಾಂತಿ ಮಂತ್ರ ಪಠಿಸಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಅದರ ಬದ್ಧ
ಎದುರಾಳಿ ಉಕ್ರೇನ್‌ಗೂ ಹೋಗಿ ಅಲ್ಲಿಯೂ ಶಾಂತಿ ಮಂತ್ರ ಬಿತ್ತಿದ್ದಾರೆ. ಬದ್ಧ ಎದುರಾಳಿಗಳನ್ನು ಒಂದುಗೂಡಿಸಿ,
“ವಿಶ್ವ ಬಂಧು’ ಎಂಬ ಹೆಗ್ಗಳಿಕೆಯನ್ನು ಗಳಿಸಿಕೊಳ್ಳಲು ಮೋದಿಗೆ ಇರುವ ಮಹತ್ವದ ಅವಕಾಶ ಎಂದೇ ಈ ಪ್ರಯತ್ನವನ್ನು ಬಿಂಬಿಸಲಾಗುತ್ತಿದೆ. ಭಾರತದ ವಿಶ್ವ ಬಂಧು ವಿದೇಶಾಂಗ ನೀತಿ ಕುರಿತಾದ ಮಾಹಿತಿ ಇಲ್ಲಿದೆ.
ಏನಿದು “ವಿಶ್ವಬಂಧು’ ಪರಿಕಲ್ಪನೆ?
“ವಸುಧೈವ ಕುಟುಂಬಕಂ’. ಇದು ಜಗತ್ತಿಗೆ ಭಾರತ ಸಾರಿದ ಸಂದೇಶ. ಅಂದರೆ ಇಡೀ ವಿಶ್ವವೇ ಒಂದು ಕುಟುಂಬವಿದ್ದಂತೆ. ಇಲ್ಲಿ ಯಾರೂ ಎದುರಾಳಿಗಳಲ್ಲ. ಇದೇ ನೀತಿಯನ್ನು ಭಾರತವು ಈಗ “ವಿಶ್ವಬಂಧು’ ಪರಿಕಲ್ಪನೆಯಡಿ ಜಾರಿ ಮಾಡುತ್ತಿದೆ. ಎಲ್ಲ ರಾಷ್ಟ್ರಗಳೊಂದಿಗೆ ಸ್ನೇಹವನ್ನು ಸಂಪಾದಿಸಿಕೊಂಡು ತನ್ನ ಗುರಿ ಗಳನ್ನು ಸಾಧಿಸುವುದು ಇದರ ಸಾರ.
ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರ ಮಾತಿನಲ್ಲಿ ಹೇಳುವುದಾದರೆ, “”ತನ್ನ ರಾಷ್ಟ್ರೀಯ ಹಿತಾಸಕ್ತಿಗಳಿಗಾಗಿ ವಿವಿಧ ದೇಶಗಳೊಂದಿಗೆ ವ್ಯವಹರಿಸುವ ಮತ್ತು ಪಾಲುದಾರಿಕೆಯನ್ನು ಸ್ಥಾಪಿಸುವ ದೇಶವನ್ನು ವಿಶ್ವಬಂಧು ಎಂದು ಕರೆಯಲಾಗುತ್ತದೆ. ವಿಶ್ವಬಂಧು ಜಾಗತಿಕ ಮಟ್ಟದಲ್ಲಿ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನೀತಿಯನ್ನು ಜಾರಿ ಮಾಡುವುದೇ ಆಗಿದೆ.” ಕಳೆದ 10 ವರ್ಷದಲ್ಲಿ ಪಾಕಿಸ್ಥಾನವೊಂದನ್ನು ಹೊರತು ಪಡಿಸಿ ವಿಶ್ವದ ಯಾವುದೇ ರಾಷ್ಟ್ರದೊಂದಿಗೂ ಕಹಿ ಸ್ನೇಹವನ್ನು ಹೊಂದಿಲ್ಲ. ಎಲ್ಲ ರಾಷ್ಟ್ರಗಳೊಂದಿಗೆ ಸಹಭಾಗಿತ್ವವನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗಿದೆ. ಆ ಮೂಲಕ ತನ್ನ ಧ್ಯೇಯೋದ್ದೇಶಗಳನ್ನು ಈಡೇರಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಿದೆ.
ವಿರೋಧ ನಡುವೆ ರಷ್ಯಾ ಜತೆ ಸ್ನೇಹ!
ಉಕ್ರೇನ್-ರಷ್ಯಾ ಯುದ್ಧ ಹಿನ್ನೆಲೆಯಲ್ಲಿ ಈಗಲೂ ಶೀತಲ ಸಮರ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದಿಷ್ಟು ರಾಷ್ಟ್ರಗಳು ಅಮೆರಿಕದ ಪರವಾಗಿ ಮತ್ತೂಂದಿಷ್ಟು ರಾಷ್ಟ್ರಗಳು ರಷ್ಯಾ ಪಾಳಯದಲ್ಲಿ ಗುರುತಿಸಿಕೊಂಡಿವೆ. ಭಾರತದ ಹೆಗ್ಗಳಿಕೆ ಎಂದರೆ, ಅಂತಾರಾಷ್ಟ್ರೀಯ ತೀವ್ರ ಒತ್ತಡದ ಹೊರತಾಗಿಯೂ ರಷ್ಯಾದ ಜತೆಗಿನ ಸಹಭಾಗಿತ್ವವನ್ನು ಮುಂದುವರಿಸಿದೆ.
Advertisement
ಯುದ್ಧ ಆರಂಭದ ಕಾಲದಲ್ಲಿ ರಷ್ಯಾ ಜತೆ ತೈಲ ಮಾರಾಟ ಒಪ್ಪಂದವನ್ನು ಭಾರತ ಮಾಡಿಕೊಂಡಿತ್ತು. ಅದೇ ಕಾಲಕ್ಕೆ ಅಮೆರಿಕದ ಜತೆಗಿನ ತನ್ನ ನೀತಿಗಳನ್ನು ನವೀಕರಿಸುವಲ್ಲಿ ಯಶಸ್ವಿ ಯಾಗಿದೆ. ರಷ್ಯಾಕ್ಕೆ ಹೋಗಿ ಯುದ್ಧವೇ ಎಲ್ಲದಕ್ಕೂ ಪರಿಹಾರ ಅಲ್ಲ ಎಂದು ಹೇಳುವಷ್ಟು ಶಕ್ತಿಯನ್ನು ಬೆಳೆಸಿಕೊಂಡಿದೆ. ಈಗ ಮೋದಿ ಉಕ್ರೇನ್‌ಗೂ ಅದೇ ಕಿವಿಮಾತನ್ನು ಹೇಳುತ್ತಿದ್ದಾರೆ. ಇದೆಲ್ಲವೂ ಭಾರತ ಬೆಳೆಸಿಕೊಂಡಿರುವ ವಿಶ್ವಬಂಧು ನೀತಿಯ ಫಲ. ಪಾಕಿಸ್ಥಾನ ಮತ್ತು ರಷ್ಯಾದ ಪರಮ ಮಿತ್ರ ಚೀನದ ಜತೆಗೆ ಹೂಡಿಕೆ ಒಪ್ಪಂದಗಳನ್ನು ಮಾಡಿಕೊಳ್ಳುತ್ತಲೇ ಆ ದೇಶ ಸಾಮ್ರಾಜ್ಯಶಾಹಿ ನೀತಿಯನ್ನು ಟೀಕಿಸುವುದರಲ್ಲಿ ಹಿಂಜರಿಯುವುದಿಲ್ಲ.
ಸಂಕಷ್ಟದಲ್ಲೂ ಭಾರತ ನೆರವಿನ ಹಸ್ತ
ವಿಶ್ವ ಬಂಧು ಎಂದರೆ, ಸಹಭಾಗಿತ್ವ ಮತ್ತು ಪಾಲುದಾರಿಕೆ ಅಷ್ಟೇ ಅಲ್ಲ. ನೈಸರ್ಗಿಕ ವಿಪತ್ತು ಸೇರಿದಂತೆ ಯಾವುದೇ ಸಂಕಷ್ಟಕ್ಕೆ ಸಿಲು ಕಿದಾಗ ಎಲ್ಲಕ್ಕಿಂತ ಮೊದಲು ನೆರವಿನ ಹಸ್ತ ಚಾಚುವುದು ವಿಶ್ವ ಬಂಧು ನೀತಿಯೇ ಭಾಗವೇ ಆಗಿದೆ. ಕೋವಿಡ್ ಕಾಲದಲ್ಲಿ ಭಾರತ 150 ಅಧಿಕ ರಾಷ್ಟ್ರಗಳಿಗೆ ಲಸಿಕೆಗಳನ್ನು ರವಾ ನಿಸಿತ್ತು. ಟರ್ಕಿಯಲ್ಲಿ ಭೂಕಂಪ ಸಂಭವಿಸಿದಾಗ ಎಲ್ಲಕ್ಕಿಂತ ಮೊದಲ ನೆರವಿನ ಹಸ್ತ ಚಾಚಿತು. ಇಸ್ರೇಲ್ ದಾಳಿ ಯಿಂದ ಕಂಗೆಟ್ಟಿರುವ ಪ್ಯಾಲೇಸ್ತೀನಿಗಳಿಗೂ ಭಾರತ ಸಹಾಯ ಮಾಡುತ್ತಿದೆ. ಆರ್ಥಿಕ ದಿವಾಳಿಯಿಂದ ಕಂಗೆಟ್ಟ ಶ್ರೀಲಂಕಾ, ಬಾಂಗ್ಲಾದೇಶ ಗಳಿಗೂ ನೆರವು ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ.
ಗ್ಲೋಬಲ್ ಸೌತ್ ರಾಷ್ಟ್ರಗಳಿಗೆ ಭಾರತದ ನಾಯಕತ್ವ
ಇತ್ತೀಚಿನ ವರ್ಷಗಳಲ್ಲಿ ಗ್ಲೋಬಲ್ ಸೌತ್(ದಕ್ಷಿಣ ಗೋಳಾರ್ಧ) ಹೆಚ್ಚು ಮಹತ್ವವನ್ನು ಪಡೆದುಕೊಂಡಿದೆ. ಒಂದು ಕಾಲದಲ್ಲಿ ಥರ್ಡ್ ವರ್ಲ್x ಎಂದು ಕರೆಯಿಸಿಕೊಳ್ಳುತ್ತಿದ್ದ ಈ ರಾಷ್ಟ್ರಗಳು ಈಗ ಉತ್ತರ ಗೋಳಾರ್ಧದ ಅಮೆರಿಕ, ಯುರೋಪಿನ ರಾಷ್ಟ್ರಗಳಿಗೆ ಸರಿಸಮವಾಗಿ ಬೆಳೆಯುತ್ತಿವೆ. ಇದರಲ್ಲಿ ಅಭಿವೃದ್ಧಿಯ ಮುಂಚೂಣಿಯಲ್ಲಿ ಭಾರತ ಮತ್ತು ಚೀನಗಳಿವೆ. ಕಳೆದ 10 ವರ್ಷದಲ್ಲಿ ಭಾರತ ಅಕ್ಷರಶಃ ದಕ್ಷಿಣ ಗೋಳಾರ್ಧ ರಾಷ್ಟ್ರಗಳ ಧ್ವನಿಯಾಗಿ ಕೆಲಸ ಮಾಡುತ್ತಿದೆ.
ದಕ್ಷಿಣ ಗೋಳಾರ್ಧದಲ್ಲಿ ಪಾಶ್ಚಿಮಾತ್ಯ ರಾಷ್ಟ್ರಗಳು ಮೂಗು ತೂರಿಸುವುದನ್ನು ಭಾರತ ವಿರೋಧಿಸಿಕೊಂಡೇ ಬಂದಿದೆ. ಕಳೆದ ವರ್ಷಾಂತ್ಯ ಭಾರತದಲ್ಲಿ ನಡೆದ ಜಿ20 ಶೃಂಗದಲ್ಲಿ ಮೋದಿ ಗ್ಲೋಬಲ್ ಸೌತ್ ನೀತಿ ಪ್ರತಿಪಾದಿಸಿದರು. ಏಷ್ಯಾ ಮತ್ತು ಆಫ್ರಿಕಾ ಹಾಗೂ ಉತ್ತರ ಅಮೆರಿಕದ ಅಭಿವೃದ್ಧಿಶೀಲ, ಕಡಿಮೆ ಅಭಿವೃದ್ಧಿ ಅಥವಾ ಅಭಿವೃದ್ಧಿಯೇ ಇಲ್ಲದ ರಾಷ್ಟ್ರಗಳನ್ನು ಉಲ್ಲೇಖೀಸಲು ಗ್ಲೋಬಲ್ ಸೌತ್ ಎಂದು ಉಲ್ಲೇಖೀಸಲಾಗುತ್ತಿದೆ. ವಿಶೇಷ ಎಂದರೆ, ಈ ಭಾಗದ ಎಲ್ಲ ರಾಷ್ಟ್ರಗಳು ಒಂದಿಲ್ಲ ಒಂದು ರೀತಿಯಲ್ಲಿ ಯುರೋಪಿಯನ್ ರಾಷ್ಟ್ರಗಳಿಗೆ ವಸಾಹತುಗಳಾಗಿದ್ದವು.
ನೆಹರೂ “ಅಲಿಪ್ತ ನೀತಿ’ ಕೈಬಿಟ್ಟಿತಾ ಭಾರತ?
ಭಾರತ ಸ್ವಾತಂತ್ರ್ಯ ಪಡೆಯುವ ಹೊತ್ತಿಗೆ ಇಡೀ ಜಗತ್ತು ಯುದೊœàತ್ತರ ಸ್ಥಿತಿಯನ್ನು ಎದುರಿ ಸುತ್ತಿತ್ತು. ಮುಂದೆ 1960ರ ದಶಕದ ಹೊತ್ತಿಗೆ ಶೀತಲಸಮರಕ್ಕೆ ಜಾರಿತ್ತು. ಈ ಹಂತದಲ್ಲಿ ಭಾರ ತವು ಅಮೆರಿಕ ಅಥವಾ ರಷ್ಯಾ ಪರವಾಗಿ ನಿಲ್ಲದೇ ಅಲಿಪ್ತ ವಿದೇಶಾಂಗ ನೀತಿಯನ್ನು ಅಳ ವಡಿಸಿಕೊಂಡಿತು. 1961ರಲ್ಲಿ ಪ್ರಧಾನಿ ನೆಹರೂ, ಈಜಿಪ್ಟ್ ಅಧ್ಯಕ್ಷ ಗಮೆಲ್ ಅಬ್ಧೆಲ್ ನಾಸರ್, ಯುಗೋಸ್ಲಾವಿಯಾ ಅಧ್ಯಕ್ಷ ಟಿಟೊ ಸೇರಿ ಅಲಿಪ್ತ ನೀತಿಯನ್ನು ರೂಪಿಸಿದರು.
ಈ ನೀತಿಯ ಅನುಸಾರ ಭಾರತವು ಅಮೆರಿಕ ಮತ್ತು ರಷ್ಯಾ ಕೂಟಗಳಿಂದ ಸಮಾನ ಅಂತರವನ್ನು ಕಾಯ್ದುಕೊಂಡಿತು. ನೆಹರೂ ಪ್ರಣೀತ ಈ ನೀತಿಯನ್ನು ಭಾರತವೇನೂ ಕೈ ಬಿಟ್ಟಿಲ್ಲ. ಅದನ್ನೇ ಇನ್ನೊಂದು ಹಂತಕ್ಕೆ ತೆಗೆದುಕೊಂಡು ಹೋಗಿ, ವಿಶ್ವಬಂಧು ಕಲ್ಪನೆಯಡಿ ಹೊಸ ನೀತಿಯನ್ನು ತನ್ನದಾಗಿಸಿಕೊಂಡಿದೆ.
“ವಿಶ್ವಬಂಧು ಭಾರತ’ ಜೈಶಂಕರ್ ಪುಸ್ತಕ
ಜಾಗತಿಕ ಮಟ್ಟದಲ್ಲಿ ಭಾರತ ಶಕ್ತಿಯನ್ನು ಗುರುತಿಸುವ ಕೃತಿಯೇ “ವಿಶ್ವಬಂಧು ಭಾರತ’. ಈ ಕೃತಿಯನ್ನು ವಿದೇಶಾಂಗ ಸಚಿವ ಎಸ್.ಜೈಶಂಕರ್ ರಚಿಸಿದಾರೆ. ಮೋದಿ ಸರಕಾರ ಹೊಸ ವಿದೇಶಾಂಗ ನೀತಿಯ ಹಿಂದಿನ ಕತೃìತ್ವ ಶಕ್ತಿಯೂ ಹೌದು. ಹಲವು ಸವಾಲುಗಳ ನಡು ವೆಯೂ ಜಾಗತಿಕವಾಗಿ ಭಾರತದ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ವಿದೇಶಾಂಗ ಸಚಿವರಾಗಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ಇದಕ್ಕೆ ಮೋದಿ ಒತ್ತಾಸೆಯಾಗಿ ನಿಂತಿದ್ದಾರೆ.
ಯುದ್ಧದ ನೆಲವಲ್ಲ, ಬುದ್ಧನ ನೆಲ: ಮೋದಿ
ಮೋದಿ ಇತ್ತೀಚೆಗೆ ಕೈಗೊಂಡಿರುವ ವಿದೇಶ ಪ್ರವಾಸಗಳಲ್ಲಿ ಶಾಂತಿ ಮಂತ್ರವನ್ನು ಪಠಿಸುತ್ತಿದ್ದಾರೆ. ನಮ್ಮದು ಬುದ್ಧನ ನೆಲ, ಯುದ್ಧದ ನೆಲವಲ್ಲ ಎನ್ನುತ್ತಲೇ ಭಾರತ ಎಂದಿಗೂ ಮಾತುಕತೆಯಲ್ಲಿ ನಂಬಿಕೆ ಹೊಂದಿದೆ ಎಂದು ಪ್ರತಿಪಾದಿಸುತ್ತಾರೆ. ಅವರ ಈ ಮಾತುಗಳುಬದಲಾದ ವಿದೇಶಾಂಗ ನೀತಿಯ ಪ್ರತಿಬಿಂಬಗಳಾಗಿವೆ. ಈಗ ಉಕ್ರೇನ್‌ನ ನೆಲದಲ್ಲಿ ನಿಂತೂ ಮೋದಿ ಅದೇ ಶಾಂತಿ ಸಂದೇಶ ಸಾರಿದ್ದಾರೆ. ಭಾರತವು ಎಲ್ಲ ರಾಷ್ಟ್ರಗಳನ್ನು ಸಮನಾಗಿ ಕಾಣುತ್ತದೆ ಎಂಬುದನ್ನು ಮನಗಾಣಿಸುತ್ತಿದ್ದಾರೆ.
ರಷ್ಯಾ-ಉಕ್ರೇನ್ ನಡುವೆ ಮೋದಿ ಶಾಂತಿದೂತ
ಬಾಂಬ್, ಬುಲೆಟ್‌ಗಳ ಮಧ್ಯೆ ಶಾಂತಿ ಮಾತುಕತೆ ಅಸಾಧ್ಯ: ರಷ್ಯಾಕ್ಕೆ ಮೋದಿ ರಣರಂಗದಲ್ಲಿ ಯಾವುದೇ ಸಂಘರ್ಷಕ್ಕೆ ಪರಿಹಾರ ಸಿಗುವುದಿಲ್ಲ ಎಂದು ಪ್ರಧಾನಿ ಮೋದಿ ಆರು ವಾರಗಳ ಹಿಂದೆ ರಷ್ಯಾದ ಅಧ್ಯಕ್ಷ ಪುತಿನ್‌ಗೆ ಹೇಳಿದ್ದರು.
ಯುದ್ಧ ಸಾಕು, ಶಾಂತಿ ಸ್ಥಾಪನೆಗೆ ಭಾರತ ಮಧ್ಯಸ್ಥಿಕೆಗೆ ಸಿದ್ಧ: ಉಕ್ರೇನ್‌ಗೆ ಮೋದಿ ಈಗ ಯುದ್ಧಪೀಡಿತ ಉಕ್ರೇನ್ ಪ್ರವಾಸದ ಲ್ಲಿರುವ ಮೋದಿ, ಉಕ್ರೇನ್ ಮತ್ತು ರಷ್ಯಾ ಒಂದಾಗಬೇಕು. ಯುದ್ಧ ಎಲ್ಲದ್ದಕ್ಕೂ ಪರಿಹಾರ ಅಲ್ಲ ಎಂದು ಹೇಳಿದ್ದಾರೆ.