Advertisement

world’s most powerful Passport Index; 85ನೇ ಸ್ಥಾನದಲ್ಲಿ ಭಾರತ: ಹೆನ್ಲ ವರದಿ

12:25 AM Feb 20, 2024 | Team Udayavani |

ಹೊಸದಿಲ್ಲಿ: 2024ನೇ ಸಾಲಿನ ವಿಶ್ವದ ಬಲಿಷ್ಠ ಪಾಸ್‌ಪೋರ್ಟ್‌ ಸೂಚ್ಯಂಕದಲ್ಲಿ ಭಾರತವು ಕಳೆದ ಬಾರಿಗಿಂತ ಒಂದು ಸ್ಥಾನ ಕುಸಿಯುವುದರೊಂದಿಗೆ 85ನೇ ಸ್ಥಾನಕ್ಕೆ ಇಳಿದಿದೆ. ಹೆನ್ಲ ಸಂಸ್ಥೆಯು ಸೋಮವಾರ ಬಲಿಷ್ಠ ಪಾಸ್‌ಪೋರ್ಟ್‌ ಹೊಂದಿರುವ ದೇಶಗಳ ಪಟ್ಟಿ ಬಿಡುಗಡೆ ಮಾಡಿದೆ.

Advertisement

ಭಾರತದ ಪಾಸ್‌ಪೋರ್ಟ್‌ ಹೊಂದಿರುವವರು ಕಳೆದ ವರ್ಷ ವೀಸಾ ರಹಿತವಾಗಿ 60 ದೇಶಗಳಿಗೆ ಭೇಟಿ ನೀಡಬಹುದಿತ್ತು. ಈ ವರ್ಷ 62 ದೇಶಗಳಿಗೆ ತೆರಳಬಹುದಾಗಿದೆ. ಉಳಿದಂತೆ, ಫ್ರಾನ್ಸ್‌ನ ಪಾಸ್‌ಪೋರ್ಟ್‌ ಹೊಂದಿರುವವರು ಬರೋಬ್ಬರಿ 194 ದೇಶಗಳಿಗೆ ವೀಸಾ ರಹಿತವಾಗಿ ಭೇಟಿ ನೀಡಲು ಅನುಮತಿಯಿದ್ದು, ವಿಶ್ವದ ಅತೀ ಬಲಿಷ್ಠ ಪಾಸ್‌ಪೋರ್ಟ್‌ ಎನಿಸಿಕೊಂಡಿದೆ. ನೆರೆಯ ಮಾಲ್ದೀವ್ಸ್‌ 58ನೇ ಸ್ಥಾನ, ಪಾಕಿಸ್ಥಾನ 106ನೇ ಸ್ಥಾನ ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next