ಡಂಬುಲ: ಆತಿಥೇಯ ಶ್ರೀಲಂಕಾ ಎದುರಿನ ಮೊದಲ ಟಿ20 ಪಂದ್ಯವನ್ನು 34 ರನ್ನುಗಳಿಂದ ಗೆದ್ದು ಶುಭಾರಂಭ ಮಾಡಿರುವ ಭಾರತ ಶನಿವಾರ ದ್ವಿತೀಯ ಮುಖಾಮುಖಿಯಲ್ಲಿ ಸೆಣಸಲಿದೆ.
ಹರ್ಮನ್‌ಪ್ರೀತ್ ಕೌರ್ ಪಡೆ ಸರಣಿ ಗೆಲುವನ್ನು ಎದುರು ನೋಡುತ್ತಿದ್ದರೆ, ಶ್ರೀಲಂಕಾ ಸರಣಿ ಸಮಬಲದ ಒತ್ತಡಕ್ಕೆ ಸಿಲುಕಿದೆ.
ಮೊದಲ ಪಂದ್ಯವನ್ನು ಗೆದ್ದರೂ ಭಾರತ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದನ್ನು ಕಡೆಗಣಿಸುವಂತಿಲ್ಲ. ಅದರಲ್ಲೂ ಅಗ್ರ ಕ್ರಮಾಂಕದ ವೈಫಲ್ಯ ಎದ್ದು ಕಂಡಿತ್ತು.
ಇದನ್ನೂ ಓದಿ:ಅಭ್ಯಾಸ ಪಂದ್ಯ: ಚೇತೇಶ್ವರ್ ಪೂಜಾರ ವಿಫಲ, ರಿಷಭ್ ಪಂತ್ ಯಶಸ್ವಿ
ಮುಂದಿನ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ದೊಡ್ಡ ಪದಕವೊಂದನ್ನು ಗೆಲ್ಲುವ ಯೋಜನೆಯಲ್ಲಿರುವ ಭಾರತದ ಪಾಲಿಗೆ ಈ ಸರಣಿ ಮಹತ್ವದ್ದಾಗಿದ್ದು, ಲೋಪದೋಷಗಳನ್ನೆಲ್ಲ ನಿವಾರಿಸಿಕೊಳ್ಳಬೇಕಿದೆ. ಇದರಲ್ಲಿ ಟಾಪ್ ಆರ್ಡರ್ ಬ್ಯಾಟಿಂಗ್ ಕೂಡ ಒಂದು.