ನವದೆಹಲಿ: ರಕ್ಷಣಾ ಉತ್ಪಾದನಾ ಕ್ಷೇತ್ರದಲ್ಲಿ ಹೊಸ ಹೊಸ ದಾಖಲೆ ಬರೆಯುತ್ತಿರುವ ಭಾರತ, ಈಗ ರಕ್ಷಣಾ ಪರಿಕರಗಳ ರಫ್ತಿನಲ್ಲಿ ಹೊಸ ವಿಕ್ರಮ ಸಾಧಿಸಿದೆ.
2022-23ನೇ ವಿತ್ತೀಯ ವರ್ಷದಲ್ಲಿ 15,920 ಕೋಟಿ ರೂ. ಮೌಲ್ಯದ ವಸ್ತುಗಳನ್ನು ಮತ್ತು ಪರಿಕರಗಳನ್ನು ಉತ್ಪಾದಿಸಿ, ರಫ್ತು ಮಾಡಲಾಗಿದೆ. ಇದೊಂದು ದಾಖಲೆಯಾಗಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು “ಪ್ರಧಾನಿ ನರೇಂದ್ರ ಮೋದಿ ಅವರ ಸ್ಫೂರ್ತಿದಾಯಕ ನಾಯಕತ್ವದಲ್ಲಿ ನಮ್ಮ ದೇಶದ ರಕ್ಷಣಾ ರಫ್ತು ಏರಿಕೆಯಾಗುವುದು ಮುಂದುವರಿಯಲಿದೆ,’ ಎಂದು ಬರೆದುಕೊಂಡಿದ್ದಾರೆ. 2016-17ನೇ ವಿತ್ತೀಯ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ಪ್ರಮಾಣ ಹತ್ತು ಪಟ್ಟು ಹೆಚ್ಚಾಗಿದೆ.
2019ರಿಂದ 2021ರ ಅವಧಿಯಲ್ಲಿ ರಫ್ತು ಪ್ರಮಾಣದ ಕುಸಿತವಾಗಿತ್ತು. 2024-25ರ ವೇಳೆಗೆ 1,75,000 ಕೋಟಿ ರೂ.ಗಳ ರಕ್ಷಣಾ ಸಾಮಗ್ರಿಗಳ ಉತ್ಪಾದನೆ ಹಾಗೂ 35,000 ಕೋಟಿ ರೂ. ರಕ್ಷಣಾ ರಫ್ತು ಮಾಡುವ ಗುರಿಯನ್ನು ಭಾರತ ಹೊಂದಿದೆ.
Related Articles
ಯಾವ ಅಂಶ ರಫ್ತು?
ಅಡ್ವಾನ್ಸ್$x ಲೈಟ್ ಹೆಲಿಕಾಪ್ಟರ್, ಕ್ಷಿಪಣಿಗಳು, ಕರಾವಳಿ ತೀರ ರಕ್ಷಣಾ ನೌಕೆಗಳು, ವೈಯಕ್ತಿಕ ರಕ್ಷಣಾ ವ್ಯವಸ್ಥೆಗಳು, ಗೂಢಚರ್ಯೆ ವ್ಯವಸ್ಥೆಗೆ ಬೇಕಾಗಿರುವ ಹಲವು ವ್ಯವಸ್ಥೆಗಳು, ಹಗುರ ಯುದ್ಧ ವಿಮಾನ – ತೇಜಸ್, ವಿವಿಧ ರೀತಿಯ ಹೆಲಿಕಾಪ್ಟರ್‌ಗಳು, ಆರ್ಟಿಲಿಯರಿ ಗನ್‌ಗಳು, ಆಕಾಶ್ ಮಾದರಿಯ ಕ್ಷಿಪಣಿಗಳು ಸೇರಿವೆ
ಹಲವು ದೇಶಗಳ ಜತೆಗೆ ಮಾತುಕತೆ:
ಹಗುರ ಯುದ್ಧ ವಿಮಾನಗಳನ್ನು ಉತ್ಪಾದಿಸುವ ಭಾರತ, ಅದನ್ನು ಈಜಿಪ್ಟ್ ಮತ್ತು ಅರ್ಜೆಂಟೀನಾಕ್ಕೆ ಮಾರಾಟ ಮಾಡಲು ಮಾತುಕತೆ ನಡೆಸುತ್ತಿದೆ. ಈಜಿಪ್ಟ್ 20 ಮತ್ತು ಅರ್ಜೆಂಟೀನಾ 15 ವಿಮಾನಗಳ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದೆ ಇರಿಸಿದೆ. ಬೆಂಗಳೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಎಚ್‌ಎಎಲ್ ಫಿಲಿಪ್ಪೀನ್ಸ್‌ಗೆ ಸುಧಾರಿತ ಹಗುರ ಹೆಲಿಕಾಪ್ಟರ್‌ಗಳನ್ನು ಈಗಾಗಲೇ ರಫ್ತು ಮಾಡುತ್ತಿದೆ. ಕಳೆದ ವರ್ಷ ಆ ದೇಶಕ್ಕೆ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿ ಮಾರುವ ಬಗ್ಗೆ ಒಪ್ಪಂದವಾಗಿತ್ತು.
ಅತ್ಯುತ್ತಮ! ಇದು “ಮೇಕ್ ಇನ್ ಇಂಡಿಯಾ’ ಕಡೆಗೆ ಭಾರತದ ಪ್ರತಿಭೆ ಮತ್ತು ಉತ್ಸಾಹದ ಸ್ಪಷ್ಟ ಅಭಿವ್ಯಕ್ತಿಯಾಗಿದೆ. ಕಳೆದ ಕೆಲವು ವರ್ಷಗಳಿಂದ ರಕ್ಷಣಾ ವಲಯದಲ್ಲಿನ ಸುಧಾರಣೆಗಳು ಉತ್ತಮ ಫಲಿತಾಂಶ ನೀಡುತ್ತಿವೆ. ಭಾರತವನ್ನು ರಕ್ಷಣಾ ಉತ್ಪಾದನಾ ಕೇಂದ್ರವನ್ನಾಗಿ ಮಾಡುವ ಪ್ರಯತ್ನಗಳಿಗೆ ನಮ್ಮ ಸರ್ಕಾರದ ಬೆಂಬಲ ಮುಂದುವರಿಯಲಿದೆ.
– ನರೇಂದ್ರ ಮೋದಿ, ಪ್ರಧಾನಿ
ವರ್ಷ ರಫ್ತು ಮೌಲ್ಯ (ಕೋಟಿ ರೂ.ಗಳಲ್ಲಿ)
2021-22 12,814
2020-21 8,434
2019-20 9,115
2018-19 10,745
2017-18 4,682
2016-17 1,521
85- ಇಷ್ಟು ದೇಶಗಳಿಗೆ ಮಿಲಿಟರಿ ಸರಕು ಮತ್ತು ಸೇವೆ