Advertisement

India ರಕ್ಷಣ ಕ್ಷೇತ್ರದಲ್ಲಿ 1.27 ಲಕ್ಷ ಕೋಟಿ ಉತ್ಪಾದನೆ!

01:09 AM Jul 06, 2024 | Team Udayavani |

ಹೊಸದಿಲ್ಲಿ: ಭಾರತದ ರಕ್ಷಣ ಉತ್ಪಾದನೆಯ ಮೌಲ್ಯ 2023-24ನೇ ಸಾಲಿನಲ್ಲಿ ದಾಖಲೆಯ 1.27 ಲಕ್ಷ ಕೋಟಿ ರೂ. ತಲುಪಿದೆ. ಈ ಕುರಿತು ಮಾಹಿತಿ ನೀಡಿದ ರಕ್ಷಣ ಸಚಿವ ರಾಜ ನಾಥ್‌ ಸಿಂಗ್‌, 2022-23ನೇ ಸಾಲಿನಲ್ಲಿ 1,08,684 ಕೋಟಿ ರೂ. ಮೌಲ್ಯದ ಉತ್ಪಾದನೆಯಾಗಿತ್ತು. ಪ್ರಸಕ್ತ ವರ್ಷ 1,26,887 ಕೋಟಿ ರೂ. ಮೌಲ್ಯದ ಉತ್ಪಾದನೆಯಿಂದ ದಾಖಲೆಯ ಶೇ. 16.7ರಷ್ಟು ಪ್ರಗತಿಯಾಗಿದೆ. ಜತೆಗೆ ಪ್ರಸಕ್ತ ವರ್ಷದಲ್ಲಿ ದಾಖಲೆಯ 21,083 ಕೋಟಿ ರೂ. ರಕ್ಷಣ ರಫ್ತು ಆಗಿದ್ದು, ಶೇ. 32.5ರಷ್ಟು ಪ್ರಗತಿಯಾಗಿದೆ. ಕಳೆದ ವರ್ಷ 15,920 ಕೋಟಿ ರೂ. ರಫ್ತು ಆಗಿತ್ತು ಎಂದು ತಿಳಿಸಿದ್ದಾರೆ.

Advertisement

ಪ್ರಧಾನಿ ಹರ್ಷ: ರಕ್ಷಣ ಉತ್ಪಾದನ ಕ್ಷೇತ್ರದಲ್ಲಿ ದಾಖಲೆ ಪ್ರಮಾಣದಲ್ಲಿ ಉತ್ಪಾದನೆ ಆಗಿರುವುದಕ್ಕೆ ಪ್ರಧಾನಿ ಮೋದಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಕ್ಷೇತ್ರದಲ್ಲಿ ನಮ್ಮ ಸಾಮರ್ಥ್ಯ ವೃದ್ಧಿಸಲು ಪೂರಕ ವಾತಾವರಣ ಒದಗಿಸುವುದರ ಜತೆಗೆ ಜಾಗತಿಕ ಮಟ್ಟದಲ್ಲಿ ಭಾರತವನ್ನು ರಕ್ಷಣ ಉತ್ಪಾದನ ಕೇಂದ್ರವನ್ನಾಗಿಸಲು ನಾವು ಬದ್ಧರಾಗಿದ್ದೇವೆ. ಈ ಸಾಧನೆಯಿಂದ ನಮ್ಮ ಭದ್ರತಾ ವ್ಯವಸ್ಥೆ ಅಧಿಕವಾಗಲಿದ್ದು, ಮತ್ತಷ್ಟು ಆತ್ಮನಿರ್ಭರರನ್ನಾಗಿ ಮಾಡಿದೆ ಎಂದು ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next