Advertisement
ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ 6 ವಿಕೆಟ್ ಕಳೆದುಕೊಂಡು 119 ರನ್ ದಾಖಲಿಸಿತು. ಈ ಸಾಧಾರಣ ಮೊತ್ತದ ಬೆನ್ನತ್ತಿದ್ದ ಭಾರತ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿ ಒಂದು ರನ್‌ಗಳ ಹಿನ್ನಡೆಯಿಂದ ಸೋತು ಟೂರ್ನಿಯನ್ನು ಕೊನೆಗೊಳಿಸಿದೆ.
ಸುಲಭ ಮೊತ್ತದ ಬೆನ್ನೇರಿದ ಭಾರತ ಆರಂಭಿಕ ಆಟಗಾರ್ತಿ ಹಲೀìನ್ ಡಿಯೋಲ್ ಅವರನ್ನು ಬೇಗನೇ ಕಳೆದುಕೊಂಡರೂ, ನಾಯಕಿ ಸ್ಮತಿ ಮಂಧನಾ ಎಚ್ಚರಿಕೆ ಆಟವಾಡಿ ಅರ್ಧಶತಕ ಸಿಡಿಸಿ ತಂಡಕ್ಕೆ ನೆರವಾದರು. ಮೊದಲೆರಡು ಪಂದ್ಯಗಳಲ್ಲೂ ವಿಫಲರಾಗಿದ್ದ ಸ್ಮತಿ ಇಲ್ಲಿ 58 ರನ್ ಬಾರಿಸಿ ಮಿಂಚಿದರು. ಯುವ ಆಟಗಾರ್ತಿ ಜೆಮಿಮಾ ರೋಡ್ರಿಗಸ್ ಗಳಿಸಿದ್ದು 11 ರನ್. ಇವರ ಬಳಿಕ ಬಂದ ಮಿಥಾಲಿ ರಾಜ್ ಎಚ್ಚರಿಕೆಯ ಆಟವಾಡಿ ಸ್ಮತಿ ಜತೆ ಸೇರಿ ತಂಡವನ್ನು ದಡ ತಲುಪಿಸುವ ಪ್ರಯತ್ನಪಟ್ಟರು. ಆದದೆ ಸ್ಮತಿ ಬಳಿಕ ಬಂದ ಆಟಗಾರ್ತಿಯರು ಮಿಥಾಲಿಗೆ (32 ಎಸೆತಗಳಲ್ಲಿ 30 ರನ್) ಸಾಥ್ ನೀಡದ ಕಾರಣ ತಂಡಕ್ಕೆ ಮುಳುವಾಗಿ ಪರಿಣಮಿಸಿತು. ಸ್ಮತಿ ಬಳಿಕ ಬಂದ ಭಾರತಿ 13 ಎಸೆತಗಳಲ್ಲಿ ಕೇವಲ 5 ರನ್ ಗಳಿಸಿ ದುಬಾರಿಯಾದರು. ಕೊನೆಯ ಓವರ್‌ನಲ್ಲಿ ಭಾರತಕ್ಕೆ ಬೇಕಾಗಿದ್ದದ್ದು ಕೇವಲ 3 ರನ್. 19. 4 ಎಸೆತದಲ್ಲಿ ಭಾರತಿ, 19.5 ಎಸೆತದಲ್ಲಿ ಅನುಜಾ ಪಾಟೀಲ್ ವಿಕೆಟ್ ಒಪ್ಪಿಸಿದ ಕಾರಣ ಭಾರತ 1 ರನ್‌ನಿಂದ ಸೋತಿತು. ಕೊನೆಯವರೆಗೂ ಮೈದಾನದಲ್ಲಿ ಮಿಥಾಲಿ ಇದ್ದರೂ ಕೊನೆಯ ಓವರಿನ ಒಂದೇ ಒಂದು ಎಸೆತ ಎದುರಿಸುವ ಅವಕಾಶ ಸಿಗದೆ ಭಾರತ ಸೋಲುವ ಪರಿಸ್ಥಿತಿ ಬಂದೊದಗಿತು. ಇಂಗ್ಲೆಂಡ್ ಭರ್ಜರಿ ಆಟ
ಟಾಸ್ ಗೆದ್ಧು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್‌ಗೆ ಉತ್ತಮ ಆರಂಭವೇ ದೊರಕಿತು. 7 ಓವರ್‌ಗಳಲ್ಲಿ ಆರಂಭಿಕ ಆಟಗಾರರಿಂದ ಭರ್ಜರಿ 51 ರನ್ ಹರಿದು ಬಂತು. ಆದರೆ ಈ ಜೋಡಿಗೆ ಅನುಜಾ ಪಾಟೀಲ್ ಬ್ರೇಕ್ ಹಾಕಿದರು. ಆನಂತರ ಬಂದ ಆಟಗಾರರು ರನ್ ಗಳಿಸಲು ವಿಫಲರಾದರು. 5ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಆ್ಯಮಿ ಜೋನ್ಸ್‌ರವರ ತಾಳ್ಮೆಯ ಬ್ಯಾಟಿಂಗ್ ನೆರವಿನಿಂದ ತಂಡದ ಮೊತ್ತ 100 ಗಡಿ ದಾಟಿತು. ಭಾರತದ ಪರ ಅನುಜಾ ಪಾಟೀಲ್, ಹಲೀìನ್ ಡಿಯೋಲ್ ತಲಾ 2 ವಿಕೆಟ್ ಕಿತ್ತರು.
Related Articles
Advertisement
ಸಂಕ್ಷಿಪ್ತ ಸ್ಕೋರ್: ಇಂಗ್ಲೆಂಡ್- 20 ಓವರ್‌ಗಳಲ್ಲಿ 6 ವಿಕೆಟ್‌ಗೆ 119( ಆ್ಯಮಿ ಜೋನ್ಸ್ 26, ಟಾಮಿ ಬೇಮಂಟ್ 29, ಅನುಜಾ ಪಾಟೀಲ್ 13ಕ್ಕೆ 2, ಹಲೀìನ್ ಡಿಯೋಲ್ 13ಕ್ಕೆ 2), ಭಾರತ-20 ಓವರ್‌ಗಳಲ್ಲಿ 6 ವಿಕೆಟ್‌ಗೆ 118(ಸ್ಮತಿ ಮಂಧನಾ 58, ಮಿಥಾಲಿ ರಾಜ್ ಔಟಾಗದೆ 30, ಕೇಟ್ ಕ್ರೊಸ್ 24ಕ್ಕೆ 2).