Advertisement

ಟೆಸ್ಟ್‌ ಸರಣಿಗಾಗಿ ಭಾರತ-ಇಂಗ್ಲೆಂಡ್‌ ಕ್ರಿಕೆಟಿಗರ ಅಭ್ಯಾಸ ಆರಂಭ

12:10 AM Feb 03, 2021 | Team Udayavani |

ಚೆನ್ನೈ : ಮಹತ್ವದ ಟೆಸ್ಟ್‌ ಸರಣಿಗಾಗಿ ಭಾರತ ಮತ್ತು ಪ್ರವಾಸಿ ಇಂಗ್ಲೆಂಡ್‌ ತಂಡದ ಕ್ರಿಕೆಟಿಗರು ಮಂಗಳವಾರ ಅಭ್ಯಾಸಕ್ಕೆ ಇಳಿದರು.

Advertisement

ಕಳೆದ 6 ದಿನಗಳಿಂದ ಕ್ವಾರಂಟೈನ್‌ನಲ್ಲಿದ್ದ ಉಭಯ ತಂಡಗಳ ಆಟಗಾರರ 3ನೇ ಕೋವಿಡ್‌-19 ವರದಿ ನೆಗೆಟಿವ್‌ ಬಂದ ಕಾರಣ ಎಲ್ಲರೂ ನೆಟ್ಸ್‌ನಲ್ಲಿ ಅಭ್ಯಾಸ ನಡೆಸಿದರು. ಆದರೆ ಇವರಿಗೆ ಸಿಗುವ ಅಭ್ಯಾಸದ ಅವಧಿ 3 ದಿನ ಮಾತ್ರ.

ಸ್ಫೂರ್ತಿ ತುಂಬಿದ ಶಾಸ್ತ್ರಿ
ನೆಟ್‌ ಅಭ್ಯಾಸಕ್ಕೂ ಮುನ್ನ ಟೀಮ್‌ ಇಂಡಿಯಾ ಮುಖ್ಯ ಕೋಚ್‌ ರವಿ ಶಾಸಿŒ ತಂಡದ ಆಟಗಾರರನ್ನು ಉದ್ದೇಶಿಸಿ ಸ್ಫೂರ್ತಿಯ ಮಾತುಗಳನಾಡಿದರು. ಈ ಮೂಲಕ ಮತ್ತೂಂದು ಹೆ çವೋಲ್ಟೆàಜ್‌ ಟೆಸ್ಟ್‌ ಸರಣಿಗೆ ತಂಡದ ಆಟಗಾರರಿಗೆ ಉತ್ಸಾಹ ತುಂಬಿಸಿದರು.

ಭಾರತ ತಂಡ ಹೊರಾಂಗಣ ಅಭ್ಯಾಸ ಆರಂಭಿಸಿದ ಫೋಟೊವೊಂದನ್ನು ಬಿಸಿಸಿಐ ತನ್ನ ಟ್ವಿಟರ್‌ ಖಾತೆಯಲ್ಲಿ ಪ್ರಕಟಿಸಿದೆ. ಜತೆಗೆ ರವಿ ಶಾಸ್ತ್ರಿ ತಂಡದ ಆಟಗಾರರನ್ನು ಉದ್ದೇಶಿಸಿ ಮಾತನಾಡುತ್ತಿರುವ ಎರಡು ಫೋಟೋಗಳನ್ನು ಕೂಡ ಹಂಚಿಕೊಂಡಿದೆ.

“ಮೊದಲ ದಿನದ ನೆಟ್‌ ಅವಧಿಯಲ್ಲಿ ಕೋಚ್‌ ರವಿಶಾಸ್ತ್ರಿ ಆಟಗಾರರಿಗೆ ಉಪಯುಕ್ತ ಸಲಹೆ ನೀಡಿದರು’ ಎಂದು ತಿಳಿಸಿದೆ.

Advertisement

ಉತ್ಸಾಹದಲ್ಲಿ ಇಂಗ್ಲೆಂಡ್‌
ಇಂಗ್ಲೆಂಡ್‌ ತಂಡದ ಆಟಗಾರರಾದ ಬೆನ್‌ ಸ್ಟೋಕ್ಸ್‌, ಜೋಫ್ರ ಆರ್ಚರ್‌ ಹಾಗೂ ರೋರಿ ಬರ್ನ್ಸ್ ಕಳೆದ ವಾರವೇ ಕ್ವಾರಂಟೈನ್‌ ಅವಧಿ ಮುಕ್ತಾಯಗೊಳಿಸಿ ಅಭ್ಯಾಸ ಆರಂಭಿಸಿದ್ದರು. ಮಂಗಳವಾರ ತಂಡದ ಇತರ ಆಟಗಾರರರನ್ನು ಕೂಡಿಕೊಂಡರು. ಶ್ರೀಲಂಕಾಕ್ಕೆ ವೈಟ್‌ವಾಶ್‌ ಮಾಡಿಬಂದ ಆಂಗ್ಲರ ಪಡೆ ಬಹಳ ಉತ್ಸಾಹದಲ್ಲಿದ್ದಂತೆ ಕಂಡುಬಂತು.

ತವರಿನ ಸರಣಿಗೆ ಕಾತರ: ರಾಹುಲ್‌
ಮಣಿಕಟ್ಟಿನ ಗಾಯದಿಂದಾಗಿ ಆಸ್ಟ್ರೇಲಿಯ ಪ್ರವಾಸವನ್ನು ಅರ್ಧಕ್ಕೆ ಮೊಟಕುಗೊಳಿಸಿ ಭಾರತಕ್ಕೆ ವಾಪಾಸಾಗಿದ್ದ ಟೀಮ್‌ ಇಂಡಿಯಾ ಆಟಗಾರ ಕೆ.ಎಲ್‌. ರಾಹುಲ್‌ ಇದೀಗ ಸಂಪೂರ್ಣ ಚೇತರಿಸಿಕೊಂಡಿದ್ದು ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯನ್ನು ಎದುರು ನೋಡುತ್ತಿರುವುದಾಗಿ ಹೇಳಿದ್ದಾರೆ.

“ಪುನಶ್ಚೇತನ ಪ್ರಕ್ರಿಯೆಯನ್ನು ಯಶಸ್ವಿಯಾಗಿ ಪೂರ್ತಿಗೊಳಿಸಿದ್ದಕ್ಕೆ ಸಂತಸವಿದೆ. ಕ್ಷಮತೆ ಹಾಗೂ ಆರೋಗ್ಯದಲ್ಲಿ ಸಂಪೂರ್ಣ ಚೇತರಿಕೆ ಕಂಡುರುವುದಕ್ಕಿಂತ ದೊಡ್ಡ ಸಂತಸವಿಲ್ಲ. ಟೀಮ್‌ ಇಂಡಿಯಾ ಸೇರಿಕೊಂಡು ಆಡುವುದು ಗೌರವದ ವಿಚಾರ’ ಎಂದು ರಾಹುಲ್‌ ಟ್ವೀಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next