ಗುಜರಾತ್ ರಾಜಧಾನಿ ಗಾಂಧಿನಗರದಲ್ಲಿ “ವೈಬ್ರೆಂಟ್ ಗುಜರಾತ್ ಜಾಗತಿಕ ಹೂಡಿಕೆ ಸಮಾವೇಶ’ದ 10ನೇ ಆವೃತ್ತಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, “ಜಾಗತಿಕವಾಗಿ ಎದುರಿ ಸಿರುವ ಅನೇಕ ಅನಿಶ್ಚಿತತೆಗಳ ನಡುವೆ ಭಾರತ ಹೊಸ ಆಶಾಕಿರಣವಾಗಿ ಹೊರಹೊಮ್ಮಿದೆ. ಕ್ಷಿಪ್ರ ವಾಗಿ ಬೆಳೆಯುತ್ತಿರುವ ಜಗತ್ತಿನಲ್ಲಿ ಭಾರತವು “ವಿಶ್ವ ಮಿತ್ರ'(ವಿಶ್ವದ ಮಿತ್ರ)ನಾಗಿ ಹೊರ ಹೊಮ್ಮುತ್ತಿದೆ. ಜಗತ್ತಿನಲ್ಲಿ ಸದ್ಯ ಉಂಟಾಗಿರುವ ಅಸ್ಥಿರತೆಯ ನಡುವೆ ಜಗತ್ತು ಭಾರತವನ್ನು ಪ್ರಮುಖ ಆಧಾರಸ್ತಂಭವಾಗಿ ಪರಿಗಣಿಸುತ್ತದೆ ಎಂದರು. “ನಾವು ಗುರಿಗಳನ್ನು ನಿರ್ಧರಿಸಬಹುದು ಮತ್ತು ಅವುಗಳನ್ನು ಸಾಧಿಸಬಹುದು ಎಂಬ ಭರವಸೆಯನ್ನು ಭಾರತ ಜಗತ್ತಿಗೆ ಮೂಡಿಸಿದೆ. ಜಗತ್ತಿನ ಕಲ್ಯಾಣಕ್ಕಾಗಿ ಭಾರತದ ಬದ್ಧತೆ, ಸಮರ್ಪ ಣೆ ಜಗತ್ತನ್ನು ಹೆಚ್ಚು ಸುರಕ್ಷಿತ ಮತ್ತು ಸಮೃದ್ಧ ಗೊಳಿಸುತ್ತಿದೆ ಎಂದು ಮೋದಿ ಹೇಳಿದರು.
Advertisement
2 ಲಕ್ಷ ಕೋಟಿ ರೂ.ಹೂಡಿಕೆ: ಗೌತಮ್ ಅದಾನಿಗುಜರಾತ್ನಲ್ಲಿ ಅದಾನಿ ಸಮೂಹದಿಂದ ಮುಂದಿನ ಐದು ವರ್ಷಗಳಲ್ಲಿ 2 ಲಕ್ಷ ಕೋಟಿ ರೂ.ಗಳನ್ನು ಹೂಡಿಕೆ ಮಾಡಲಾಗುವುದು ಎಂದು ಉದ್ಯಮಿ ಗೌತಮ್ ಅದಾನಿ ಘೋಷಿಸಿ ದರು. ಅತೀ ದೊಡ್ಡ ಶುದ್ಧ ಇಂಧನ ಯೋಜನೆ ಜತೆಗೆ ಸೌರ ಮಾಡ್ನೂಲ್, ವಿಂಡ್ ಟರ್ಬೈನ್ , ಹೈಡ್ರೋಜನ್ ಎಲೆಕ್ಟ್ರೋಲೈಸರ್ ತಯಾರಿಕೆಗೆ ದೊಡ್ಡ ಕೈಗಾರಿಕೆ ಸ್ಥಾಪಿಸಲಿದೆ ಎಂದರು.