Advertisement
2,971 ಕೋಟಿ ರೂ. ಒಪ್ಪಂದಭಾರತೀಯ ವಾಯುಪಡೆ ಮತ್ತು ನೌಕಾ ಪಡೆಗೆ ಅಸ್ತ್ರ ಎಂಕೆ-1 ಕ್ಷಿಪಣಿಯನ್ನು ಸೇರ್ಪಡೆಗೊಳಿಸುವ ನಿಟ್ಟಿನಲ್ಲಿ ಮೇ 31ರಂದು ರಕ್ಷಣ ಇಲಾಖೆಯು ಭಾರತ್ ಡೈನಾಮಿಕ್ಸ್ ಲಿ.(ಬಿಡಿಎಲ್)ನೊಂದಿಗೆ 2,971 ಕೋಟಿ ರೂ. ಮೊತ್ತದ ಒಪ್ಪಂದ ಮಾಡಿಕೊಂಡಿದೆ.
ಅಸ್ತ್ರ ಎಂಕೆ-1 ಕ್ಷಿಪಣಿಯನ್ನು ಸುಖೋಯ್- 30 ಯುದ್ಧ ವಿಮಾನದೊಂದಿಗೆ ಸಂಯೋಜಿಸಲಾಗಿದೆ. ಈಗ ತೇಜಸ್ ಲಘು ಯುದ್ಧ ವಿಮಾನ ಸೇರಿದಂತೆ ಇತರ ಸಮರ ವಿಮಾನಗಳ ಸಾಮರ್ಥ್ಯವೂ ಇದರ ಜತೆಗೂಡಲಿದೆ. ಇದಲ್ಲದೇ ಐಎನ್‌ಎಸ್ ವಿಕ್ರಮಾದಿತ್ಯ ಯುದ್ಧನೌಕೆಯಿಂದ ಕಾರ್ಯ ನಿರ್ವಹಿಸಲ್ಪಡುವ ಮಿಗ್-29ಕೆ ಯುದ್ಧ ವಿಮಾನಗಳನ್ನು ಕೂಡ ಎಂಕೆ-1 ಕ್ಷಿಪಣಿಯೊಂದಿಗೆ ಸಜ್ಜುಗೊಳಿಸಲು ನಿರ್ಧರಿಸಲಾಗಿದೆ. ಭವಿಷ್ಯದ ಯುದ್ಧಗಳು ಎಷ್ಟು ಸಾಧ್ಯವೋ ಅಷ್ಟು ದೂರದಲ್ಲಿರುವ ಗುರಿಯನ್ನು ಪತ್ತೆಹಚ್ಚಿ, ಛೇದಿಸುವಂಥ ಸಾಮರ್ಥ್ಯವನ್ನು ಬಯಸುತ್ತವೆ. ಹೀಗಾಗಿ ವಾಯುಪಡೆಯ ಅಗತ್ಯತೆಗೆ ಅನುಗುಣವಾಗಿ ಅಸ್ತ್ರ ಎಂಕೆ-2 ಮತ್ತು ಎಂಕೆ-3ಯಂಥ ಕ್ಷಿಪಣಿಗಳನ್ನು ಭಾರತ ಅಭಿವೃದ್ಧಿಸಬೇಕಾಗಿದೆ.
ಅನಿಲ್ ಛೋಪ್ರಾ (ನಿವೃತ್ತ ಏರ್ ಮಾರ್ಷಲ್),
Related Articles
ಅಸ್ತ್ರ ಎಂಕೆ-1 ಕ್ಷಿಪಣಿಯ ವ್ಯಾಪ್ತಿ 100 ಕಿ.ಮೀ.
ಅಸ್ತ್ರ ಎಂಕೆ-1 ಕ್ಷಿಪಣಿಯ ವ್ಯಾಪ್ತಿ 160 ಕಿ.ಮೀ.
ಅಸ್ತ್ರ ಎಂಕೆ-1 ಕ್ಷಿಪಣಿಯ ವ್ಯಾಪ್ತಿ 300 ಕಿ.ಮೀ.
ಎಂಕೆ-2 ಸರಣಿಯ ಪರೀಕ್ಷೆ ಯಾವಾಗ? 2023 ರಲ್ಲಿ
ಎಂಕೆ-3 ಸರಣಿಯ ಕ್ಷಿಪಣಿ ಪರೀಕ್ಷೆ? 2024 ರಲ್ಲಿ
ಚೀನದ ಪಿಎಲ್-15 ಕ್ಷಿಪಣಿಯ ವ್ಯಾಪ್ತಿ 200 ಕಿ.ಮೀ.
ಭಾರತದಲ್ಲಿ ತಯಾರಾಗುತ್ತಿರುವ ಶಸ್ತ್ರಾಸ್ತ್ರ ವ್ಯವಸ್ಥೆಗಳು 310
Advertisement