Advertisement

Iran ಅಧ್ಯಕ್ಷ ಮೃತ್ಯು; ಭಾರತದಾದ್ಯಂತ ಒಂದು ದಿನದ ಶೋಕಾಚರಣೆ

09:13 PM May 20, 2024 | Team Udayavani |

ಹೊಸದಿಲ್ಲಿ: ಹೆಲಿಕಾಪ್ಟರ್ ಅಪಘಾತದಲ್ಲಿ ದಾರುಣ ಸಾವನ್ನಪ್ಪಿದ ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಅವರ ಗೌರವಾರ್ಥವಾಗಿ ಮಂಗಳವಾರ ಭಾರತದಾದ್ಯಂತ ಒಂದು ದಿನದ ಶೋಕಾಚರಣೆಯನ್ನು ಆಚರಿಸಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಿಸಿದೆ.

Advertisement

ರಾಷ್ಟ್ರಧ್ವಜವನ್ನು ಭಾರತದಾದ್ಯಂತ ನಿಯಮಿತವಾಗಿ ಹಾರಿಸುವ ಎಲ್ಲಾ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತದೆ ಮತ್ತು ರಾಜ್ಯದ ಶೋಕಾಚರಣೆಯ ಅವಧಿಯಲ್ಲಿ ಯಾವುದೇ ಅಧಿಕೃತ ಮನರಂಜನೆ ಇರುವುದಿಲ್ಲ.

ಇರಾನ್ ಅಧ್ಯಕ್ಷರು, ವಿದೇಶಾಂಗ ಸಚಿವರು ಮತ್ತು ಇತರ ಹಲವಾರು ಅಧಿಕಾರಿಗಳು ಭಾನುವಾರ ಸಾವನ್ನಪ್ಪಿದ್ದಾರೆ, ಅವರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ದೇಶದ ವಾಯುವ್ಯದ ಮಂಜು, ಪರ್ವತ ಪ್ರದೇಶದಲ್ಲಿ ಪತನಗೊಂದಿದೆ ಎಂದು ಇರಾನ್ ರಾಜ್ಯ ಮಾಧ್ಯಮ ವರದಿ ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next