Advertisement

ತಗ್ಗಲಿದೆ ಇರಾನ್‌ ತೈಲ ಆಮದು 

01:13 PM Sep 15, 2018 | Karthik A |

ಹೊಸದಿಲ್ಲಿ: ಕೇಂದ್ರ ಸರಕಾರ ಇರಾನ್‌ನಿಂದ ಆಮದು ಮಾಡಿಕೊಳ್ಳಲಿರುವ ಕಚ್ಚಾ ತೈಲದ ಪ್ರಮಾಣ ಹಾಲಿ ತಿಂಗಳು ಮತ್ತು ಮುಂದಿನ ತಿಂಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿದೆ. ಈ 2 ತಿಂಗಳಲ್ಲಿ 12 ದಶಲಕ್ಷ ಬ್ಯಾರಲ್‌ಗ‌ಳಿಗಿಂತ ಕಡಿಮೆ ಪ್ರಮಾಣದಲ್ಲಿ ತೈಲ ಭಾರತಕ್ಕೆ ಆಮದಾಗಲಿದೆ. ನ.4ರಿಂದ ಅಮೆರಿಕ ಇರಾನ್‌ ವಿರುದ್ಧ ದಿಗ್ಬಂಧನ ಜಾರಿಗೊಳಿಸುವುದಕ್ಕೆ ಪೂರಕವಾಗಿ ಕೇಂದ್ರ ಈ ಕ್ರಮಕ್ಕೆ ಮುಂದಾಗಿದೆ.

Advertisement

ದಿಗ್ಬಂಧನಕ್ಕೆ ಮಾನ್ಯತೆ ನೀಡದೇ ಇದ್ದರೂ, ಅಮೆರಿಕ ಜತೆಗೆ ಹೊಂದಿರುವ ಬಾಂಧವ್ಯ ವೃದ್ಧಿಗೊಳಿಸಲು ಕೆಲವೊಂದು ಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕಾದ ಪರಿಸ್ಥಿತಿಯಲ್ಲಿ ಕೇಂದ್ರ ಇದೆ. ಇದರ ಹೊರತಾಗಿಯೂ ಅಮೆರಿಕದ ಜತೆ ಇರಾನ್‌ನಿಂದ ತೈಲ ಖರೀದಿ ಬಗ್ಗೆ ವಿನಾಯಿತಿ ಪಡೆದುಕೊಳ್ಳಲು ಟ್ರಂಪ್‌ ಆಡಳಿತದ ಜತೆಗೆ ಮಾತುಕತೆ ನಡೆಸಲು ಸರಕಾರ ಪ್ರಯತ್ನ ನಡೆಸಿದೆ. ಇದೇ ವೇಳೆ, ಇರಾನ್‌ ಮೇಲೆ ಹೇರಿರುವ ನಿರ್ಬಂಧವನ್ನು ಯಾರು ಪಾಲಿಸುತ್ತಿಲ್ಲವೋ, ಅಂಥ ರಾಷ್ಟ್ರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಟ್ರಂಪ್‌ ಆಡಳಿತ ಶುಕ್ರವಾರ ಎಚ್ಚರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next