Advertisement

ವೀಸಾ ನಿಯಮ ಸಡಿಲಿಕೆ ಮಾಡದ್ದಕ್ಕೆ ಭಾರತ ಟೀಕೆ

06:00 AM Jun 21, 2018 | |

ಲಂಡನ್‌: ಅಕ್ರಮ ವಲಸಿಗರ ವಾಪಸಾತಿಗೆ ಸಂಬಂಧಿಸಿದ ಒಪ್ಪಂದಕ್ಕೆ ಭಾರತ ಸಹಿ ಹಾಕಿಲ್ಲ ಎಂಬ ಅಂಶವನ್ನು ವೀಸಾ ನೀತಿ ಸಡಿಲಗೊಳಿಸದಿರುವುದಕ್ಕೆ ಸಂಬಂಧ ಕಲ್ಪಿಸಿರುವುದು ಸರಿಯಲ್ಲ ಎಂದು ಇಂಗ್ಲೆಂಡ್‌ಗೆ ಭಾರತ ತಿಳಿಸಿದೆ. ಕೆಲವು ದಿನಗಳ ಹಿಂದಷ್ಟೇ ವೀಸಾ ನೀತಿಯನ್ನು ಮರುಪರಿಶೀಲಿಸಿದ್ದ ಬ್ರಿಟನ್‌, ಭಾರತೀಯ ವಿದ್ಯಾರ್ಥಿಗಳಿಗೆ ವೀಸಾ ನೀಡುವಿಕೆಯಲ್ಲಿ ಯಾವುದೇ ಸಡಿಲಿಕೆ ಮಾಡಿರಲಿಲ್ಲ. ಈ ಬಗ್ಗೆ ಮಾತನಾಡಿದ ಬ್ರಿಟನ್‌ನ ಅಂತಾರಾಷ್ಟ್ರೀಯ ವ್ಯವಹಾರಗಳ ಸಚಿವ ಸಚಿವ ಲಿಯಾಮ್‌ ಫಾಕ್ಸ್‌, ಅಕ್ರಮ ವಲಸಿಗರ ಸಮಸ್ಯೆ ಭಾರತದೊಂದಿಗೆ ಬಗೆಹರಿಯದಿರುವುದರಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದಿದ್ದರು. 

Advertisement

ಒಂದು ಲಕ್ಷ ಜನರು ಇಂಗ್ಲೆಂಡ್‌ನ‌ಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದಾರೆ ಎಂದು ಇಂಗ್ಲೆಂಡ್‌ ಹೇಳಿದೆ. ಆದರೆ ಭಾರತಕ್ಕೆ ರವಾನಿಸಿದ ದತ್ತಾಂಶಗಳಿಗೆ‌ ಈ ಅಂಕಿಸಂಖ್ಯೆ ಹೊಂದಾಣಿಕೆಯಾಗುತ್ತಿಲ್ಲ ಎಂದು ಭಾರತೀಯ ಹೈ ಕಮಿಷನರ್‌ ವೈ.ಕೆ.ಸಿನ್ಹಾ ಹೇಳಿದ್ದಾರೆ.
 

Advertisement

Udayavani is now on Telegram. Click here to join our channel and stay updated with the latest news.

Next