Advertisement

ಸುದೀರ್‌ಮನ್‌ ಕಪ್‌ ಬ್ಯಾಡ್ಮಿಂಟನ್‌: ಭಾರತದ ಸವಾಲು ಅಂತ್ಯ

10:48 AM May 27, 2017 | |

ಸಿಡ್ನಿ: ಸುದೀರ್‌ಮನ್‌ ಕಪ್‌ ಬ್ಯಾಡ್ಮಿಂಟನ್‌ ಕೂಟದಲ್ಲಿ ಚೀನ ವಿರುದ್ಧ ಭಾರತ 0-3 ಅಂತರದಿಂದ ಸೋಲು ಕಂಡಿದೆ. ಇದರೊಂದಿಗೆ ಕೂಟದಲ್ಲಿ ಭಾರತದ ಸವಾಲು ಅಂತ್ಯಗೊಂಡಿದೆ. 

Advertisement

ಮಿಕ್ಸೆಡ್‌ ಡಬಲ್ಸ್‌ ವಿಭಾಗದಲ್ಲಿ ಅಶ್ವಿ‌ನಿ ಪೊನ್ನಪ್ಪ – ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ 16-21, 21-13, 21-16 ಗೇಮ್‌ಗಳ ಅಂತರದಿಂದ ಚೀನದ ವಿಶ್ವದ ಎರಡನೇ ರ್‍ಯಾಂಕಿನ ಲು ಕಾಯ್‌ – ಹುವಾಂಗ್‌ ಯಾಕ್ವಿಯಾಂಗ್‌ ಅವರೆದುರು ಶರಣಾದರು.  

ಪುರುಷರ ಸಿಂಗಲ್ಸ್‌ ಪಂದ್ಯದಲ್ಲಿ ಶ್ರೀಕಾಂತ್‌ 16-21, 17-21 ಅಂತರದಿಂದ ಒಲಿಂಪಿಕ್‌ ಚಾಂಪಿಯನ್‌ ಚೆನ್‌ ಲಾಂಗ್‌ ವಿರುದ್ಧ ಸೋಲು ಕಂಡರು. ಒಟ್ಟು 48 ನಿಮಿಷಗಳ ಹೋರಾಟದಲ್ಲಿ ಶ್ರೀಕಾಂತ್‌ ಶರಣಾದರು. ಪುರುಷರ ಡಬಲ್ಸ್‌ ಪಂದ್ಯದಲ್ಲೂ ಭಾರತದಿಂದ ನೀರಸ ಆಟ ಹೊರಹೊಮ್ಮಿತು.  ಸಾತ್ವಿಕ್‌ ಸಾಯಿರಾಜ್‌ – ಚಿರಾಗ್‌ ಶೆಟ್ಟಿ ಒಳಗೊಂಡ ತಂಡ 9-21, 11-21 ಗೇಮ್‌ಗಳ ಅಂತರದಿಂದ ಹಾಯ್‌ ಫೆಂಗ್‌-ಝಾಂಗ್‌ ನಾನ್‌ ವಿರುದ್ಧ ಸೋತಿತು.

Advertisement

Udayavani is now on Telegram. Click here to join our channel and stay updated with the latest news.

Next