Advertisement

Covid 19 Updates: ಕಳೆದ 24 ಗಂಟೆಯಲ್ಲಿ 16,922 ಕೋವಿಡ್ ಪ್ರಕರಣ ಪತ್ತೆ, 418 ಸಾವು

01:11 PM Jun 25, 2020 | Nagendra Trasi |

ನವದೆಹಲಿ:ದೇಶಾದ್ಯಂತ ಕೋವಿಡ್ 19 ಕ್ಷಿಪ್ರವಾಗಿ ಹರಡತೊಡಗಿದ್ದು, ದಿನೇ, ದಿನೇ ಪ್ರಕರಣಗಳ ಸಂಖ್ಯೆ ಏರತೊಡಗಿದೆ. ಕಳೆದ 24ಗಂಟೆಯಲ್ಲಿ 16,922 ಕೋವಿಡ್ ಪ್ರಕರಣ ಪತ್ತೆಯಾಗಿದ್ದು, 418 ಮಂದಿ ಸಾವನ್ನಪ್ಪಿದ್ದಾರೆ. ಇದರೊಂದಿಗೆ ದೇಶದಲ್ಲಿ ಕೋವಿಡ್ 19 ಸೋಂಕು ಪೀಡಿತರ ಸಂಖ್ಯೆ 4,73,105ಕ್ಕೆ ತಲುಪಿದೆ. ಸಾವಿನ ಸಂಖ್ಯೆ 14,894ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

Advertisement

ಈವರೆಗೆ ಕೋವಿಡ್ 19 ಸೋಂಕಿನಿಂದ 2,58,684 ಮಂದಿ ಗುಣಮುಖರಾಗಿದ್ದಾರೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶದ ಪ್ರಕಾರ ಶೇ.56.70% ಚೇತರಿಕೆಯಾಗುತ್ತಿರುವುದಾಗಿ ತಿಳಿಸಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮಂಗಳವಾರ ಬರೋಬ್ಬರಿ 3,947 ಕೋವಿಡ್ 19 ಪ್ರಕರಣ ವರದಿಯಾಗಿದೆ. ದಿಲ್ಲಿಯಲ್ಲಿ ಶುಕ್ರವಾರ ಮತ್ತು ಶನಿವಾರ ಮೂರು ಸಾವಿರಕ್ಕಿಂತ ಅಧಿಕ ಪ್ರಕರಣ ವರದಿಯಾಗತೊಡಗಿದೆ. ಜೂನ್ 24ರವರೆಗೆ 2,07,871 ಮಂದಿಗೆ ಕೋವಿಡ್ 19 ಪರೀಕ್ಷೆ ನಡೆಸಲಾಗಿದೆ. ಐಸಿಎಂಆರ್ ಈವರೆಗೆ 75,60,782 ಜನರಿಗೆ ಕೋವಿಡ್ 19 ಪರೀಕ್ಷೆ ನಡೆಸಿದೆ ಎಂದು ವರದಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next