ಕೊಲೊಂಬೋ: ಶ್ರೀಲಂಕಾ ರಾಜಧಾನಿ ಕೊಲೊಂಬೋ ಬಂದರಿನಲ್ಲಿ ಇತ್ತೀಚೆಗೆ ಬಹುಕೋಟಿ ಡಾಲರ್ ಮೊತ್ತದ ಹೂಡಿಕೆ ಮಾಡಿತ್ತು. ಅದಕ್ಕೆ ಪ್ರತಿಯಾಗಿ ಭಾರತ ಕೂಡ ಅಲ್ಲಿಯೇ 5,189 ಕೋಟಿ ರೂ. ಮೊತ್ತದ ಬಂಡವಾಳ ಹೂಡಿಕೆ ಮಾಡಲು ಮುಂದಾಗಿದೆ.
ಭಾರತದ ಪ್ರಮುಖ ಉದ್ದಿಮೆ ಸಂಸ್ಥೆ ಅದಾನಿ ಗ್ರೂಪ್ 5,189 ಕೋಟಿ ರೂ. (700 ಮಿಲಿಯನ್ ಅಮೆರಿಕನ್ ಡಾಲರ್) ವೆಚ್ಚದಲ್ಲಿ ಜೆಟ್ಟಿ ನಿರ್ಮಿಸಲಿದೆ ಈ ಮೂಲಕ ಹೂಡಿಕೆ ನೆಪದಲ್ಲಿ ದ್ವೀಪ ರಾಷ್ಟ್ರವನ್ನು ಕೈವಶ ಮಾಡಿಕೊಳ್ಳುವ ಸಂಚು ಹೂಡಿರುವ ಡ್ರ್ಯಾಗನ್‌ಗೆ ಪಾಠ ಕಲಿಸಲು ಭಾರತ ಸರ್ಕಾರ ಮುಂದಾಗಿದೆ.
ಲಂಕೆಯ ಜಾನ್ ಕೀಲ್ಸ್ ಸಂಸ್ಥೆ ಹಾಗೂ ಬಂದರು ಪ್ರಾಧಿಕಾರದೊಂದಿಗೆ ಸೇರಿಕೊಂಡು ಅದಾನಿ ಗ್ರೂಪ್ ಸುಮಾರು 1.4 ಕಿ.ಮೀ ಉದ್ದದ ಹಾಗೂ 20 ಮೀಟರ್ ಆಳದ ಕಂಟೇನರ್ ಜೆಟ್ಟಿ ನಿರ್ಮಿಸಲಿದೆ. ಯೋಜನೆಯ ಮೊದ ಲನೇ ಹಂತವಾಗಿ ಇನ್ನೆರೆಡು ವರ್ಷಗಳಲ್ಲಿ 600 ಮೀಟರ್ ಉದ್ದದ ಟರ್ಮಿನಲ್ ನಿರ್ಮಿಸಲಾಗುತ್ತದೆ. ಗಮನಾರ್ಹ ಅಂಶವೆಂದರೆ ಚೀನಾ ನಿರ್ಮಾಣ ಮಾಡಲಿರುವ ಜೆಟ್ಟಿಯ ಪಕ್ಕದಲ್ಲಿಯೇ ಅದಾನಿ ಗ್ರೂಪ್ ಕಾಮಗಾರಿ ನಡೆಸಲಿದೆ.
ಇದನ್ನೂ ಓದಿ:ರಾಜಸ್ಥಾನ ಸಿಎಂ ಗೆಹ್ಲೋಟ್ ನನ್ನ ಸ್ನೇಹಿತ; ಪ್ರಧಾನಿ ಶ್ಲಾಘನೆ
ಈ ಬಗ್ಗೆ ಹೇಳಿಕೆ ನೀಡಿರುವ ಲಂಕೆಯ ಬಂದರು ಪ್ರಾಧಿಕಾರ ದ್ವೀಪ ರಾಷ್ಟ್ರ ಬಂದರು ಕ್ಷೇತ್ರದಲ್ಲಿ ಮಾಡಿಕೊಂಡ ಅತಿದೊಡ್ಡ ಹೂಡಿಕೆ ಎಂದು ಶುಕ್ರವಾರ ತಿಳಿಸಿದೆ.